For Quick Alerts
ALLOW NOTIFICATIONS  
For Daily Alerts
 

GT vs MI: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ಈ ಆಟಗಾರರನ್ನು ಆರಿಸಿಕೊಳ್ಳಿ

IPL 2023: Mumbai Indians vs Gujarat Titans dream team prediction and probable playing 11

ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 35ನೇ ಪಂದ್ಯ ಇಂದು ( ಏಪ್ರಿಲ್ 25 ) ನಡೆಯುತ್ತಿದ್ದು, ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಇತ್ತಂಡಗಳ ನಡುವಿನ ಈ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾತ್ರಿ 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ಎರಡೂ ತಂಡಗಳೂ ಸಹ ತಲಾ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕಿಂತ ಗುಜರಾಟ್ ಟೈಟನ್ಸ್ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿದೆ.

ಟೂರ್ನಿಯ ಆರಂಭದಲ್ಲಿ ಸೋತು ಮಂಕಾಗಿದ್ದ ಮುಂಬೈ ಇಂಡಿಯನ್ಸ್ ಇತ್ತೀಚಿನ ಪಂದ್ಯಗಳಲ್ಲಿ ಗೆದ್ದಿದ್ದು ಕಮ್‌ಬ್ಯಾಕ್ ಮಾಡಿದೆ. ಇನ್ನು ಐಪಿಎಲ್ ಇತಿಹಾಸದಲ್ಲಿ ಈ ಎರಡೂ ತಂಡಗಳು ಒಟ್ಟು ಎರಡು ಪಂದ್ಯಗಳಲ್ಲಿ ಮಾತ್ರ ಪರಸ್ಪರ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾಟ್ ಟೈಟನ್ಸ್ ವಿರುದ್ಧ 5 ರನ್‌ಗಳ ಗೆಲುವನ್ನು ಕಂಡಿತ್ತು.

ಈ ಪಂದ್ಯ ಇತ್ತಂಡಗಳ ನಡುವಿನ ಎರಡನೇ ಮುಖಾಮುಖಿಯಾಗಿದೆ. ಗುಜರಾತ್ ಟೈಟನ್ಸ್ ತಂಡ ಈ ಬಾರಿಯ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಗೆದ್ದು 2 ಪಂದ್ಯಗಳಲ್ಲಿ ಸೋತು 8 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಮುಂಬೈ ಇಂಡಿಯನ್ಸ್ ಆಡಿರುವ 6 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಗೆದ್ದು, 3 ಪಂದ್ಯಗಳಲ್ಲಿ ಸೋತು 6 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಇನ್ನು ಈ ಎರಡು ತಂಡಗಳ ನಡುವಿನ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂಬ ಲೆಕ್ಕಾಚಾರಗಳು ಹೆಚ್ಚಾಗಿದ್ದು, ಫ್ಯಾಂಟಸಿ ಕ್ರಿಕೆಟ್ ಪ್ರಿಯರು ತಮ್ಮ ಡ್ರೀಮ್ ಟೀಮ್‌ನಲ್ಲಿ ಯಾವ ಆಟಗಾರರನ್ನು ಆರಿಸಿಕೊಂಡರೆ ಗೆಲ್ಲಬಹುದು ಎಂಬ ಚರ್ಚೆಯಲ್ಲಿದ್ದಾರೆ. ಹೀಗೆ ಡ್ರೀಮ್ ಟೀಮ್ ರಚಿಸುವವರು ಈ ಕೆಳಕಂಡಂತೆ ತಂಡಗಳನ್ನು ರಚಿಸಿದರೆ ಉತ್ತಮ ಎನ್ನಬಹುದು.

ಡ್ರೀಮ್ ಟೀಮ್ 1: ವಿಕೆಟ್ ಕೀಪರ್ - ಇಶಾನ್ ಕಿಶನ್, ವೃದ್ಧಿಮಾನ್ ಸಹಾ

ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್ (ಉಪನಾಯಕ)ತಿಲಕ್ ವರ್ಮಾ

ಆಲ್‌ರೌಂಡರ್‌ಗಳು - ಹಾರ್ದಿಕ್ ಪಾಂಡ್ಯ, ಕ್ಯಾಮರೂನ್ ಗ್ರೀನ್ (ನಾಯಕ)

ಬೌಲರ್‌ಗಳು - ಪಿಯೂಷ್ ಚಾವ್ಲಾ, ಮೊಹಮ್ಮದ್ ಶಮಿ, ರಶೀದ್ ಖಾನ್

ಡ್ರೀಮ್ ಟೀಮ್ 2 : ವಿಕೆಟ್ ಕೀಪರ್ - ಇಶಾನ್ ಕಿಶನ್, ವೃದ್ಧಿಮಾನ್ ಸಹಾ

ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್

ಆಲ್‌ರೌಂಡರ್‌ಗಳು - ಹಾರ್ದಿಕ್ ಪಾಂಡ್ಯ (ನಾಯಕ), ಕ್ಯಾಮರೂನ್ ಗ್ರೀನ್ (ಉಪನಾಯಕ)

ಬೌಲರ್‌ಗಳು - ಪಿಯೂಷ್ ಚಾವ್ಲಾ, ಮೊಹಮ್ಮದ್ ಶಮಿ, ರಶೀದ್ ಖಾನ್, ಜೇಸನ್ ಬೆಹ್ರೆಂಡಾರ್ಫ್

ಸಂಭಾವ್ಯ ಆಡುವ ಬಳಗಗಳು:

ಮುಂಬೈ ಇಂಡಿಯನ್ಸ್ ಸಂಭಾವ್ಯ್ ಆಡುವ ಬಳಗ: ಇಶಾನ್ ಕಿಶನ್, ರೋಹಿತ್ ಶರ್ಮಾ (ನಾಯಕ), ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ತಿಲಕ್ ವರ್ಮಾ, ಅರ್ಜುನ್ ತೆಂಡೂಲ್ಕರ್, ಜೋಫ್ರಾ ಆರ್ಚರ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್

ಗುಜರಾತ್ ಟೈಟನ್ಸ್ ಸಂಭಾವ್ಯ ಆಡುವ ಬಳಗ: ಶುಭಮನ್ ಗಿಲ್, ವೃದ್ಧಿಮಾನ್ ಸಹಾ, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್-ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಮೋಹಿತ್ ಶರ್ಮಾ

Story first published: Tuesday, April 25, 2023, 16:52 [IST]
Other articles published on Apr 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+