For Quick Alerts
ALLOW NOTIFICATIONS  
For Daily Alerts
 

ಮಧ್ವಲ್ ಮ್ಯಾಜಿಕ್‌ಗೆ ಲಕ್ನೋ ಗಪ್‌ಚುಪ್!: LSG ಹೋರಾಟ ಅಂತ್ಯ, MI 6ನೇ ಟ್ರೋಫಿ ಕನಸು ಜೀವಂತ

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಫೈನಲ್‌ಗೇರುವ ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದರೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇಆಫ್ ಹಂತದಲ್ಲಿ ತನ್ನ ಹೋರಾಟವನ್ನು ಕೊನೆಗೊಳಿಸಿದೆ.

ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ನೀಡಿದ್ದ 183 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭದಿಂದಲೇ ಹಿನ್ನಡೆಯನ್ನು ಅನುಭವಿಸಿತು. ಎರಡನೇ ಓವರ್‌ನಲ್ಲಿಯೇ ಪ್ರೇರಕ್ ಮಂಖಡ್ ವಿಕೆಟ್ ಕಳೆದುಕೊಂದರೆ ಕೇಲ್ ಮೇಯರ್ಸ್ ಕೂಡ 18 ರನ್‌ಗಳ ಕೊಡುಗೆ ನಿಡಿ ವಿಕೆಟ್ ಕಳೆದುಕೊಂಡರು. ನಾಯಕ ಕೃನಾಲ್ ಪಾಂಡ್ಯ ಈ ಪಂದ್ಯದಲ್ಲಿ 11 ಎಸೆತಗಳಲ್ಲಿ 8 ರನ್‌ಗಳಿಸಿ ಔಟಾದರು.

IPL 2023: Mumbai Indians win against Lucknow super Giants by 81 runs in eliminator match

ಆದರೆ ಮಾರ್ಕಸ್ ಸ್ಟೋಯ್ನಿಸ್ ಮಾತ್ರ ಈ ಪಂದ್ಯದಲ್ಲಿಯೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಮುಂಬೈ ದಾಳಿಗೆ ಆಕ್ರಮಣಕಾರಿಯಾಗಿ ಉತ್ತರ ನಿಡಲು ಆರಂಭಿಸಿದರು. ಆದರೆ ಮತ್ತೊಂದು ತುದಿಯಲ್ಲಿ ವಿಕೆಟ್ ಪಡೆಯುವುದನ್ನು ಮುಂಬೈ ಇಂಡಿಯನ್ಸ ತಂಡ ಮುಂದುವರಿಸಿತ್ತು. ಆಯುಶ್ ಬದೋನಿ, ನಿಕೋಲಸ್ ಪೂರನ್ ಬಂದಹಾಗೆಯೇ ವಾಪಸಾದರು. ಬದೋನಿ 1 ರನ್‌ಗಳಿಸಿದರೆ ಪೂರನ್ ಶೂನ್ಯ ಸುತ್ತಿದರು. ನಂತರ 27 ಎಸೆತಗಳಲ್ಲಿ 40 ರನ್ ಬಾರಿಸಿದ್ದ ಮಾರ್ಕಸ್ ಸ್ಟೋಯ್ನಿಸ್ ರನೌಟ್‌ಗೆ ಬಲಿಯಾದರು.

ಅದಾದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬ್ಯಾಟರ್‌ಗಳು ಮುಂಬೈ ಬೌಲರ್‌ಗಳಿಗೆ ಸುಲಭ ತುತ್ತಾದರು. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಮತ್ತೆರಡು ವಿಕೆಟ್‌ಗಳನ್ನು ರನೌಟ್ ಮಾಡುವ ಮೂಲಕ ಕಬಳಿಸಿತು ಈ ಮೂಲಕ ಈ ಪಂದ್ಯದಲ್ಲಿ ಒಟ್ಟು ಮೂರು ರನೌಟ್‌ಗಳನ್ನು ಆಡುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಫೀಲ್ಡಿಂಗ್‌ನಲ್ಲಿಯೂ ಭರ್ಜರಿ ಪ್ರದರ್ಶನ ನೀಡಿದೆ. ಅಂತಿಮವಾಗಿ 16.3 ಓವರ್‌ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 101 ರನ್‌ಗಳಿಸಿ ಆಲೌಟ್ ಆಯಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಮೊದಲ ಆರಂಬಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ವಿಕೆಟನ್ನು ಅಲ್ಪಮೊತ್ತಕ್ಕೆ ಕಳೆದುಕೊಂಡಿತಾದರೂ ಕ್ಯಾಮರೂನ್ ಗ್ರೀನ್ ಹಾಗೂ ಸೂರ್ಯಕುಮಾರ್ ಯಾದವ್ ತಂಡಕ್ಕೆ ಅದ್ಭುತ ಜೊತೆಯಾಟ ನೀಡಿದರು. ಹೀಗಾಗಿ ಮೊದಲ ಹತ್ತು ಓವರ್‌ಗಳ ಅಂತ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸ್ಕೋರ್ ಅದ್ಭುತವಾಗಿತ್ತು. ಆದರೆ 10.4 ಓವರ್ ಆಗುವಷ್ಟರಲ್ಲಿ ಸೂರ್ಯಕುಮಾರ್ ಯಾದವ್ 20 ಎಸೆತಗಳಲ್ಲಿ 33 ರನ್‌ಗಳಿಸಿದ್ದಾಗ ವಿಕೆಟ್ ಕಳೆದುಕೊಂಡರು. ಈ ಹಂತದಲ್ಲಿ ಮುಂಬೈ ಇಂಡಿಯನ್ಸ್ ತಂಡ 104 ರನ್‌ಗೆ 3 ವಿಕೆಟ್ ಕಳೆದುಕೊಂಡಿತು.

ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಂಡ ಅದೇ ಓವರ್‌ನಲ್ಲಿ ಕ್ಯಾಮರೂನ್ ಗ್ರೀನ್ ಕೂಡ 23 ಎಸೆತಗಳಲ್ಲಿ 41 ರನ್‌ಗಳಿಸಿದ ಬಳಿಕ ವಿಕೆಟ್ ಕಳೆದುಕೊಂಡರು. ಬಳಿಕ ನೇಹಲ್ ವಧೇರಾ 12 ಎಸೆತಗಳಲ್ಲಿ 23 ರನ್‌ಗಳಿಸಿ ರನ್ ವೇಗವನ್ನು ಹೆಚ್ಚಿಸಿದರು. ಈ ಮೂಲಕ ನಿಗದಿತ 20 ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ಕಳೆದುಕೊಂಡು 182 ರನ್‌ಗಳನ್ನು ಗಳಿಸಿದೆ.

ಲಕ್ನೋ ಸೂಪರ್ ಜೈಂಟ್ಸ್ ಆಡುವ ಬಳಗ: ಆಯುಷ್ ಬಡೋನಿ, ದೀಪಕ್ ಹೂಡಾ, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ (ನಾಯಕ), ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಯಶ್ ಠಾಕೂರ್, ಮೊಹ್ಸಿನ್ ಖಾನ್

ಬೆಂಚ್: ಕೈಲ್ ಮೇಯರ್ಸ್, ಡೇನಿಯಲ್ ಸಾಮ್ಸ್, ಯುದ್ವೀರ್ ಸಿಂಗ್ ಚರಕ್, ಸ್ವಪ್ನಿಲ್ ಸಿಂಗ್, ಅಮಿತ್ ಮಿಶ್ರಾ, ಕ್ವಿಂಟನ್ ಡಿ ಕಾಕ್, ಕರಣ್ ಶರ್ಮಾ, ಕರುಣ್ ನಾಯರ್, ಮನನ್ ವೋಹ್ರಾ, ಮಾರ್ಕ್ ವುಡ್, ಅವೇಶ್ ಖಾನ್, ರೊಮಾರಿಯೋ ಶೆಫರ್ಡ್, ಅರ್ಪಿತ್ ಗುಲೇರಿಯಾ, ಸೂರ್ಯಾಂಶ್ ಶೆಡ್ಜ್

ಮುಂಬೈ ಇಂಡಿಯನ್ಸ್ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ತಿಲಕ್ ವರ್ಮಾ, ಕ್ರಿಸ್ ಜೋರ್ಡಾನ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಧ್ವಲ್
ಬೆಂಚ್: ರಮಣದೀಪ್ ಸಿಂಗ್, ವಿಷ್ಣು ವಿನೋದ್, ನೆಹಾಲ್ ವಧೇರಾ, ಕುಮಾರ್ ಕಾರ್ತಿಕೇಯ, ಸಂದೀಪ್ ವಾರಿಯರ್, ಟ್ರಿಸ್ಟಾನ್ ಸ್ಟಬ್ಸ್, ರಿಲೆ ಮೆರೆಡಿತ್, ಶಮ್ಸ್ ಮುಲಾನಿ, ಅರ್ಜುನ್ ತೆಂಡೂಲ್ಕರ್, ದುವಾನ್ ಜಾನ್ಸೆನ್, ಅರ್ಷದ್ ಖಾನ್, ಡೆವಾಲ್ಡ್ ಬ್ರೆವಿಸ್, ರಾಘವ್ ಗೋಯಲ್

Story first published: Wednesday, May 24, 2023, 23:40 [IST]
Other articles published on May 24, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+