Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಮತ್ತೆ ಸುದ್ದಿಯಾದ ನವೀನ್ ಉಲ್ ಹಕ್: ರೋಹಿತ್, ಸೂರ್ಯ ವಿಕೆಟ್ ಪಡೆದ ಅಫ್ಘನ್ ವೇಗಿ ಮಾಡಿದ್ದೇನು!: ವಿಡಿಯೋ

ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್ ಉಲ್ ಹಕ್ ಈ ಬಾರಿಯ ಐಪಿಎಲ್‌ನಲ್ಲಿ ಮತ್ತೆ ಮತ್ತೆ ಸುದ್ದಿಯಾಗಿತ್ತಿದ್ದಾರೆ. ಆದರೆ ಆಟಕ್ಕಿಂತಲೂ ಇತರ ಕಾರಣಗಳಿಗಾಗಿಯೇ ಈ ಯುವ ವೇಗಿ ಸುದ್ದಿಯಾಗುತ್ತಿರುವುದು ವಿಪರ್ಯಾಸ. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ನವೀನ್ ಉಲ್ ಹಕ್ ಬೌಲಿಂಗ್‌ನಲ್ಲಿ ಮಿಂಚಿದರೂ ಮತ್ತೆ ವಿಚಿತ್ರ ಸೆಲೆಬ್ರೇಷನ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ನವೀನ್ ಉಲ್ ಹಕ್ ಕಳೆದ ಎರಡು ಪಂದ್ಯಗಳಲ್ಲಿ ಬೌಲಿಂಗ್‌ನಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದರು. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ರೋಹಿತ್ ಬಳಗಕ್ಕೆ ಆಘಾತ ನೀಡಿದರು. ಆದರೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ವಿಕೆಟ್ ಪಡೆದ ಬಳಿಕ ನವೀನ್ ಉಲ್ ಹಕ್ ಕಿವಿ ಮುಚ್ಚಿ ಸಂಭ್ರಮಿಸಿದ್ದಾರೆ. ಕೆಎಲ್ ರಾಹುಲ್ ಕೂಡ ಶತಕ ಗಳಿಸುವಾಗ ಈ ರೀತಿಯಾಗಿ ಸಂಭ್ರಮಾಚರಿಸುವುದನ್ನು ನೆನಪಿಸಬಹುದು.

IPL 2023: Naveen-ul-Haq Celebrate Rohit Sharma and Suryakumar Yadav Wicket with shut-the-noise celebration

ಈ ಪಂದ್ಯದಲ್ಲಿ ನವೀನ್ ಉಲ್ ಹಕ್ ತಮ್ಮ ಮೊದಲ ಓವರ್‌ನಲ್ಲಿಯೇ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ವಟ್ ಮಾಡಿದರು. ಈ ಸಂದರ್ಭದಲ್ಲಿ ಕಿವಿಗಳನ್ನು ಮುಚ್ಚಿದ್ದಲ್ಲದೆ ಬಳಿಕ ಜರ್ಸಿಯ ಕಾಲರ್ ಎತ್ತಿ ವಿಚಿತ್ರವಾಹಿ ಸಂಭ್ರಮಿಸಿದ್ದಾರೆ. ಈ ಮೂಲಕ ನವೀನ್ ಉಲ್ ಹಕ್ ಯಾವ ಸಂದೇಶ ನೀಡುತ್ತಿದ್ದಾರೆ ಎಂಬುದು ಕ್ರಿಕೆಟ್ ಅಭಿಮಾನಿಗಳಿಗೆ ಅರ್ಥವಾಗಿಲ್ಲ.

ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡ ಬಳಿಕ ಮುಂಬೈ ಇಂಡಿಯನ್ಸ್ ಪರವಾಗಿ ಕ್ಯಾಮರೂನ್ ಗ್ರೀನ್ ಹಾಗೂ ಸೂರ್ಯಕುಮಾರ್ ಯಾದವ್ ಸ್ಪೋಟಕ ಜೊತೆಯಾಟ ನೀಡಿ ಮಿಂಚಿದರು. ಈ ಜೋಡಿ 6.2 ಓವರ್‌ಗಳಲ್ಲಿ 66 ರನ್‌ಗಳ ಜೊತೆಯಾಟ ನೀಡಿದ್ದಾರೆ. ಆದರೆ ಈ ಇಬ್ಬರು ಆಟಗಾರರನ್ನು ಕೂಡ ನವೀನ್ ಉಲ್ ಹಲ್ 11ನೇ ಓವರ್‌ನಲ್ಲಿ ಔಟ್ ಆಡುವಲ್ಲಿ ಯಶಸ್ವಿಯಾದರು. ಇನ್ನು ಸೂರ್ಯಕುಮಾರ್ ಯಾದವ್ ಹಾಗೂ ಗ್ರೀನ್ ವಿಕೆಟನ್ನು ಕೂಡ ನವೀನ್ ಉಲ್ ಹಕ್ ಇದೇ ಮಾದರಿಯಲ್ಲಿ ಸಂಭ್ರಮಿಸಿದ್ದಾರೆ.

ಇನ್ನು ನವೀನ್ ಉಲ್ ಹಕ್ ಅವರ ಈ ಸಂಭ್ರಮಾಚರಣೆಯ ಬಗ್ಗೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕಾಮೆಂಟರಿ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ. "ಆತನಿಗೆ ಪ್ರೇಕ್ಷಕರಿಂದ ಏನೋ ಸಮಸ್ಯೆಯಿರಬೇಕು. ವಿಕೆಟ್‌ಗಳು ಪಡೆದಾಗ ಕಿವಿ ಬಿಟ್ಟು ಸಂಭ್ರಮಿಸಬೇಕು. ಯಾಕೆಂದರೆ ಪ್ರೇಕ್ಷಕರ ಕರತಾಡನವನ್ನು ನೀವು ಕೇಳಿಸಿಕೊಳ್ಳಬೇಕು. ಯಾರಾದರೂ ಶತಕ ಬಾರಿಸಿದಾಗಲೂ ಕಿವಿ ಮುಚ್ಚಮಾರದು. ಚಪ್ಪಾಳೆಯ ಸದ್ದನ್ನು ಕೇಳಿಸಿಕೊಳ್ಳಬೇಕು" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಮೊದಲ ಆರಂಬಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ವಿಕೆಟನ್ನು ಅಲ್ಪಮೊತ್ತಕ್ಕೆ ಕಳೆದುಕೊಂಡಿತಾದರೂ ಕ್ಯಾಮರೂನ್ ಗ್ರೀನ್ ಹಾಗೂ ಸೂರ್ಯಕುಮಾರ್ ಯಾದವ್ ತಂಡಕ್ಕೆ ಅದ್ಭುತ ಜೊತೆಯಾಟ ನೀಡಿದರು. ಹೀಗಾಗಿ ಮೊದಲ ಹತ್ತು ಓವರ್‌ಗಳ ಅಂತ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸ್ಕೋರ್ ಅದ್ಭುತವಾಗಿತ್ತು. ಆದರೆ 10.4 ಓವರ್ ಆಗುವಷ್ಟರಲ್ಲಿ ಸೂರ್ಯಕುಮಾರ್ ಯಾದವ್ 20 ಎಸೆತಗಳಲ್ಲಿ 33 ರನ್‌ಗಳಿಸಿದ್ದಾಗ ವಿಕೆಟ್ ಕಳೆದುಕೊಂಡರು. ಈ ಹಂತದಲ್ಲಿ ಮುಂಬೈ ಇಂಡಿಯನ್ಸ್ ತಂಡ 104 ರನ್‌ಗೆ 3 ವಿಕೆಟ್ ಕಳೆದುಕೊಂಡಿತು.

ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಂಡ ಅದೇ ಓವರ್‌ನಲ್ಲಿ ಕ್ಯಾಮರೂನ್ ಗ್ರೀನ್ ಕೂಡ 23 ಎಸೆತಗಳಲ್ಲಿ 41 ರನ್‌ಗಳಿಸಿದ ಬಳಿಕ ವಿಕೆಟ್ ಕಳೆದುಕೊಂಡರು. ಬಳಿಕ ನೇಹಲ್ ವಧೇರಾ 12 ಎಸೆತಗಳಲ್ಲಿ 23 ರನ್‌ಗಳಿಸಿ ರನ್ ವೇಗವನ್ನು ಹೆಚ್ಚಿಸಿದರು. ಈ ಮೂಲಕ ನಿಗದಿತ 20 ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ಕಳೆದುಕೊಂಡು 182 ರನ್‌ಗಳನ್ನು ಗಳಿಸಿದೆ.

Story first published: Wednesday, May 24, 2023, 22:37 [IST]
Other articles published on May 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+