CSK vs PBKS: 18 ವರ್ಷದ ಶೈಕ್ ರಶೀದ್ ಹಿಡಿದ ಕ್ಯಾಚ್ ನೋಡಿ 'ಚೆನ್ನೈ ಫಿಕ್ಸರ್ ಕಿಂಗ್ಸ್' ಎಂದ ನೆಟ್ಟಿಗರು!

ನಿನ್ನೆ ( ಏಪ್ರಿಲ್ 30 ) ತಿಂಗಳ ಕೊನೆಯ ದಿನ ಭಾನುವಾರವಾದ ಕಾರಣ ಎರಡು ಪಂದ್ಯಗಳು ಜರುಗಿದವು. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿ ಪಂಜಾಬ್ ಕಿಂಗ್ಸ್ ಜಯ ಸಾಧಿಸಿದರೆ, ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಕಂಡಿದೆ.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನದೇ ತವರು ನೆಲದ ಎಂಎ ಚಿದಂಬರಂ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೋಲನ್ನು ಕಂಡಿದೆ. ಕೊನೆಯ ಎಸೆತದವರೆಗೂ ನಡೆದ ಈ ರೋಚಕ ಹಣಾಹಣಿಯಲ್ಲಿ ಗೆದ್ದ ಪಂಜಾಬ್ ಕಿಂಗ್ಸ್ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದೆ.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಡಿವಾನ್ ಕಾನ್ವೆ ಅಬ್ಬರದ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿ ಎದುರಾಳಿ ಪಂಜಾಬ್ ಕಿಂಗ್ಸ್ ತಂಡಕ್ಕೆ 201 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಕೊನೆಯ ಎಸೆತದವರೆಗೂ ಹೋರಾಡಿ ಬೆನ್ನತ್ತಿದ ಪಂಜಾಬ್ ಕಿಂಗ್ಸ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು.
ಗುರಿ ಬೆನ್ನತ್ತಿದ್ದ ಪಂಜಾಬ್ ಕಿಂಗ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟನ್ ಹಾಗೂ ಜಿತೇಶ್ ಶರ್ಮಾ ಅಬ್ಬರಿಸಿದ ಕಾರಣ ಪಂಜಾಬ್ ಕಿಂಗ್ಸ್ ಗೆಲುವಿನ ಸನಿಹಕ್ಕೆ ಬಂದಿತ್ತು. ಅಂತಿಮ ಓವರ್‌ನಲ್ಲಿ ಗೆಲ್ಲಲು 9 ರನ್‌ಗಳ ಅಗತ್ಯವಿತ್ತು. ಶಾರುಖ್ ಖಾನ್ ಹಾಗೂ ಸಿಕಂದರ್ ರಾಜಾ ಕಣದಲ್ಲಿದ್ದರು. ಮಹೀಶ್ ಪತಿರಾಣಾ ಬೌಲಿಂಗ್ ಮಾಡಿದರು. ಮೊದಲ ಎಸೆತದಲ್ಲಿ 1, ಎರಡನೇ ಎಸೆತದಲ್ಲಿ 1 ರನ್, ಮೂರನೇ ಎಸೆತದಲ್ಲಿ ನೋ ರನ್, ಎರಡನೇ ಎಸೆತದಲ್ಲಿ 2 ರನ್ ಹಾಗೂ ಐದನೇ ಎಸೆತದಲ್ಲಿ 2 ರನ್ ಹರಿದುಬಂತು. ಹೀಗಾಗಿ ಕೊನೆಯ ಎಸೆತದಲ್ಲಿ ಗೆಲ್ಲಲು 3 ರನ್‌ಗಳ ಅಗತ್ಯವಿತ್ತು.
ಈ ವೇಳೆ ಸಿಖಂದರ್ ರಾಜಾ ಚೆಂಡನ್ನು ಬೌಂಡರಿಯತ್ತ ಬಾರಿಸಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಬೌಂಡರಿ ರಕ್ಷಣೆ ಮಾಡಿದರೂ ಸಹ ಅಷ್ಟರಲ್ಲಾಗಲೇ ಮೂರು ಓಟಗಳನ್ನು ಶಾರುಖ್ ಖಾನ್ ಹಾಗೂ ಸಿಕಂದರ್ ರಾಜಾ ಪೂರೈಸಿದ್ದರು. ಈ ಮೂಲಕ ಕೊನೆಯ ಎಸೆತದಲ್ಲಿ ಪಂಜಾಬ್ ಕಿಂಗ್ಸ್ ಗೆದ್ದು ಬೀಗಿತ್ತು. ಇನ್ನು ತುಷಾರ್ ದೇಶಪಾಂಡೆ ಎಸೆದ 19ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ದೊಡ್ಡ ಹೊಡೆತಗಳನ್ನು ಬಾರಿಸುತ್ತಿದ್ದ ಜಿತೇಶ್ ಶರ್ಮಾ ಔಟ್ ಆಗಿದ್ದರು. ಸಿಕ್ಸ್ ಬಾರಿಸಲು ಯತ್ನಿಸಿದ್ದಾಗ ಬೌಂಡರಿ ಲೈನ್ ಬಳಿ ಶೈಕ್ ರಶೀಕ್ ಕ್ಯಾಚ್ ಹಿಡಿದಿದ್ದರು.
ಈ ಕ್ಯಾಚ್ ಗಮನಿಸಿದ ಅನೇಕರು ಇದೊಂದು ನಾಟ್ಔಟ್ ಎಂದೇ ತೀರ್ಮಾನಿಸಿದ್ದರು. ಏಕೆಂದರೆ ಶೈಕ್ ರಶೀದ್ ಕಾಲು ಬೌಂಡರಿ ಲೈನ್‌ಗೆ ತಾಕಿದ ಹಾಗೆ ಕಾಣುತ್ತಿತ್ತು. ಆದರೆ ಥರ್ಡ್ ಅಂಪೈರ್ ಇದನ್ನು ಔಟ್ ಎಂದು ನಿರ್ಣಯವನ್ನು ನೀಡಿದರು. ಶೈಕ್ ರಶೀದ್ ಶೂಗೂ ಬೌಂಡರಿ ಲೈನ್‌ಗೂ ಕೆಲ ಸೆಂಟಿಮೀಟರ್ ಅಂತರವಿದ್ದು, ಇದು ಔಟ್ ಎಂದು ತೀರ್ಮಾನ ಮಾಡಲಾಗಿತ್ತು.
ಈ ರೀತಿ ಅದ್ಭುತವಾಗಿ ಕ್ಯಾಚ್ ಹಿಡಿದ ಶೈಕ್ ರಶೀದ್‌ಗೆ ಎರಡೂ ತಂಡಗಳ ಆಟಗಾರರು ಚಪ್ಪಾಳೆ ತಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು. ಆದರೆ ಕೆಲ ನೆಟ್ಟಿಗರು ಮಾತ್ರ ಈ ನಿರ್ಣಯ ತಪ್ಪು ಶೈಕ್ ರಶೀದ್ ಕಾಲು ಬೌಂಡರಿಗೆ ಟಚ್ ಆಗಿದ್ದನ್ನು ವಿಡಿಯೊದಲ್ಲಿ ಸ್ಪಷ್ಟವಾಗಿ ವೀಕ್ಷಿಸಬಹುದಾಗಿದೆ ಎಂದು ಟ್ವೀಟ್ ಮಾಡಿ 'ಚೆನ್ನೈ ಫಿಕ್ಸಿಂಗ್ ಕಿಂಗ್ಸ್' ಎಂದು ಬರೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.
ಈ ರೀತಿಯ ಅನೇಕ ಟ್ವೀಟ್‌ಗಳು ಹರಿದಾಡಿದ್ದು, ಇದು ಪಕ್ಕಾ ಫಿಕ್ಸಿಂಗ್ ಎಂದು ಆರೋಪಿಸುತ್ತಿದ್ದಾರೆ. ಆದರೆ ಇನ್ನೂ ಕೆಲ ನೆಟ್ಟಿಗರು ಥರ್ಡ್ ಅಂಪೈರ್‌ಗಿಂತ ಮೊಬೈಲ್ ಪರದೆಗಳಲ್ಲಿ ವೀಕ್ಷಿಸುವ ನಾವು ಪರಿಣಿತರಲ್ಲ. ಅಷ್ಟು ಸಮಯದವರೆಗೂ ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಔಟ್ ಎಂದು ನಿರ್ಣಯವನ್ನು ನೀಡಲಾಗಿದೆ, ಸುಖಾಸುಮ್ಮನೆ ಟ್ರೋಲ್ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.
ಆ 18 ವರ್ಷದ ಕ್ರಿಕೆಟಿಗನ ತಪ್ಪೇನು? ಶ್ರಮ ಹಾಕಿ ಕ್ಯಾಚ್ ಹಿಡಿದರೂ ಫಿಕ್ಸರ್ ಎನಿಸಿಕೊಳ್ಳುವ ಅವಶ್ಯಕತೆ ಏನಿದೆ, ಇಂತಹ ಕೆಲಸಗಳನ್ನು ಮಾಡಿ ಯುವ ಪ್ರತಿಭೆಗಳ ಮನಸ್ಸಿನಲ್ಲಿ ಕೆಟ್ಟ ಪ್ರಭಾವ ಬೀರುವ ಹಾಗೆ ಮಾಡಬೇಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications