For Quick Alerts
ALLOW NOTIFICATIONS  
For Daily Alerts
 

ಗಿಲ್, ಕೊಹ್ಲಿ, ಫಾಫ್ ಇಲ್ಲ: ಈ ಬಾರಿಯ ಐಪಿಎಲ್‌ನ 5 ಅಗ್ರ ಬ್ಯಾಟರ್‌ಗಳನ್ನು ಹೆಸರಿಸಿದ ವೀರೇಂದ್ರ ಸೆಹ್ವಾಗ್

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿ ಕೊನೆಯ ಹಂತದಲ್ಲಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಸುದೀರ್ಘ ಎರಡು ತಿಂಗಳ ಕ್ರೀಡಾಕೂಟಕ್ಕೆ ತೆರೆ ಬೀಳಲಿದೆ. ಈ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇಆಪ್‌ಗೆ ಪ್ರವೇಶ ಪಡೆದುಕೊಂಡಿದ್ದವು. ಈ ಪೈಕಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇಆಫ್‌ನಲ್ಲಿ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಈ ಟೂರ್ನಿಯಲ್ಲಿ ಈವರೆಗೆ ಸಾಕಷ್ಟು ದೊಡ್ಡ ಕ್ಷಣಗಳನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದು ಬ್ಯಾಟಿಂಗ್‌ನಲ್ಲಿ ಅನೇಕ ಅದ್ಭುತ ಕ್ಷಣಗಳಿಗೆ ಟೂರ್ನಿ ಸಾಕ್ಷಿಯಾಗಿದೆ. ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಈವರೆಗೆ ಆಡಿರುವ 16 ಪಂದ್ಯಗಳಲ್ಲಿ ಮೂರು ಶತಕ ಹಾಗೂ ನಾಲ್ಕು ಅರ್ಧ ಶತಕಗಳ ಸಹಿತ 851 ರನ್‌ಗಳನ್ನು ಗಳಿಸಿದ್ದು ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ ಕೂಡ ಎರಡು ಶತಕಗಳನ್ನು ಸಿಡಿಸಿ ಟೂರ್ನಿಯಲ್ಲಿ ಗಮನಸಳೆದಿದ್ದಾರೆ.

IPL 2023: No Virat Kohli, No Shubman Gill: Virender Sehwag picks top 5 batters of this season

ಈ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಈ ಬಾರಿಯ ಐಪಿಎಲ್ ಟೂರ್ನಿಯ ಅಗ್ರ ಐವರು ಆಟಗಾರರನ್ನು ಹೆಸರಿಸಿದ್ದಾರೆ. ಕ್ರಿಕ್ ಬಜ್ ಜೊತೆಗೆ ಮಾತನಾಡಿದ ಅವರು "ನನ್ನ ಐವರು ಪಾಂಡವರು ಇವರು. ಇದು ಕ್ರಿಕೆಟ್ ಪಾಂಡವರು. ನಾನು ಇಲ್ಲಿ ಹೆಚ್ಚಿನ ಆರಂಭಿಕರನ್ನು ಆಯ್ಕೆ ಮಾಡಿಲ್ಲ. ಯಾಕೆಂದರೆ ಅವರಿಗೆ ಸಾಕಷ್ಟು ಅವಕಾಶಗಳೂ ದೊರೆಯುತ್ತವೆ" ಎಂದು ತಮ್ಮ ಐವರು ದಾಂಡಿಗರನ್ನು ಆಯ್ಲಕೆ ಮಾಡಿದ್ದಾರೆ.

"ನನಗೆ ಮನಸ್ಸಿನಲ್ಲಿ ಮೊದಲಿಗೆ ಬರುವ ಹೆಸರುರಿಂಕು ಸಿಂಗ್. ಇದಕ್ಕೆ ಕಾರು ಕೂಡ ಕಾರಣ ಕೇಳುತ್ತೀರಿ ಎಂದು ನನಗೆ ಅನಿಸುವುದಿಲ್ಲ. ಯಾಕೆಂದರೆ ಐದು ಸಿಕ್ಸರ್‌ಗಳನ್ನು ಸಿಡಿಸಿ ತಂಡವನ್ನು ಗೆಲ್ಲಿಸಿದ್ದು ಈ ಹಿಂದೆಂದೂ ಕಂಡಿಲ್ಲ. ಕೇವಲ ರಿಂಕು ಸಿಂಗ್ ಮಾತ್ರವೇ ಅದನ್ನು ಸಾಧಿಸಿದ್ದಾರೆಎ" ಎಂದು ವಿರೇಂದ್ರ ಸೆಹ್ವಾಗ್ ಕಾರಣವನ್ನು ನೀಡಿದ್ದಾರೆ.

"ಎರಡನೇ ಮಧ್ಯಮ ಕ್ರಮಾಂಕದ ಆಟಗಾರ ಶಿವಂ ದುಬೆ. ಆತ ಈ ಬಾರಿ 33 ಸಿಕ್ಸರ್‌ಗಳನ್ನು ಸಿಡಿಸಿದ್ದು 160ರಷ್ಟು ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಕಳೆದ ಕೆಲ ಆವೃತ್ತಿಗಳಲ್ಲಿ ಅವರಿಂದ ವಿಶೇಷವಾದ ಪ್ರದರ್ಶನ ಬಂದಿರಲಿಲ್ಲ. ಆದರೆ ಈ ಬಾರಿ ಅವರು ಬಹಳ ಸ್ಪಷ್ಟವಾಗಿದ್ದು ಕಣಕ್ಕಿಳಿದು ಸಿಕ್ಸರ್‌ಗಳನ್ನು ಬಾರೊಸುತ್ತಿರಬೇಕು ಎಂದು ದೃಢವಾಗಿದ್ದರು" ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.

ಇನ್ನು ವೀರೇಂದ್ರ ಸೆಹ್ವಾಗ್ ಆಯ್ಕೆ ಮಾಡಿದ ಮೂರನೇ ಹೆಸರು ಯುವ ಆರಂಬಿಕ ಆಟಗಾರ ಯಶಸ್ವಿ ಜೈಸ್ವಾಲ್. "ಮೂರನೆಯದು ಅದ್ಭುತ ಆರಂಬಿಕ ಆಟಗಾರ ಯಶಸ್ವಿ ಜೈಸ್ವಾಲ್. ಅವರಲ್ಲಿರುವ ಅದ್ಭುತವಾದ ಬ್ಯಾಟಿಂಗ್ ಕೌಶಲ್ಯ ಅವರನ್ನು ಆಯ್ಕೆ ಮಾಡುವಂತೆ ಮಾಡಿದೆ. ಯಶಸ್ವಿ ಜೈಸ್ವಾಲ್ ಬಳಿಕ ನನ್ನ ಆಯ್ಕೆ ಸೂರ್ಯಕುಮಾರ್ ಯಾದವ್. ಸೂರ್ಯ ಅವರು ಫಾರ್ಮ್‌ನಲ್ಲಿ ಇರಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಶೂನ್ಯ ಸುತ್ತಿದ್ದರು. ಐಪಿಎಲ್‌ನಲ್ಲಿಯೂ ಆರಂಭದಲ್ಲಿ ಫಾರ್ಮ್‌ನಲ್ಲಿ ಇರಲಿಲ್ಲ. ಆದರೆ ಯಾವಾಗ ಲಯಕ್ಕೆ ಮರಳಿದರೋ ಬಳಿಕ ಅಬ್ಬರಿಸಿದರು" ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.

ಇನ್ನು ಒನೆಯದಾಗಿ ಸೆಹ್ವಾಗ್ ಆಯ್ಕೆ ಮಾಡಿದ್ದು ಸನ್‌ರೈಸರ್ಸ್ ಹೈದರಾಬಾದ್ ದಾಂಡಿಗ ಹೆನ್ರಿಕ್ ಕ್ಲಾಸಿನ್ ಅವರನ್ನು "ಕೊನೆಯದಾಗಿ ನಾನು ಯಾರನ್ನು ಬೇಕಾದರೂ ಆಯ್ಕೆ ಮಾಡಬಹುದು. ಯಾಕೆಣದರೆ ಸಾಕಷ್ಟು ಆಯ್ಕೆಗಳು ಇವೆ. ಆದರೆ ನಾನು ಮತ್ತೋರ್ವ ಮಧ್ಯಮ ಕ್ರಮಾಂಕದ ಆಟಗಾರನನ್ನು ಹೆಸರಿಸುತ್ತೇನೆ. ಅದು ಹೆನ್ರಿಕ್ ಕ್ಲಾಸಿನ್. ಆತ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದರೂ ತಂಡದ ಪರವಾಗಿ ಅತಿ ಹೆಚ್ಚಿನ ರನ್‌ಗಳಿಸಿದ್ದರು. ಸ್ಪಿನ್ ಹಾಗೂ ವೇಗಿಗಳನ್ನು ಎದುರಿಸುವ ಅವರಲ್ಲಿರುವ ಸಾಮರ್ಥ್ಯ ವಿದೇಶಿ ಅಟಗಾರರಲ್ಲಿರುವುದು ಬಹಳ ಅಪರೂಪ" ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.

ವೀರೇಂಸ್ರ ಸೆಹ್ವಾಗ್ ಹೆಸರಿಸಿದ ಈ ಐಪಿಎಲ್ ಆವೃತ್ತಿಯ ಅಗ್ರ ಐವರು ಬ್ಯಾಟರ್‌ಗಳ ಪಟ್ಟಿಯಲ್ಲಿ ಇಬ್ಬರು ಅನ್‌ಕ್ಯಾಪ್‌ಡ್ ಆಟಗಾರರು ಹಾಗೂ ಓರ್ವ ವಿದೇಶಿ ಆಟಗಾರ ಇದ್ದಾರೆ. ಆದರೆ ಕುತೂಹಲಕಾರಿ ಸಂಗತಿಯೆಂದರೆ ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಡೆವೋನ್ ಕಾನ್ವೆ ಅಥವಾ ಋತುರಾಜ್ ಗಾಯಕ್ವಾಡ್ ಹೆಸರಿಲ್ಲ.

Story first published: Saturday, May 27, 2023, 17:18 [IST]
Other articles published on May 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+