Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ ಮಾತ್ರವಲ್ಲ, ಅಫ್ರಿದಿ ಸೇರಿ 3 ಕ್ರಿಕೆಟಿಗರ ಜತೆ ನವೀನ್ ಕಿರಿಕ್; ಮೈದಾನದಲ್ಲೇ ಗುದ್ದಿ ಕೆಡವಿದ್ದ ಈ ಆಟಗಾರ!

IPL 2023: Not with Virat Kohli Naveen Ul Haq fought with Afridi, Tisara and D Shot on field

ಮೊನ್ನೆ ( ಮೇ 1 ) ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯ ಸಿಕ್ಕಾಪಟ್ಟೆ ಸುದ್ದಿಗೀಡಾಗಿದೆ. ಪಂದ್ಯದ ಫಲಿತಾಂಶದ ವಿಚಾರಕ್ಕಿಂತ ಪಂದ್ಯದ ಬಳಿಕ ನಡೆದ ಜಗಳದ ಕುರಿತಾಗಿಯೇ ಈ ಪಂದ್ಯ ಸಿಕ್ಕಾಪಟ್ಟೆ ಸುದ್ದಿ ಮಾಡಿದೆ.

ಹೌದು, ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಹಾಗೂ ಕೆಲ ಆಟಗಾರರ ಜತೆ ವಿರಾಟ್ ಕೊಹ್ಲಿ ಮೈದಾನದಲ್ಲಿಯೇ ಜಗಳ ಮಾಡಿಕೊಂಡು ವಾಕ್ಸಮರ ನಡೆಸಿದ್ದರು. ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದಾಗ ಗೌತಮ್ ಗಂಭೀರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಶ್ ಎಂದು ಸನ್ನೆ ಮಾಡಿದ್ದರು. ಅದೇ ಸೇಡನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾನು ಶ್ ಎನ್ನುವುದಿಲ್ಲ ಬದಲಾಗಿ ನಿಮ್ಮನ್ನೆಲ್ಲಾ ಪ್ರೀತಿಸುತ್ತೇನೆ ಎಂದು ಸನ್ನೆ ಮಾಡುವ ಮೂಲಕ ತೀರಿಸಿಕೊಂಡಿದ್ದರು.

ಹೀಗೆ ವಿರಾಟ್ ಕೊಹ್ಲಿ vs ಗೌತಮ್ ಗಂಭೀರ್ ನಡುವೆ ಮಾತ್ರ ಇದ್ದ ಜಗಳ ನಂತರ ಕೊಹ್ಲಿ ಹಾಗೂ ಕೆಲ ಲಕ್ನೋ ಆಟಗಾರರ ನಡುವೆ ಸಹ ನಡೆಯಿತು. 17ನೇ ಓವರ್‌ನಲ್ಲಿ ಕಣದಲ್ಲಿದ್ದ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ಕೈಕೈ ಹಿಡಿದುಕೊಂಡು ವಾಕ್ಸಮರ ನಡೆಸುವ ಮಟ್ಟಕ್ಕೆ ಜಗಳ ನಡೆದಿತ್ತು.

ನವೀನ್ ಉಲ್ ಹಕ್ ಕ್ರೀಸ್‌ಗೆ ಬ್ಯಾಟ್ ಇಟ್ಟಿದ್ದರೂ ಸಹ ಮೊಹಮ್ಮದ್ ಸಿರಾಜ್ ವಿಕೆಟ್‌ಗೆ ಚೆಂಡನ್ನು ಎಸೆದು ದಿಟ್ಟಿಸಿ ನೋಡಿದ್ದರ ಪರಿಣಾಮ ನವೀನ್ ಉಲ್ ಹಕ್ ಜಗಳಕ್ಕೆ ಮುಂದಾಗಿದ್ದರು. ಈ ಸಮಯದಲ್ಲಿ ಕೊಹ್ಲಿ ಮಧ್ಯ ಪ್ರವೇಶಿಸಿದ ಕಾರಣ ಕೊಹ್ಲಿ ಹಾಗೂ ನವೀನ್ ನಡುವೆ ಜಗಳ ತೀವ್ರಗೊಂಡಿತ್ತು. ಇನ್ನು ಪಂದ್ಯ ಮುಗಿದ ಬಳಿಕ ಶೇಕ್ ಹ್ಯಾಂಡ್ ಮಾಡುವ ಸಂದರ್ಭದಲ್ಲಿಯೂ ಸಹ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ಜಗಳ ನಡೆದಿತ್ತು.

ನವೀನ್ ಉಲ್ ಹಕ್ ವಿರಾಟ್ ಕೊಹ್ಲಿ ಹ್ಯಾಂಡ್ ಶೇಕ್ ಮಾಡಿದ ಬಳಿಕ ಕೊಹ್ಲಿ ಕೈಯನ್ನು ಜೋರಾಗಿ ತಳ್ಳಿದ್ದರು. ಆದರೆ ಕೊಹ್ಲಿ ಇದ್ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದೇ ಮುನ್ನಡೆದಿದ್ದರು. ನವೀನ್ ಉಲ್ ಹಕ್ ನಡೆಗೆ ಕೊಹ್ಲಿ ಅಭಿಮಾನಿಗಳು ಕಿಡಿಕಾರಿದ್ದರು. ಆತನ ಇನ್ಸ್ಟಾಗ್ರಾಮ್ ಖಾತೆಗೆ ತೆರಳಿ ನಿಂದಿಸಿದ್ದರು. ಹೀಗೆ ಜಗಳದ ಮೂಲಕ ವೈರತ್ವ ಬೆಳೆಸಿಕೊಂಡ ನವೀನ್ ಉಲ್ ಹಕ್ ಈ ರೀತಿ ಕಿತ್ತಾಡಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಸಹ ಇದೇ ರೀತಿಯ ಕಿರಿಕ್‌ಗಳನ್ನು ಮಾಡಿಕೊಂಡಿದ್ದಾರೆ.

ಹೌದು, 2020ರಲ್ಲಿ ನಡೆದಿದ್ದ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದ ನವೀನ್ ಉಲ್ ಹಕ್ ಮೊಹಮ್ಮದ್ ಆಮೀರ್ ಜತೆ ಕಿರಿಕ್ ಮಾಡಿಕೊಂಡಿದ್ದರು. ಇಬ್ಬರೂ ಸಹ ಕಣದಲ್ಲಿಯೇ ಕಿತ್ತಾಡಿಕೊಂಡಿದ್ದರು. ಪಂದ್ಯ ಮುಗಿದ ಬಳಿಕ ಮೊಹಮ್ಮದ್ ಆಮೀರ್ ತಂಡದಲ್ಲಿದ್ದ ಶಾಹಿದ್ ಆಫ್ರಿದಿ ಸಹ ನವೀನ್ ಉಲ್ ಹಕ್‌ಗೆ ಬೈದು ವಾರ್ನಿಂಗ್ ನೀಡಿದ್ದರು.

ಅಲ್ಲದೇ 2021ರಲ್ಲಿ ನಡೆದಿದ್ದ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಸಹ ನವೀನ್ ಉಲ್ ಹಕ್ ಇಂತಹದ್ದೇ ಕಿರಿಕ್ ಮಾಡಿಕೊಂಡಿದ್ದರು. ಬೌಲಿಂಗ್ ಮಾಡುತ್ತಿದ್ದ ನವೀನ್ ಉಲ್ ಹಕ್ ತಿಸಾರಾ ಪೆರೆರಾ ರನ್ ಓಡುತ್ತಿದ್ದಾಗ ಅಡ್ಡ ಬಂದಿದ್ದರು. ಇದನ್ನು ಸಹಿಸದ ತಿಸಾರಾ ಪೆರೆರಾ ನವೀನ್ ವಿರುದ್ಧ ಜಗಳಕ್ಕೆ ಇಳಿದಿದ್ದರು.

ಇನ್ನು 2022ರ ಬಿಗ್ ಬ್ಯಾಷ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಸಹ ನವೀನ್ ಉಲ್ ಹಕ್ ಕಿರಿಕ್ ಮಾಡಿಕೊಂಡಿದ್ದರು. ಬ್ಯಾಟಿಂಗ್ ಮಾಡಿ ಓಡಿ ಬರುತ್ತಿದ್ದ ಡಿ ಶಾರ್ಟ್‌ಗೆ ಬೌಲಿಂಗ್ ಮಾಡುತ್ತಿದ್ದ ನವೀನ್ ಉಲ್ ಹಕ್ ಅಡ್ಡ ಬಂದಿದ್ದರು. ಎಷ್ಟೇ ಸರಿದರೂ ತನ್ನ ಕಡೆಯೇ ಬಂದ ಕಾರಣ ಡಿ ಶಾರ್ಟ್ ನವೀನ್ ಉಲ್ ಹಕ್ ಅವರನ್ನು ಗುದ್ದಿ ನೆಲಕ್ಕೆ ಕೆಡವಿದ್ದರು. ಈ ವಿಡಿಯೊಗಳೆಲ್ಲಾ ಈಗ ವೈರಲ್ ಆಗಿದ್ದು, ನವೀನ್ ಉಲ್ ಹಕ್‌ ಬೇಕಂತಲೇ ಕಿರಿಕ್ ಮಾಡುವ ಸೊಕ್ಕಿನ ಆಟಗಾರ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Story first published: Wednesday, May 3, 2023, 18:51 [IST]
Other articles published on May 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+