Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023 Opening Ceremony: ಮಂತ್ರಮುಗ್ಧರನ್ನಾಗಿಸುವ ಡ್ರೋನ್ ಶೋ ನೋಡಲು ಸಿದ್ಧರಾಗಿ!

ಐಪಿಎಲ್ 2023 ರ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೂರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಐಪಿಎಲ್ ಉದ್ಘಾಟಮಾ ಕಾರ್ಯಕ್ರಮ ನಡೆಯಲಿದೆ. ಇದೇ ಕಾರಣಕ್ಕೆ ಈ ಬಾರಿಯ ಉದ್ಘಾಟನಾ ಹಿಂದೆದಿಂತಲೂ ಅದ್ದೂರಿಯಾಗಿ ಇರಲಿದೆ. ವಿಶ್ವದ ಅತಿ ದೊಡ್ಡ ಕ್ರಿಡಾಂಗಣ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಒಂದು ಲಕ್ಷಕ್ಕೂ ಹೆಚ್ಚು ಜನ ಈ ಕಾರ್ಯಕ್ರವನ್ನು ಕ್ರೀಡಾಂಗಣದಲ್ಲಿ ವೀಕ್ಷಣೆ ಮಾಡಲಿದ್ದಾರೆ.

ಉದ್ಘಾಟನಾ ಪಂದ್ಯದಲ್ಲಿ ರಶ್ಮಿಕಾ ಮಂದಣ್ಣ, ತಮನ್ನಾ ಭಟಿಯಾ, ಅರ್ಜಿತ್ ಸಿಂಗ್ ಅಭಿಮಾನಿಗಳನ್ನು ನೃತ್ಯ, ಸಂಗೀತದ ಮೂಲಕ ರಂಜಿಸಲು ಸಿದ್ಧವಾಗಿದ್ದಾರೆ. ಈ ಬಾರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ಮಂತ್ರಮುಗ್ದರನ್ನಾಗಿಸುವುದು ಮಾತ್ರ ಡ್ರೋನ್ ಶೋ, ಹೌದು ಹಿಂದೆಂದೂ ನೋಡಿರದಂತಹ ಡ್ರೋನ್ ಶೋ ನೋಡಲು ಅಭಿಮಾನಿಗಳು ಸಿದ್ಧವಾಗಬೇಕಿದೆ. ಬಿಸಿಸಿಐ ಡ್ರೋನ್ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ಉದ್ಘಾಟನಾ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದಿದೆ.

IPL 2023 Opening Ceremony Drone Show

ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಮೊದಲು, ಡ್ರೋನ್ ಪ್ರದರ್ಶನದ ಒಂದು ನೋಟವನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ. ವರದಿಗಳ ಪ್ರಕಾರ, ಉದ್ಘಾಟನಾ ಸಮಾರಂಭದಲ್ಲಿ ಸುಮಾರು 1500 ಡ್ರೋನ್‌ಗಳನ್ನು ಬಳಸಲಾಗುವುದು, ಇದು 15 ವರ್ಷಗಳ ಐಪಿಎಲ್‌ನಲ್ಲಿ ಹಿಂದೆಂದೂ ಕಂಡಿರದ ವಿಶಿಷ್ಟ ಎಲ್‌ಇಡಿ ಮತ್ತು ಲೈಟ್ ಶೋ ಅನ್ನು ರಚಿಸುತ್ತದೆ. ಡ್ರೋನ್‌ ಶೋನಲ್ಲಿ ವಿವಿಧ ಕಲಾಕೃತಿಗಳು ಅರಳಲಿವೆ. ಐಪಿಎಲ್ ಟ್ರೋಫಿ, ಫ್ರಾಂಚೈಸಿಗಳ ಲೋಗೊ ಕೂಡ ಬಾನಂಗಳದಲ್ಲಿ ಮೂಡಿಬರಲಿವೆ.

ಸಂಜೆ 6 ಗಂಟೆಯಿಂದ ಕಾರ್ಯಕ್ರಮ

IPL 2023 Opening Ceremony Drone Show

ಮಾರ್ಚ್ 31ರಂದು ಸಂಜೆ 6 ಗಂಟೆಯಿಂದ ಉದ್ಘಾಟನಾ ಕಾರ್ಯಕ್ರಮ ಆರಂಭವಾಗಲಿದೆ. ಹಾಡು, ಕುಣಿತ, ಡ್ರೋನ್ ಶೋ ಸೇರಿದಂತೆ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ. ಮೊಬೈಲ್‌ನಲ್ಲಿ ಜಿಯೋ ಸಿನಿಮಾದಲ್ಲಿ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಿದೆ. ಟಿವಿಯಲ್ಲಿ ನೋಡುವರರು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ವೀಕ್ಷಣೆ ಮಾದಬಹುದಾಗಿದೆ. 7.30ಕ್ಕೆ ಉದ್ಘಾಟನಾ ಪಂದ್ಯ ಆರಂಭವಾಗಲಿದ್ದು, ಮೊದಲನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೆಣೆಸಲಿದೆ.

ಮೂರು ವರ್ಷಗಳ ನಂತರ ಐಪಿಎಲ್ ಸಾಂಪ್ರದಾಯಿಕ ಮಾದರಿಗೆ ಮರಳಿದೆ. ತವರು ಮತ್ತು ಹೊರಗಿನ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಎಲ್ಲಾ ಫ್ರಾಂಚೈಸಿಗಳು ತವರಿನಲ್ಲಿ ಅಭಿಮಾನಿಗಳ ಮುಂದೆ ಆಡಲು ಸಜ್ಜಾಗಿವೆ. 10 ತಂಡಗಳು ಎರಡು ತಿಂಗಳ ಕಾಲ ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಲಿವೆ. ಮಾರ್ಚ್ 31 ರಿಂದ ಮೇ 28 ರವರೆಗೆ ಪಂದ್ಯಾವಳಿ ನಡೆಯಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಎರಡು ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯ ಮೇ 28ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತದ 12 ವಿವಿಧ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯ ನಡೆಯಲಿದೆ. ರಾಜಸ್ಥಾನ ರಾಯಲ್ಸ್ ತಂಡ ಜೈಪುರ ಮತ್ತು ಜೋಧ್‌ಪುರದಲ್ಲಿ ಪಂದ್ಯಗಳನ್ನು ಆಡಲಿದೆ. ಈ ಬಾರಿ ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಎನ್ನುವ ಹೊಸ ನಿಯಮವನ್ನು ಪರಿಚಯಿಸಲಾಗಿದೆ. ವೈಡ್ ಮತ್ತು ನೋಬಾಲ್‌ ನಿರ್ಣಯಗಳ ವಿರುದ್ಧ ಕೂಡ ಆಟಗಾರರು ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Story first published: Friday, March 31, 2023, 12:58 [IST]
Other articles published on Mar 31, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+