IPL 2023 Opening Ceremony: ತಮನ್ನಾ, ರಶ್ಮಿಕಾ ನೃತ್ಯ ವೈಭವ: ಐಪಿಎಲ್ ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ
ಮೂರು ವರ್ಷಗಳ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ, ವಿಶ್ವದ ಶ್ರೀಮಂತ ಲೀಗ್‌ಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ ತಮ್ಮ ನೃತ್ಯದ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರೆ, ಅರಿಜಿತ್ ಸಿಂಗ್ ತಮ್ಮ ಮಾಂತ್ರಿಕ ಸಂಗೀತದಿಂದ ಅಭಿಮಾನಿಗಳನ್ನು ಕುಣಿಸಿದರು.
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಸಮಾರಂಭಕ್ಕೆ ಗೈರುಹಾಜರಾಗುವುದರೊಂದಿಗೆ ಗುರುವಾರವೇ ಕ್ರಿಕೆಟ್ ಹಬ್ಬ ಆರಂಭವಾಯಿತು. ರೋಹಿತ್ ಹೊರತುಪಡಿಸಿ ಎಲ್ಲಾ 9 ನಾಯಕರು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟ್ರೋಫಿಯೊಂದಿಗೆ ಪೋಸ್ ನೀಡಿದ್ದರು. ಏಡನ್ ಮಾರ್ಕ್ರಾಮ್ ಅನುಪಸ್ಥಿತಿಯಲ್ಲಿ, ಭುವನೇಶ್ವರ್ ಕುಮಾರ್ ನಾಯಕರ ನಾಯಕರಾಗಿ ಕಾಣಿಸಿಕೊಂಡಿದ್ದರು.

ಮಂದಿರಾ ಬೇಡಿ ಐಪಿಎಲ್ 2023 ರ ಉದ್ಘಾಟನಾ ಸಮಾರಂಭದ ನಿರೂಪಕರಾಗಿದ್ದರು. ಉದ್ಘಾಟನಾ ಸಮಾರಂಭವು ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಅವರ ಸಂಗೀತ ಕಾರ್ಯಕ್ರಮದ ಮೂಲಕ ಆರಂಭವಾಯಿತು. ಭಾವಪೂರ್ಣ ಗಾಯಕ ತನ್ನ ಅತ್ಯಂತ ಹಿತವಾದ ಮತ್ತು ಮನರಂಜನಾ ಹಾಡುಗಳನ್ನು ಹಾಡಿದರು. ಮನಮೋಹಕ ಸಂಗೀತದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು, 83 ಚಿತ್ರದ 'ಜೀತೇಗಾ ಇಂಡಿಯಾ' ಹಾಡಿನ ಮೂಲಕ ತಮ್ಮ ಪ್ರದರ್ಶನವನ್ನು ಮುಗಿಸಿದರು.
ನಂತರ ಸ್ಟೇಜ್‌ಗೆ ಕಿಚ್ಚು ಹಚ್ಚಿದ್ದು ತಮನ್ನಾ ಭಾಟಿಯಾ, ಟಂ ಟಂ ಮತ್ತು ಇತರೆ ಹಾಡುಗಳಿಗೆ ಹೆಜ್ಜೆಹಾಕುವ ಮೂಲಕ ನೆರಿದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಜನಪ್ರಿಯ ಗುಜರಾತಿ ಟ್ರ್ಯಾಕ್ 'ಚೋಗಡಾ ತಾರಾ' ಹಾಡಿಗೆ ನೃತ್ಯ ಮಾಡಿದಾಗ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿತ್ತು.
"ಕೆಮ್ ಛೋ ಗುಜರಾತ್ ಟೈಟಾನ್ಸ್, ವನಕ್ಕಂ ಚೆನ್ನೈ ಸೂಪರ್ ಕಿಂಗ್ಸ್" ಎಂದು ರಶ್ಮಿಕಾ ಮಂದಣ್ಣ ಹೇಳುವ ಮೂಲಕ ನೆರೆದಿದ್ದ ಪ್ರೇಕ್ಷಕರ ಉತ್ಸಾಹವನ್ನು ಹೆಚ್ಚಿಸಿದರು. ನಂತರ ಹಲವು ಹಾಡುಗಳಿಗೆ ನೃತ್ಯ ಮಾಡಿದರು. ಪುಷ್ಪ ಚಿತ್ರದ ಸಾಮಿ ಸಾಮಿ ಹಾಡಿಗೆ ನೃತ್ಯ ಮಾಡಿದ ಅವರು, ನಂತರ ಆಸ್ಕರ್ ಪ್ರಶಸ್ತಿ ಪಡೆದ ತೆಲುಗು ಚಿತ್ರ ಆರ್ ಆರ್ ಆರ್ ಚಿತ್ರದ ಹಾಡು ನಾಟು ನಾಟು ಹಾಡಿಗೆ ಹೆಜ್ಜೆ ಹಾಕುವ ಅಭಿಮಾನಿಗಳ ಸಂಭ್ರಮವನ್ನು ದ್ವಿಗುಣಗೊಳಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಡಗೌಟ್‌ನಲ್ಲಿ ಕುಳಿತು ಅರಿಜಿತ್ ಸಿಂಗ್ ಅವರ ಕಾರ್ಯಕ್ರಮವನ್ನು ಆನಂದಿಸಿದರು. ಪ್ರದರ್ಶನದ ನಂತರ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಮತ್ತು ಇತರ ಅಧಿಕಾರಿಗಳನ್ನು ವೇದಿಕೆಯಲ್ಲಿ ಭಾಗವಹಿಸಿದ್ದರೆ, ಜೊತೆಗೆ ಎರಡೂ ತಂಡಗಳ ನಾಯಕರಾದ ಎಂಎಸ್ ಧೋನಿ (ಸಿಎಸ್‌ಕೆ) ಮತ್ತು ಹಾರ್ದಿಕ್ ಪಾಂಡ್ಯ (ಜಿಟಿ). ಗುಜರಾತ್ ಟೈಟಾನ್ಸ್ ನಾಯಕ ಐಪಿಎಲ್ ಟ್ರೋಫಿಯನ್ನು ವೇದಿಕೆಯ ಮೇಲೆ ಇರಿಸಿದರು. ಎಲ್ಲರೂ ಫೋಟೊಗೆ ಫೋಸ್ ಕೊಡುವ ಮೂಲಕ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರೆಬಿದ್ದಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications