IPL 2023: ಬೇರೆ ತಂಡಗಳು ಆಟಗಾರರನ್ನು ಹುಡುಕುತ್ತವೆ; ಎಂಎಸ್ ಧೋನಿ ಆಟಗಾರರನ್ನೇ ತಯಾರಿಸುತ್ತಾರೆ; ಆಕಾಶ್ ಚೋಪ್ರಾ
ಭಾರತ ಕ್ರಿಕೆಟ್ ತಂಡದ ಯಶಸ್ವಿ ಮಾಜಿ ನಾಯಕ ಎಂಎಸ್ ಧೋನಿ ವಿಶ್ವ ಕ್ರಿಕೆಟ್ ಕಂಡ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದು, ಎಲ್ಲ ಸ್ವರೂಪದ ಕ್ರಿಕೆಟ್‌ನಲ್ಲಿ ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕನಾಗಿದ್ದಾರೆ. ತನ್ನ ಕಾರ್ಯತಂತ್ರದ ಮೂಲಕ ಸೋಲುವ ತಂಡವನ್ನು ಗೆಲ್ಲಿಸಿದ ಖ್ಯಾತಿ ಎಂಎಸ್ ಧೋನಿಗೆ ಸಲ್ಲುತ್ತದೆ.
ಪಂದ್ಯದ ವೇಳೆ ಅಂತಾರಾಷ್ಟ್ರೀಯ ಆಟಗಾರರು ಸೇರಿದಂತೆ ಹಲವು ಆಟಗಾರರು ಎಂಎಸ್ ಧೋನಿಯಿಂದ ಉತ್ತಮ ಪಾಠ ಕಲಿಯಲು ಬಯಸುತ್ತಾರೆ. ಅದೇ ಅಂಶದ ಬಗ್ಗೆ ಮಾತನಾಡುತ್ತಾ, ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಸಿಎಸ್‌ಕೆ ನಾಯಕನ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಧೋನಿಯೊಂದಿಗಿನ ಮಾತುಕತೆ ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಹೊರತರುತ್ತಾರೆ ಎಂದು ಹೇಳಿದರು.

ಉಳಿದ ತಂಡಗಳು ಆಟಗಾರರನ್ನು ಹುಡುಕಿದರೆ, ಎಂಎಸ್ ಧೋನಿ ಮಾತ್ರ ಆಟಗಾರರನ್ನೇ ತಯಾರಿಸುತ್ತಾರೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಅಜಿಂಕ್ಯಾ ರಹಾನೆ ಮತ್ತು ಶಿವಂ ದುಬೆ ಅವರ ಉದಾಹರಣೆಯನ್ನು ಉಲ್ಲೇಖಿಸಿದ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ, 41 ವರ್ಷದ ಎಂಎಸ್ ಧೋನಿ ತನ್ನ ಅಡಿಯಲ್ಲಿ ಆಟಗಾರರನ್ನು ಬೆಳೆಸಲು ಹೇಗೆ ಆಂತರಿಕ ಸಾಮರ್ಥ್ಯವನ್ನು ಹೊಂದಿದ್ದಾನೆ ಎಂಬುದನ್ನು ತಿಳಿಸಿದರು.
"ಅಜಂಕ್ಯಾ ರಹಾನೆ ಬೆಂಗಳೂರಿನ ಮೈದಾನವನದನು ಇಷ್ಟಪಡುತ್ತಾರೆ ಮತ್ತು ಕ್ರೀಸ್‌ನಲ್ಲಿ ಇರುವವರೆಗೂ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಯುವ ಬ್ಯಾಟರ್ ಶಿವಂ ದುಬೆ ಕೂಡ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು. ಇದಕ್ಕೂ ಮೊದಲು ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ಭಾಗವಾಗಿದ್ದರು. ಆದರೆ ಧೋನಿಯೊಂದಿಗೆ ಇದ್ದಾಗ ಇಂತಹ ಆಟಗಳು ಬರುತ್ತವೆ".
"ಎಲ್ಲಾ ಇತರ ತಂಡಗಳು ಆಟಗಾರರನ್ನು ಹುಡುಕುತ್ತವೆ, ಎಂಎಸ್ ಧೋನಿ ಆಟಗಾರರನ್ನು ಹುಡುಕುವುದಿಲ್ಲ, ಆಟಗಾರರನ್ನೇ ತಯಾರಿಸುತ್ತಾರೆ," ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ 'ಆಕಾಶವಾಣಿ'ಯಲ್ಲಿ ಹೇಳಿದ್ದಾರೆ.

ಧೋನಿ ನಾಯಕತ್ವದಲ್ಲಿ ಆಟಗಾರರು ಉತ್ತಮ ಪ್ರದರ್ಶನ
"ಎಂಎಸ್ ಧೋನಿ ನಾಯಕತ್ವದಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡುವುದನ್ನು ನೋಡಲು ತುಂಬಾ ಹೃದಯಸ್ಪರ್ಶಿಯಾಗಿದೆ. ಶಿವಂ ದುಬೆ ಅವರಿಂದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಕಣ್ತುಂಬಿಕೊಂಡೆವು. ಇದೇ ವೇಳೆ ಅಜಿಂಕ್ಯಾ ರಹಾನೆ ಕಳೆದ ಮೂರು ಪಂದ್ಯಗಳಿಂದ ವಿಭಿನ್ನವಾಗಿ ಆಡುತ್ತಿದ್ದಾರೆ. ಅವರ ಸಿಕ್ಸರ್ ಶಾಟ್‌ಗಳು ಅದ್ಭುತವಾಗಿದ್ದವು,'' ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಐಪಿಎಲ್ 2023ರ 24ನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸಿಎಸ್‌ಕೆ 8 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ವೇಳೆ 27 ಎಸೆತಗಳಲ್ಲಿ 52 ರನ್ ಗಳಿಸಿದ ಶಿವಂ ದುಬೆ ಮತ್ತು 20 ಎಸೆತಗಳಲ್ಲಿ 37 ರನ್ ಗಳಿಸಿದ ಅಜಿಂಕ್ಯಾ ರಹಾನೆ ತಂಡದ ಪರ ಉತ್ತಮ ಪ್ರದರ್ಶನ ನೀಡಿ 226 ರನ್ ಕಲೆಹಾಕಲು ನೆರವಾದರು.
227 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ಮಧ್ಯಮ ಕ್ರಮಾಂಕದಲಲೊಇ ನಾಯಕ ಫಾಫ್ ಡು ಪ್ಲೆಸಿಸ್ 33 ಎಸೆತಗಳಲ್ಲಿ 62 ರನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 36 ಎಸೆತಗಳಲ್ಲಿ 76 ರನ್ ಬಾರಿಸಿದರು. ಆದರೂ ಪಂದ್ಯ ವಿಜೇತ ಪ್ರದರ್ಶನ ನೀಡಲು ಸಾಧ್ಯುವಾಗಲಿಲ್ಲ. ಆದ್ದರಿಂದ ಆರ್‌ಸಿಬಿ 8 ರನ್‌ಗಳಿಂದ ಸೋಲು ಕಂಡಿತು.

ಫಾಫ್ ಡು ಪ್ಲೆಸಿಸ್ ಪಡೆ ತನ್ನ ಮುಂದಿನ ಪಂದ್ಯವನ್ನು ಗುರುವಾರ, ಏಪ್ರಿಲ್ 20ರಂದು ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಮೊಹಾಲಿಯಲ್ಲಿ ಸೆಣಸಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications