Salman Butt On Virat Kohli: ಕೊಹ್ಲಿ ಕುರಿತ ಹೇಳಿಕೆ ನೀಡಿದ್ದ ಸೈಮನ್ ಡೌಲ್‌ಗೆ ಡಿಚ್ಚಿ ಕೊಟ್ಟ ಪಾಕ್ ಮಾಜಿ ನಾಯಕ
ಭಾನುವಾರ, ಏಪ್ರಿಲ್ 10ರಂದು ಬೆಂಗಳೂರಿನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 14ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 35 ಎಸೆತಗಳಲ್ಲಿ 50 ರನ್ ಗಡಿ ತಲುಪಿದರು ಮತ್ತು ಈ ಋತುವಿನ ಎರಡನೇ ಅರ್ಧಶತಕ ದಾಖಲಿಸಿದರು. ಇದೇ ವೇಳೆ ತಮ್ಮ 46ನೇ ಐಪಿಎಲ್ ಅರ್ಧಶತಕ ಬಾರಿಸಿದರು.

ವಿರಾಟ್ ಕೊಹ್ಲಿ 42 ರನ್‌ಗಳವರೆಗೆ ವೇಗವಾಗಿ ಆಡಿದರು ಮತ್ತು 42ರಿಂದ 50 ರನ್ ಗಳಿಸಲು 10 ಎಸೆತಗಳನ್ನು ತೆಗೆದುಕೊಂಡರು. ಪಂದ್ಯದ ಕಾಮೆಂಟರಿ ಮಾಡುತ್ತಿದ್ದ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಸೈಮನ್ ಸೈಮನ್ ಡೌಲ್ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ವಿರಾಟ್ ಕೊಹ್ಲಿ 'ಮೈಲಿಗಲ್ಲು ಬಗ್ಗೆ ಮಾತ್ರ ಯೋಚಿಸುತ್ತಾರೆ' ಎಂದು ಸೈಮನ್ ಡೌಲ್ ಹೇಳಿಕೆ ನೀಡಿದರು.
"ವಿರಾಟ್ ಕೊಹ್ಲಿ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡುತ್ತಾ ರೈಲಿನ ವೇಗದಲ್ಲಿ ರನ್ ಗಳಿಸುತ್ತಿದ್ದರು. ಆದರೆ, 42ರಿಂದ 50 ರನ್‌ಗಳವರೆಗೆ ಕೊಹ್ಲಿ 10 ಎಸೆತಗಳನ್ನು ತೆಗೆದುಕೊಂಡರು. ಒಂದು ಮೈಲಿಗಲ್ಲಿನ ಬಗ್ಗೆ ಯೋಚನೆ ಮಾಡಿದರು. ಈ ಆಟದಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ನಾನು ಭಾವಿಸುತ್ತೇನೆ. ವಿಶೇಷವಾಗಿ ಆ ಹಂತದಲ್ಲಿ ಕೈಯಲ್ಲಿ ವಿಕೆಟ್‌ಗಳಿದ್ದಾಗ ಆಕ್ರಮಣಕಾರಿ ಬ್ಯಾಟಿಂಗ್ ಮಾಡಬೇಕು," ಎಂದು ಸೈಮನ್ ಡೌಲ್ ಹೇಳಿದ್ದರು.

ವಿರಾಟ್ ಕೊಹ್ಲಿ ಕುರಿತ ನ್ಯೂಜಿಲೆಂಡ್ ಮಾಜಿ ವೇಗಿ ಸೈಮನ್ ಡೌಲ್ ಅವರ ಈ ಹೇಳಿಕೆಗೆ ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಆ ಹೇಳಿಕೆ ಕಸ ಎಂದು ಕಿಡಿಕಾರಿದ್ದಾರೆ.
"ಸೈಮನ್ ಡೌಲ್ ಪಾಕಿಸ್ತಾನದಲ್ಲಿದ್ದಾಗ, ಬಾಬರ್ ಅಜಂಗೆ ಇದೇ ರೀತಿಯ ಪದಗಳನ್ನು ಬಳಸಿದ್ದರು. ಅವರು ಪ್ರಜ್ಞಾಪೂರ್ವಕವಾಗಿ ಪಂದ್ಯವನ್ನು ವೀಕ್ಷಿಸಿದ್ದರೆ, ವಿರಾಟ್ ಕೊಹ್ಲಿ ಅವರು ರವಿ ಬಿಷ್ಣೋಯಿ ಅವರ ಬೌಲಿಂಗ್‌ನಲ್ಲಿ ಮೂರಿ ಬಾರಿ ದೊಡ್ಡ ಶಾಟ್‌ಗೆ ಮುಂದಾಗಿದ್ದರು, ಆದರೆ ಅವು ತಪ್ಪಿಸಿಕೊಂಡವು. ಅದು ಕ್ರಿಕೆಟ್‌ನ ಭಾಗವಾಗಿದೆ,". ಎಂದು ಸಲ್ಮಾನ್ ಬಟ್ ಹೇಳಿದರು.
"ವಿರಾಟ್ ಕೊಹ್ಲಿ ಈಗಾಗಲೇ 75 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾನೆ. ಹೀಗಾಗಿ ಯಾರಿಗೂ ಏನನ್ನೂ ಸಾಬೀತುಪಡಿಸಬೇಕಾಗಿಲ್ಲ. ಇದು ಸಂಪೂರ್ಣ ಕಸದ ಹೇಳಿಕೆ, ಸೈಮನ್ ಡೌಲ್ ಕ್ರಿಕೆಟ್ ಆಡಿದ್ದಾರೆ, ಆದರೆ ಅವರು ಬೌಲರ್ ಆಗಿದ್ದರು," ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹರಿಹಾಯ್ದಿದ್ದಾರೆ.

ಕ್ರಿಕೆಟ್‌ನಲ್ಲಿ 75 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿಯಂತಹ ಆಟಗಾರ ಉಳಿದ ಮೈಲಿಗಲ್ಲುಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಸೈಮನ್ ಡೌಲ್‌ಗೆ "ಜೀವದಾನ ಪಡೆಯಿರಿ' ಎಂದು ಸಲ್ಮಾನ್ ಬಟ್ ಸಲಹೆ ನೀಡಿದರು.
"ಯುವ ಆಟಗಾರರು ಮೈಲುಗಲ್ಲು ಸ್ಥಾಪಿಸುವುದರಿಂದ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಈ ರೀತಿ ಆಡುತ್ತಾರೆ. ವಿರಾಟ್ ಕೊಹ್ಲಿ ಅದನ್ನು ಏಕೆ ಮಾಡಬೇಕು? ಅದು ಆರ್‌ಸಿಬಿಯಂತಹ ಲೀಗ್ ತಂಡದಲ್ಲಿ ಆಡುತ್ತಿದ್ದಾರೆ. ಭಾರತ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಆಡುತ್ತಿಲ್ಲ," ಎಂದು ಸಲ್ಮಾನ್ ಬಟ್ ತಿಳಿಸಿದರು.
"ವಿರಾಟ್ ಕೊಹ್ಲಿ ವಿಶ್ವ ದರ್ಜೆಯ ಆಟಗಾರ. ಈ ಸಂಕುಚಿತ ಚಿಂತನೆಯಿಂದ ಹೊರಬನ್ನಿ. ಬಾಬರ್ ಅಜಂ, ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಅವರಂತಹ ದೊಡ್ಡ ಆಟಗಾರರು ಪವರ್-ಹಿಟ್ಟರ್‌ಗಳಲ್ಲ. ಅವರು ತಮ್ಮ ವಿಕೆಟ್‌ಗೆ ಮೌಲ್ಯವನ್ನು ನೀಡುತ್ತಾರೆ. ಬಹುಶಃ ಸೈಮನ್ ಡೌಲ್ ಅವರು ಎಲ್ಲರ ಗಮನ ಸೆಳೆಯಲು ಪ್ರಯತ್ನಿಸುತ್ತಿರಬಹುದು," ಸಲ್ಮಾನ್ ಬಟ್ ಅಭಿಪ್ರಾಯಪಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications