IPL 2023 PBKS Vs GT: ಶುಭಮನ್ ಗಿಲ್ ಅರ್ಧಶತಕ : ಗುಜರಾತ್ ಟೈಟಾನ್ಸ್‌ಗೆ 6 ವಿಕೆಟ್‌ಗಳ ಜಯ
ಇಂಡಿಯನ್ ಪ್ರೀಮಿಯರ್ ಲೀಗ್ 2023ರ 18ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 8 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿದರು. ಆರಂಭಿಕ ಆಟಗಾರ ಶುಭಮನ್ ಗಿಲ್ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ 19.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕೆಕೆಆರ್ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಗುಜರಾತ್ ಜೈಂಟ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ತಂಡವನ್ನು ಸೇರಿಕೊಂಡರು.

ಮೊದಲನೇ ಓವರ್ ನಲ್ಲೇ ಪಂಜಾಬ್ ಕಿಂಗ್ಸ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಮೊಹಮ್ಮದ್ ಶಮಿ ಎರಡನೇ ಎಸೆತದಲ್ಲೇ ಪ್ರಭ್‌ಸಿಮ್ರಾನ್ ಸಿಂಗ್ ಅವರನ್ನು ಔಟ್ ಮಾಡಿದರು. ನಾಯಕ ಶಿಖರ್ ಧವನ್ ಕೂಡ 8 ರನ್ ಗಳಿಸಿ ಔಟಾದರು. ಮ್ಯಾಥ್ಯೂ ಶಾರ್ಟ್ 36 ರನ್ ಗಳಿಸಿದರೆ, ಭಾನುಕಾ ರಾಜಪಕ್ಸ ಕೇವಲ 20 ರನ್ ಗಳಿಸಿದರು.
ಜಿತೇಶ್ ಶರ್ಮಾ 25 ರನ್ ಗಳಿಸಿದರೆ, ಸ್ಯಾಮ್ ಕರನ್ 22, ಶಾರೂಖ್ ಖಾನ್ 22 ಹಪ್ರೀತ್ ಬ್ರಾರ್ 8 ರನ್ ಗಳಿಸಿದರು. ಅಂತಿಮವಾಗಿ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 153 ರನ್‌ಗಳನ್ನು ಕಲೆಹಾಕಿತು. ಬ್ಯಾಟಿಂಗ್‌ಗೆ ಸಹಕಾರಿಯಾಗಿದ್ದ ಪಿಚ್‌ನಲ್ಲಿ ಪಂಜಾಬ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
ಗುಜರಾತ್ ಟೈಟಾನ್ಸ್ ಅತ್ಯುತ್ತಮ ಬೌಲಿಂಗ್ ಮಾಡಿದರು. ಗುಜರಾತ್ ಪರವಾಗಿ ಮೊದಲ ಐಪಿಎಲ್ ಪಂದ್ಯವನ್ನಾಡಿದ ಮೋಹಿತ್ ಶರ್ಮಾ ಎರಡು ವಿಕೆಟ್ ಪಡೆದುಕೊಂಡರೆ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ ಮತ್ತು ಜೋಶ್ವಾ ಲಿಟಲ್ ತಲಾ ಒಂದು ವಿಕೆಟ್ ಪಡೆದರು.

ಶುಭಮನ್ ಗಿಲ್ ಜವಾಬ್ದಾರಿಯುತ ಇನ್ನಿಂಗ್ಸ್
154 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಗುಜರಾತ್ ಜೈಂಟ್ಸ್ ಅತ್ಯುತ್ತಮ ಆರಂಭ ಪಡೆಯಿತು. ಶುಭಮನ್ ಗಿಲ್ ಮತ್ತು ವೃದ್ಧಿಮಾನ್ ಸಾಹ ಮೊದಲನೇ ವಿಕೆಟ್‌ಗೆ 4.4 ಓವರ್ ಗಳಲ್ಲಿ 48 ರನ್ ಕಲೆಹಾಕಿದರು. ವೃದ್ಧಿಮಾನ್ ಸಾಹ 19 ಎಸೆತಗಳಲ್ಲಿ 5 ಬೌಂಡರಿ ಸಹಿತ 30 ರನ್ ಗಳಿಸಿದರು. ಸಾಯಿ ಸುದರ್ಶನ್ ಮತ್ತು ಗಿಲ್ ಜೋಡಿ ಎರಡನೇ ವಿಕೆಟ್‌ಗೆ 41 ರನ್ ಕಲೆಹಾಕಿದರು.
ಸಾಯಿ ಸುದರ್ಶನ್ 20 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರೆ, ನಾಯಕ ಹಾರ್ದಿಕ್ ಪಾಂಡ್ಯ 11 ಎಸೆತಗಳಲ್ಲಿ 8 ರನ್ ಗಳಿಸಿ ಔಟಾದರು. ಆದರೆ ಶುಭಮನ್ ಗಿಲ್ ಮಾತ್ರ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. 49 ಎಸೆತಗಳಲ್ಲಿ 7 ಬೌಂಡರಿ 1 ಸಿಕ್ಸರ್ ಸಹಿತ 67 ರನ್ ಗಳಿಸಿದರು, ಕೊನೆಯವರೆಗೂ ಆಡಿದ ಅವರು, 20ನೇ ಓವರ್ ನಲ್ಲಿ ಸ್ಯಾಮ್ ಕರನ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು.

ಪಂದ್ಯ ಗೆಲ್ಲಿಸಿದ ರಾಹುಲ್ ತೆವಾಟಿಯಾ
ಕೊನೆಯ ಓವರ್ ನಲ್ಲಿ ಗುಜರಾತ್ ಟೈಟನ್ಸ್ ಗೆಲುವಿಗೆ 7 ರನ್ ಬೇಕಿತ್ತು. ಮೊದಲನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಒಂದು ರನ್ ಹೊಡೆದರು, ಎರಡನೇ ಎಸೆತದಲ್ಲಿ ಸ್ಯಾಮ್ ಕರನ್ ಶುಭಮನ್ ಗಿಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಪಂದ್ಯ ರೋಚಕವಾಯಿತು. ನಂತರ ಬಂದ ರಾಹುಲ್ ತೆವಾಟಿಯಾ ಮೂರನೇ ಎಸೆತದಲ್ಲಿ ಒಂದು ರನ್ ಗಳಿಸಿದರು, ನಾಲ್ಕನೇ ಎಸೆತ ಎದುರಿಸಿದ ಮಿಲ್ಲರ್ ಕೂಡ ಒಂದು ರನ್ ಪಡೆದರು. ಗುಜರಾತ್ ಗೆಲುವಿಗೆ 2 ಎಸೆತದಲ್ಲಿ 4 ರನ್ ಬೇಕಿತ್ತು ತೆವಾಟಿಯಾ ಬೌಂಡರಿ ಗಳಿಸುವ ಮೂಲಕ ಇನ್ನೂ ಒಂದು ಎಸೆತ ಬಾಕಿ ಇರುವಂತೆ ಪಂದ್ಯವನ್ನು ಮುಗಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications