Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023 PBKS Vs GT: ಗುಜರಾತ್ ಶಿಸ್ತಿನ ಬೌಲಿಂಗ್: ಸಾಧಾರಣ ಮೊತ್ತ ಕಲೆಹಾಕಿದ ಪಂಜಾಬ್ ಕಿಂಗ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ 2023ರ 18ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಶಿಸ್ತಿನ ಬೌಲಿಂಗ್ ದಾಳಿ ಸಂಘಟಿಸಿತು.

ಟಾಸ್ ಗೆದ್ದು ಬೌಲಿಂಗ್ ತೆಗೆದುಕೊಂಡ ಹಾರ್ದಿಕ್ ಪಾಂಡ್ಯ ಅವರ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಆರಂಭಿಸಿತು. ಮೊದಲ ಓವರ್ ಬೌಲಿಂಗ್ ಮಾಡಿದ ಅನುಭವಿ ಮೊಹಮ್ಮದ್ ಶಮಿ ಎರಡನೇ ಎಸೆತದಲ್ಲೇ ಪ್ರಭ್‌ಸಿಮ್ರಾನ್ ಸಿಂಗ್ ಅವರ ವಿಕೆಟ್ ಪಡೆದುಕೊಂಡರು. ನಾಯಕ ಶಿಖರ್ ಧವನ್ ಕೂಡ 8 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿ ಔಟಾದರು.

Gujarat Titans Restrict Punjab Kings

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಮ್ಯಾಥ್ಯೂ ಶಾರ್ಟ್ ಉತ್ತಮವಾಗಿ ಬ್ಯಾಟಿಂಗ್ ಆರಂಭಿಸಿದರು. 24 ಎಸೆತಗಳಲ್ಲಿ 6 ಬೌಂಡರಿ ಒಂದು ಭರ್ಜರಿ ಸಿಕ್ಸರ್ ಸಹಿತ 36 ರನ್ ಗಳಿಸಿದ ಅವರು, ರಶೀದ್ ಖಾನ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಉತ್ತಮ ಫಾರ್ಮ್‌ನಲ್ಲಿದ್ದ ಭಾನುಕ ರಾಜಪಕ್ಸ ಇಂದು ರನ್ ಗಳಿಸಲು ಪರದಾಡಿದರು, 26 ಎಸೆತಗಳಲ್ಲಿ 1 ಬೌಂಡರಿ ಸಹಿತ ಕೇವಲ ಒಂದು ರನ್ ಗಳಿಸಿದರು.

Gujarat Titans Restrict Punjab Kings

ಗುಜರಾತ್ ಟೈಟನ್ಸ್ ಶಿಸ್ತಿನ ಬೌಲಿಂಗ್

ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ 23 ಎಸೆತಗಳಲ್ಲಿ 25 ರನ್ ಗಳಿಸಿದರು. ಸ್ಯಾಮ್ ಕರನ್ ರನ್ ಗಳಿಸಿದರೆ, ಶಾರೂಖ್ ಖಾನ್ 9 ಎಸೆತಗಳಲ್ಲಿ 22 ರನ್ ಗಳಿಸಿದರು. ಹಪ್ರೀತ್ ಬ್ರಾರ್ 5 ಎಸೆತಗಳಲ್ಲಿ 8 ರನ್ ಗಳಿಸಿದರು, ಅಂತಿಮವಾಗಿ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 153 ರನ್ ಗಳಿಸುವ ಮೂಲಕ ಸಾಧಾರಣ ಮೊತ್ತ ಕಲೆಹಾಕಿದರು.

ಗುಜರಾತ್ ಟೈಟಾನ್ಸ್ ಶಿಸ್ತಿನ ಬೌಲಿಂಗ್ ಪ್ರದರ್ಶನ ನೀಡಿತು. ಮೋಹಿತ್ ಶರ್ಮಾ ಎರಡು ವಿಕೆಟ್ ಪಡೆದುಕೊಂಡರು. ರಶೀದ್ ಖಾನ್ 4 ಓವರ್ ಗಳಲ್ಲಿ 26 ರನ್ ನೀಡಿ 1 ವಿಕೆಟ್ ಪಡೆದುಕೊಂಡರು. ಅಲ್ಜಾರಿ ಜೋಸೆಫ್ 4 ಓವರ್ ಗಳಲ್ಲಿ 32 ರನ್ ನೀಡಿ ಒಂದು ವಿಕೆಟ್ ಪಡೆದರು. ಮೊಹಮ್ಮದ್ ಶಮಿ ಮತ್ತು ಜೋಶ್ವಾ ಲಿಟಲ್ ಕೂಡ ತಲಾ ಒಂದು ವಿಕೆಟ್ ಪಡೆದುಕೊಂಡರು.

ಗುಜರಾತ್ ಜೈಂಟ್ಸ್ ಪ್ಲೇಯಿಂಗ್ 11

ಶುಭಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ರಾಹುಲ್ ತೆವಾಟಿಯಾ, ಡೇವಿಡ್ ಮಿಲ್ಲರ್, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮೋಹಿತ್ ಶರ್ಮಾ, ಮೊಹಮ್ಮದ್ ಶಮಿ, ಜೋಶುವಾ ಲಿಟಲ್. ಇಂಪ್ಯಾಕ್ಟ್ ಪ್ಲೇಯರ್: ವಿಜಯ್ ಶಂಕರ್, ಶಿವಂ ಮಾವಿ, ಜಯಂತ್ ಯಾದವ್, ಅಭಿನವ್ ಮನೋಹರ್, ಶ್ರೀಕರ್ ಭರತ್.

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11

ಶಿಖರ್ ಧವನ್ (ನಾಯಕ), ಪ್ರಭ್‌ಸಿಮ್ರಾನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಭಾನುಕಾ ರಾಜಪಕ್ಸೆ, ಶಾರುಖ್ ಖಾನ್, ಸ್ಯಾಮ್ ಕರ್ರಾನ್, ಕಗಿಸೊ ರಬಾಡ, ಹರ್‌ಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್, ರಿಷಿ ಧವನ್. ಇಂಪ್ಯಾಕ್ಟ್ ಪ್ಲೇಯರ್: ಸಿಖಂದರ್ ರಾಜಾ, ಹಪ್ರೀತ್ ಸಿಂಗ್ ಭಾಟಿಯಾ, ರಾಹುಲ್ ಚಾಹರ್, ಅಥರ್ವ ಟೈಡ್, ಗುರ್ನೂರ್ ಬ್ರಾರ್.

Story first published: Thursday, April 13, 2023, 21:30 [IST]
Other articles published on Apr 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+