PBKS vs GT: ಗುಜರಾತ್ ಟೈಟನ್ಸ್ ಗೆಲುವಿನಲ್ಲಿ ಮಿಂಚಿದ ಮೋಹಿತ್ ಶರ್ಮಾ: 935 ದಿನಗಳ ಬಳಿಕ ವಿಕೆಟ್ ಪಡೆದ ವೇಗಿ
ವೇಗದ ಬೌಲರ್ ಮೋಹಿತ್ ಶರ್ಮಾ ಕ್ರಿಕೆಟ್ ಪ್ರೇಮಿಗಳಿಗೆ ಅಪರಿಚಿತ ಹೆಸರೇನಲ್ಲ. ಆದರೆ ಕಳೆದ ಕೆಲ ಆವೃತ್ತಿಗಳಿಂದ ಮೋಹಿತ್ ಶರ್ಮಾ ಹೆಸರು ಹಿನ್ನಲೆಗೆ ಸರಿದಿತ್ತು. ಮೋಹಿತ್ ಆಡುವ ಬಳಗದಿಂದ ಸ್ಥಾನವನ್ನು ಕಳೆದುಕೊಂಡಿದ್ದು ಮಾತ್ರವಲ್ಲದೆ ಯಾವುದೇ ತಂಡದಲ್ಲಿಯೂ ಸ್ಥಾನವನ್ನು ಪಡೆದುಕೊಂಡಿರಲಿಲ್ಲ. ಆದರೆ ಗುಜರಾತ್ ಟೈಟನ್ಸ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಮೋಹಿತ್ ಶರ್ಮಾ ಐಪಿಎಲ್‌ಗೆ ಇಂದು ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡ ಮೋಹಿತ್ ಶರ್ಮಾ ಸ್ಮರಣೀಯ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಮೋಹಿತ್ ಶರ್ಮಾ ನಾಲ್ಕು ಓವರ್‌ಗಳಲ್ಲಿ ಕೇವಲ 18 ರನ್‌ಗಳನ್ನು ನೀಡಿದ್ದು 2 ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ಎದುರಾಳಿ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಲು ಕಾರಣವಾದರು.

ಅಂದ ಹಾಗೆ ಮೋಹಿತ್ ಶರ್ಮಾ ಭಾರತ ರಾಷ್ಟ್ರೀಯ ತಂಡದಲ್ಲಿಯೂ ಆಡಿರುವ ಈ ವೇಗಿ ಉತ್ತುಂಗಕ್ಕೇರಿ ಬಳಿಕ ಮರೆಯಾಗಿ ಹೋಗಿದ್ದರು. 2014ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಅಮೋಘ ಬೌಲಿಂಗ್ ದಾಳಿ ನಡೆಸಿ ಟೂರ್ನಿಯಲ್ಲೇ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೌರವಕ್ಕೆ ಪಾತ್ರವಾಗಿದ್ದರು ಮೋಹಿತ್ ಶರ್ಮಾ. ಆದರೆ ಇತ್ತೀಚಿನ ವರ್ಷಗಳಲ್ಲಿ ಬೌಲಿಂಗ್‌ನ ಮೊನಚು ಕಳೆದುಕೊಂಡ ಕಾರಣ ಬೇಡಿಕೆಯ ಬೌಲರ್ ಆಗಿ ಉಳಿದುಕೊಂಡಿರಲಿಲ್ಲ. ಆದರೆ ಇದೀಗ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುವಲ್ಲಿ ಅನುಭವಿ ಆಟಗಾರ ಯಶಸ್ವಿಯಾಗಿದ್ದಾರೆ.
ಈ ಅನುಭವಿ ವೇಗಿ ತಮ್ಮ ವೇಗದ ಬದಲಾಗಿ ವೇಗದಲ್ಲಿನ ಏರಿಳಿತ ಹಾಘೂ ಶಿಸ್ತಿನ ಲೈನ್ ಹಾಘೂ ಲೆಂತ್‌ನ ಕಾರಣಕ್ಕೆ ಖ್ಯಾತರಾಗಿದ್ದಾರೆ. ತಮ್ಮ ಈ ವಿಶೇಷ ಶೈಲಿಯ ಕಾರಣದಿಂದಾಗಿಯೇ ಅವರು ಯಶಸ್ಸಿನ ಉತ್ತುಂಗಕ್ಕೂ ಏರಿದ್ದರು. ಐಪಿಎಲ್‌ನಲ್ಲಿ 92 ವಿಕೆಟ್ ಪಡೆದುಕೊಂಡಿರುವುದು ಮಾತ್ರವಲ್ಲದೆ 2014ರಲ್ಲಿ 23 ವಿಕೆಟ್ ಪಡೆದು ಅತಿ ಹೆಚ್ಚಿನ ವಿಕೆಟ್ ಪಡೆದ ಬೌಲರ್ ಎನಿಸಿದ್ದರು. ಭಾರತದ ಪರವಾಗಿ 26 ಏಕದಿನ ಹಾಗೂ 8 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.
ಗುಜರಾತ್ ಟೈಟನ್ಸ್ ಆಡುವ ಬಳಗ; ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶುವಾ ಲಿಟಲ್
ಬೆಂಚ್: ವಿಜಯ್ ಶಂಕರ್, ಶಿವಂ ಮಾವಿ, ಜಯಂತ್ ಯಾದವ್, ಅಭಿನವ್ ಮನೋಹರ್, ಶ್ರೀಕರ್ ಭರತ್, ಯಶ್ ದಯಾಳ್, ಮ್ಯಾಥ್ಯೂ ವೇಡ್, ಪ್ರದೀಪ್ ಸಾಂಗ್ವಾನ್, ದಾಸುನ್ ಶಾನಕ, ಒಡೆಯನ್ ಸ್ಮಿತ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್, ನೂರ್ ಅಹ್ಮದ್
ಪಂಜಾಬ್ ಕಿಂಗ್ಸ್ ಆಡುವ ಬಳಗ: ಪ್ರಭಾಸಿಮ್ರಾನ್ ಸಿಂಗ್, ಶಿಖರ್ ಧವನ್ (ನಾಯಕ), ಮ್ಯಾಥ್ಯೂ ಶಾರ್ಟ್, ಭಾನುಕಾ ರಾಜಪಕ್ಷೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸ್ಯಾಮ್ ಕುರಾನ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ಕಗಿಸೊ ರಬಾಡ, ರಿಷಿ ಧವನ್, ಅರ್ಶ್ದೀಪ್ ಸಿಂಗ್
ಬೆಂಚ್: ಸಿಕಂದರ್ ರಜಾ, ಹರ್‌ಪ್ರೀತ್ ಸಿಂಗ್ ಭಾಟಿಯಾ, ರಾಹುಲ್ ಚಾಹರ್, ಅಥರ್ವ ಟೈಡೆ, ಗುರ್ನೂರ್ ಬ್ರಾರ್, ನಾಥನ್ ಎಲ್ಲಿಸ್, ಮೋಹಿತ್ ರಥಿ, ಬಲ್ತೇಜ್ ಸಿಂಗ್, ಲಿಯಾಮ್ ಲಿವಿಂಗ್‌ಸ್ಟೋನ್, ವಿಧ್ವತ್ ಕಾವೇರಪ್ಪ, ಶಿವಂ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications