Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ವಾರದ ಮಧ್ಯೆ ನಡೆಯಲಿದೆ ಡಬಲ್ ಹೆಡ್ಡರ್: ನಿರ್ಲಕ್ಯ ಮಾಡಿದರೆ ತಪ್ಪಿಸಿಕೊಳ್ಳಲಿದ್ದೀರಿ RCB ಪಂದ್ಯ!

ಐಪಿಎಲ್‌ನಲ್ಲಿ ವಾರಾಂತ್ಯದಲ್ಲಿ ಸಾಮಾನ್ಯವಾಗಿ ಡಬಲ್ ಹೆಡ್ಡರ್‌ಗಳು ನಡೆಯುತ್ತವೆ. ಅದರಲ್ಲೂ ಕಳೆದ ವರ್ಷದ ಆವೃತ್ತಿಯಿಂದ 10 ತಂಡಗಳು ಇರುವ ಕಾರಣ ಎಲ್ಲಾ ಶನಿವಾರ ಹಾಗೂ ಭಾನುವಾರ ಕೂಡ ಎರಡೆರಡು ಪಂದ್ಯಗಳು ಇದ್ದೇ ಇದೆ. ಇದಕ್ಕಾಗಿ ಅಭಿಮಾನಿಗಳು ಕೂಡ ನಿರೀಕ್ಷೆಯಿಂದ ಸಿದ್ಧವಾಗಿರುತ್ತಾರೆ. ಆದರೆ ಏಪ್ರಿಲ್ 20 ಗುರುವಾರದಂದು ಎರಡು ಪಂದ್ಯಗಳು ನಡೆಯಲಿದ್ದು ಆರ್‌ಸಿಬಿ ಅಭಿಮಾನಿಗಳು ಈ ಪಂದ್ಯವನ್ನು ಮಿಸ್ ಮಾಡಿಕೊಳ್ಳಬೇಡಿ.

ಹೌದು ಗುರುವಾರದಂದು ಮಧ್ಯಾಹ್ನ 3:30ಕ್ಕೆ ಹಾಗೂ ಸಂಜೆ 7:30ಕ್ಕೆ ಎರಡು ಪಂದ್ಯಗಳು ನಡೆಯಲಿದೆ. ಮೊದಲ ಮುಖಾಮುಖಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪಂಜಾಬ್ ಕಿಂಗ್ಸ್ ತಂಡ ಸವಾಲೊಡ್ಡಲಿದ್ದು ಮೊಹಾಲಿಯಲ್ಲಿ ಈ ಪಂದ್ಯ ನಡೆಯಲಿದೆ. ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ.

IPL 2023 PBKS vs RCB, double headder match in Thursday, here is the details

ಮಧ್ಯಾಹ್ನ ನಡೆಯಲಿದೆ PBKS vs RCB ಪಂದ್ಯ

ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡದ ಪಂದ್ಯ ಮಧ್ಯಾಹ್ನ ನಡೆಯಲಿದೆ. 3:30ಕ್ಕೆ ಪಂದ್ಯ ಆರಂಬವಾಗಲಿದ್ದು 3 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೊಸಿಯೇಶನ್ IS ಬಿಂದ್ರಾ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ಈ ಮುಖಾಮುಖಿ ತೀವ್ರ ಕುತೂಹಲ ಕೆರಳಿಸಿದೆ.

ಮತ್ತೆ ಗೆಲುವಿನ ಲಯಕ್ಕೆ ಮರಳಲು ಆರ್‌ಸಿಬಿ ಯತ್ನ

ಬೆಂಗಳೂರಿನಲ್ಲೇ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಹೈಸ್ಕೋರ್ ಪಂದ್ಯದಲ್ಲಿ ಆರ್‌ಸಿಬಿ ಕೊನೆಯವರೆಗೆ ಹೋರಾಡಿ ಸೋಲು ಅನುಭವಿಸಿತ್ತು. ಈ ಸೋಲು ಅಂಕಪಟ್ಟಿಯಲ್ಲಿ ಆರ್‌ಸಿಬಿ ತಂಕ್ಕೆ ಭಾರೀ ಹಿನ್ನಡೆಯುಂಟು ಮಾಡಿದೆ. ಐದು ಪಂದ್ಯಗಳಲ್ಲಿ ಆರ್‌ಸಿಬಿ ಎರಡು ಗೆಲುವು ಮಾತ್ರ ಸಾಧಿಸಿದ್ದು ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಅಂಕಗಳನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಆರ್‌ಸಿಬಿಗೆ ಮಹತ್ವದ್ದಾಗಿರಲಿದೆ.

ಉತ್ತಮ ಪ್ರದರ್ಶನ ನೀಡುತ್ತಿದೆ ಪಂಜಾಬ್ ಕಿಂಗ್ಸ್

ಇನ್ನು ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ತಂಡ ಈ ಬಾಇಯ ಐಪಿಎಲ್‌ನಲ್ಲಿ ಶಿಖರ್ ಧವನ್ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಆಡಿರುವ ಐದು ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ 3ರಲ್ಲಿ ಗೆಲುವು ಸಾಧಿಸಿದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಸಂಘಟಿತ ಪ್ರದರ್ಶನ ನೀಡಲು ಯಶಸ್ವಿಯಾಗುತ್ತಿರುವುದು ತಂಡದ ಯಶಸ್ಸಿಗೆ ಕಾರಣವಾಗಿದೆ. ಹೀಗಾಗಿ ಆರ್‌ಸಿಬಿಗೆ ಕಠಿಣ ಸವಾಲೊಡ್ಡುವದರಲ್ಲಿ ಅನುಮಾನವಿಲ್ಲ.

ಮತ್ತೊಂದು ಪಂದ್ಯದಲ್ಲಿ DCಗೆ KKR ಸವಾಲು

ಇನ್ನು ಮತ್ತೊಂದು ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸವಾಲೊಡ್ಡಲಿದೆ. ಈ ಬಾರಿಯ ಐಪಿಎಲ್‌ನಲ್ಲಿ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಆಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿರುವ ಐದು ಪಂದ್ಯಗಳಲ್ಲಿಯೂ ಗೆಲುವಿನ ಖಾತೆ ತೆರೆಯಲು ವಿಫಲವಾಗಿದೆ. ಇದೀಗ ತವರಿನ ಅಂಗಳದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದ್ದು ಈ ಪಂದ್ಯದಲ್ಲಿ ಡಿಸಿ ಬಳಗದಿಂದ ಯಾವ ರೀತಿಯ ಪ್ರದರ್ಶನ ಬರಲಿದೆ ಎಂಬುದು ಕುತೂಹಲ ಮೂಡಿಸಿದೆ.

Story first published: Wednesday, April 19, 2023, 16:28 [IST]
Other articles published on Apr 19, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+