IPL 2023 Points Table: SRH vs KKR ಪಂದ್ಯದ ನಂತರ ಅಂಕಪಟ್ಟಿಯಲ್ಲಿ ಬದಲಾವಣೆ; ಆರೆಂಜ್, ಪರ್ಪಲ್ ಕ್ಯಾಪ್ ಪಟ್ಟಿ
ಶುಕ್ರವಾರ, ಏಪ್ರಿಲ್ 14ರಂದು ಕೋಲ್ಕತ್ತಾದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 19ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡ 23 ರನ್‌ಗಳ ಅಮೋಘ ಗೆಲುವು ದಾಖಲಿಸಿದೆ.
ಈ ಮೂಲಕ 2023ರ ಐಪಿಎಲ್‌ನಲ್ಲಿ ಐಡೆನ್ ಮಾರ್ಕ್ರಾಮ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ಸತತ ಎರಡನೇ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ ದೊಡ್ಡ ಚೇತರಿಕೆ ಕಂಡಿದೆ. ಇನ್ನು ನಿತೀಶ್ ರಾಣಾ ನಾಯಕತ್ವದ ಕೆಕೆಆರ್ ತಂಡ ತನ್ನ ಎರಡನೇ ಸೋಲು ಅನುಭವಿಸಿದೆ.

ಐಪಿಎಲ್ 2023ರ ಮೊದಲ ಶತಕ ಬಾರಿಸಿದ ಹ್ಯಾರಿ ಬ್ರೂಕ್ 55 ಎಸೆತಗಳಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 100 ರನ್ ಗಳಿಸಿದ ಫಲವಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ 228 ರನ್‌ಗಳನ್ನು ಕಲೆಹಾಕಿತು. 229 ರನ್‌ಗಳ ಗುರಿಯನ್ನು ಬೆನಟ್ಟಿದ ಕೆಕೆಆರ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್‌ಗಳನ್ನಷ್ಟೇ ಗಳಿಸಿತು.
2023ರ ಐಪಿಎಲ್‌ಗಾಗಿ 13.25 ಕೋಟಿ ರೂಪಾಯಿ ನೀಡಿ ಹ್ಯಾರಿ ಬ್ರೂಕ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ಹರಾಜಿನಲ್ಲಿ ಖರೀದಿಸಿತ್ತು. ಹ್ಯಾರಿ ಬ್ರೂಕ್ ಶತಕದ ಪ್ರದರ್ಶನದ ಮೂಲಕ ತಮ್ಮ ಬೆಲೆಗೆ ನ್ಯಾಯ ಒದಗಿಸಿದರು.
ಐಪಿಎಲ್ 2023ರ ಅಂಕಪಟ್ಟಿ
ಶುಕ್ರವಾರದ ಪಂದ್ಯದ ನಂತರ ಸನ್‌ರೈಸರ್ಸ್ ಹೈದರಾಬಾದ್ ತಂಡ 2 ಅಂಕಗಳನ್ನು ಗಳಿಸಿ ಐಪಿಎಲ್ 2023ರ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಏರಿದೆ. ಇನ್ನು ಕೆಕೆಆರ್ ತಂಡ ಸೋಲಿನ ಬಳಿಕವೂ 4 ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿ 4 ಅಂಕಗಳನ್ನು ಪಡೆದು ತನ್ನ 4ನೇ ಸ್ಥಾನವನ್ನು ಉಳಿಸಿಕೊಂಡಿದೆ.
ಐಪಿಎಲ್ 2023ರ ಅಂಕಪಟ್ಟಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ 4 ಪಂದ್ಯಗಳಲ್ಲಿ 3 ಗೆಲುವು ಮತ್ತು 1 ಸೋಲಿನ ಮೂಲಕ 6 ಅಂಕಗಳೊಂದಿಗೆ ಉತ್ತಮ ನೆಟ್ ರನ್‌ರೇಟ್ ಹೊಂದಿರುವ ಕಾರಣ ಅಗ್ರಸ್ಥಾನದಲ್ಲಿ ಮುಂದುವರೆದಿದ್ದರೆ, ಅಷ್ಟೇ ಗೆಲುವು ಮತ್ತು ಸೋಲಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ 2ನೇ ಸ್ಥಾನದಲ್ಲಿದೆ.
ಗುಜರಾತ್ ಟೈಟನ್ಸ್ ತಂಡ ಕೂಡ 4 ಪಂದ್ಯಗಳಲ್ಲಿ 3 ಗೆಲುವು ಮತ್ತು 1 ಸೋಲಿನ ಮೂಲಕ 6 ಅಂಕಗಳೊಂದಿಗೆ 3ನೇ ಸ್ಥಾನ ಪಡೆದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 4 ಪಂದ್ಯಗಳಲ್ಲಿ 2 ಗೆಲುವು ಮತ್ತು 2 ಸೋಲಿನೊಂದಿಗೆ 4 ಅಂಕಗಳನ್ನು ಗಳಿಸಿ 5ನೇ ಸ್ಥಾನದಲ್ಲಿದೆ.
ಪಂಜಾಬ್ ಕಿಂಗ್ಸ್ ತಂಡ 4 ಅಂಕಗಳೊಂದಿಗೆ 6ನೇ ಸ್ಥಾನ ಪಡೆದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ 2 ಅಂಕ ಪಡೆದು 8ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ತಂಡ ಸಹ 2 ಕಲೆಹಾಕಿ 9ನೇ ಸ್ಥಾನದಲ್ಲಿದ್ದರೆ, ಇದುವರೆಗೂ ಗೆಲುವೇ ಕಾಣದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಸ್ಥಾನ ಪಡೆದಿದೆ.
| ತಂಡ | ಪಂದ್ಯ | ಗೆಲುವು | ಸೋಲು | ಅಂಕಗಳು |
| ರಾಜಸ್ಥಾನ ರಾಯಲ್ಸ್ | 4 | 3 | 1 | 6 |
| ಲಕ್ನೋ ಸೂಪರ್ ಜೈಂಟ್ಸ್ | 4 | 3 | 1 | 6 |
| ಕೋಲ್ಕತ್ತಾ ನೈಟ್ ರೈಡರ್ಸ್ | 4 | 2 | 2 | 4 |
| ಗುಜರಾತ್ ಟೈಟನ್ಸ್ | 3 | 2 | 1 | 4 |
| ಚೆನ್ನೈ ಸೂಪರ್ ಕಿಂಗ್ಸ್ | 4 | 2 | 2 | 4 |
| ಪಂಜಾಬ್ ಕಿಂಗ್ಸ್ | 3 | 2 | 1 | 4 |
| ಸನ್‌ರೈಸರ್ಸ್ ಹೈದರಾಬಾದ್ | 4 | 4 | 2 | 4 |
| ರಾಯಲ್ ಚಾಲೆಂಜರ್ಸ್ ಬೆಂಗಳೂರು | 3 | 1 | 1 | 2 |
| ಮುಂಬೈ ಇಂಡಿಯನ್ಸ್ | 3 | 1 | 1 | 2 |
| ಡೆಲ್ಲಿ ಕ್ಯಾಪಿಟಲ್ಸ್ | 4 | 0 | 4 | 0 |
ಐಪಿಎಲ್ 2023ರ ಆರೆಂಜ್ ಕ್ಯಾಪ್ ಸ್ಪರ್ಧೆ
ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಆಡಿದ 4 ಪಂದ್ಯಗಳಿಂದ 233 ರನ್ ಗಳಿಸಿ ಐಪಿಎಲ್ 2023ರ ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ ತಂಡ ಸತತ ನಾಲ್ಕು ಸೋಲು ಕಂಡಿದ್ದರೂ, ನಾಯಕ ಡೇವಿಡ್ ವಾರ್ನರ್ 209 ರನ್ ಗಳಿಸಿ ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಜೋಸ್ ಬಟ್ಲರ್, ರುತುರಾಜ್ ಗಾಯಕ್ವಾಡ್ ಮತ್ತಯ ಶುಭ್ಮನ್ ಗಿಲ್ ಇದ್ದಾರೆ.
| ಶಿಖರ್ ಧವನ್ | ಪಂಜಾಬ್ ಕಿಂಗ್ಸ್ | 3 ಪಂದ್ಯ | 225 ರನ್ |
| ಡೇವಿಡ್ ವಾರ್ನರ್ | ಡೆಲ್ಲಿ ಕ್ಯಾಪಿಟಲ್ಸ್ | 4 ಪಂದ್ಯ | 209 ರನ್ |
| ಜೋಸ್ ಬಟ್ಲರ್ | ರಾಜಸ್ಥಾನ ರಾಯಲ್ಸ್ | 4 ಪಂದ್ಯ | 204 ರನ್ |
ಐಪಿಎಲ್ 2023ರ ಪರ್ಪಲ್ ಕ್ಯಾಪ್ ಸ್ಪರ್ಧೆ
ರಾಜಸ್ಥಾನ ರಾಯಲ್ಸ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಆಡಿದ 4 ಪಂದ್ಯಗಳಿಂದ 10 ವಿಕೆಟ್ ಪಡೆದು ಐಪಿಎಲ್ 2023ರ ಪರ್ಪಲ್ ಕ್ಯಾಪ್ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇನ್ನು ತಲಾ 9 ವಿಕೆಟ್ ಪಡೆದಿರುವ ಗುಜರಾತ್ ಟೈಟನ್ಸ್ ಸ್ಪಿನ್ನರ್ ರಶೀದ್ ಖಾನ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಮಾರ್ಕ್ ವುಡ್ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.
| ಯುಜ್ವೇಂದ್ರ ಚಹಾಲ್ | 4 ಪಂದ್ಯ | 10 ವಿಕೆಟ್ |
| ಮಾರ್ಕ್ ವುಡ್ | 3 ಪಂದ್ಯ | 9 ವಿಕೆಟ್ |
| ರಶೀದ್ ಖಾನ್ | 3 ಪಂದ್ಯ | 8 ವಿಕೆಟ್ |
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications