MI vs RCB: ಅಂಕಪಟ್ಟಿಯಲ್ಲಿ ಭಾರೀ ಏರಿಕೆ ಕಂಡ ಮುಂಬೈ ಇಂಡಿಯನ್ಸ್: ಆರ್‌ಸಿಬಿಯ ಪ್ಲೇಆಫ್ ಕನಸು ಭಗ್ನವಾಯಿತಾ?
ಮುಂಬೈ ಇಂಡಿಯನ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ತಮಡ ಹೀನಾಯವಾಗಿ ಸೋಲು ಕಂಡಿದೆ. ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಬೌಲಿಂಗ್‌ನಲ್ಲಿ ಹೀನಾಯ ಪ್ರದರ್ಶನ ನೀಡಿರುವ ಕಾರಣದಿಂದಾಗಿ ಆರ್‌ಸಿಬಿ ಮತ್ತೊಮ್ಮೆ ಸೋಲಿನ ಕಹಿ ಅನುಭವಿಸುವಂತಾಗಿದೆ. ಈ ಸೋಲು ಆರ್‌ಸಿಒಬಿ ತಂಡಕ್ಕೆ ದೊಡ್ಡ ಹಿನ್ನಡೆಯುಂಟು ಮಾಡಿದ್ದು ಪ್ಲೇಆಫ್‌ಗೇರುವ ಸ್ಪರ್ಧೆಯಲ್ಲಿ ಭಾರೀ ಹಿನ್ನಡೆಗೆ ಕಾರಣವಾಗಿದೆ.
ಈ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡ ಆಡಿರುವ 10 ಪಂದ್ಯಗಳಲ್ಲಿ 5 ಗೆಲುವು ಹಾಗೂ ಐದು ಸೋಲು ಅನುಭವಿಸಿ 120 ಅಂಕಗಳನ್ನು ಖಾತೆಯಲ್ಲಿ ಹೊಂದಿತ್ತು. ಹೀಗಾಗಿ ಈ ಪಂದ್ಯವನ್ನು ಗೆದ್ದಿದ್ದರೆ ಆರ್‌ಸಿಬಿ ಅಂಪಟ್ಟಿಯಲ್ಲಿ ಟಾಪ್ 3ನೇ ಸ್ಥಾನಕ್ಕೇರುವ ಅದ್ಭುತ ಅವಕಾಶವಿತ್ತು. ಆದರೆ ಈ ಅವಕಾಶವನ್ನು ಆರ್‌ಸಿಬಿ ಕಳೆದುಕೊಂಡಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಕುಸಿತ ಕಂಡಿದೆ.

3ನೇ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
ಈ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಸಮಾನವಾಗಿತ್ತು. ಆದರೆ ನೆಟ್‌ರನ್‌ರೇಟ್‌ನಲ್ಲಿ ಮುಂಬೈ ಇಂಡಿಯನ್ಸ್ ಹಿಂದಿದ್ದ ಕಾರಣ ಆರ್‌ಸಿಬಿಗಿಂತಲೂ ಕೆಳಗಿನ ಸ್ಥಾನದಲ್ಲಿತ್ತು. ಆದರೆ ಈ ಗೆಲುವಿನಿಂದಾಗಿ ಮುಂಬೈ ಇಂಡಿಯನ್ಸ್ ಸ್ಥಾನದಲ್ಲಿ ಭಾರೀ ಏರಿಕೆಯಾಗಿದ್ದು 11 ಪಂದ್ಯಗಳಲ್ಲಿ 6 ಗೆಲುವು ಹಾಗೂ ಐದು ಸೋಲಿನಿಂದಿಗೆ 12 ಅಂಕಗಳನ್ನು ಗಳಿಸಿದ್ದು ಮೂರನೇ ಸ್ಥಾನಕ್ಕೇ ಏರಿದೆ.
7ನೇ ಸ್ಥಾನಕ್ಕೆ ಕುಸಿದ ಆರ್‌ಸಿಬಿ
ಇನ್ನು ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್ ವಿರುದ್ಧದ ಸೋಲಿನಿಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ. ಸದ್ಯ ಆರ್‌ಸಿಬಿ 11 ಪಂದ್ಯಗಳನ್ನು ಆಡಿದ್ದು 5 ಗೆಲುವು ಹಾಗೂ 6 ಸೋಲು ಕಂಡಿದೆ. ಈ ಮೂಲಕ 10 ಅಂಕಗಳು ಆರ್‌ಸಿಬಿ ಖಾತೆಯಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಹೀನಾಯ ಸೋಲಿನ ಬಳಿಕ ಆರ್‌ಸಿಬಿ ನೆಟ್‌ರನ್‌ರೇಟ್‌ನಲ್ಲಿ ಮತ್ತಷ್ಟು ಹಿಂದೆ ಬಿದ್ದಿದೆ. ಪ್ಲೇಆಫ್ ರೇಸ್‌ನಲ್ಲಿ ಆರ್‌ಸಿಬಿ ಹಿಂದುಳಿಯಲು ಇದು ಕೂಡ ಪ್ರಮುಖ ಕಾರಣ.
ಆರ್‌ಸಿಬಿಯ ಪ್ಲೇಆಫ್ ಕನಸು ಸಂಪೂರ್ಣ ಭಗ್ನವಾಯಿತಾ?
ಮುಂಬೈ ಇಂಡಿಯನ್ಸ್ ವಿರುದ್ಧದ ಈ ಸೋಲಿನಿಂದಾಗಿ ಆರ್‌ಸಿಬಿ ತಂಡದ ಪ್ಲೇಆಫ್ ಕನಸು ಸಂಪೂರ್ಣವಾಗಿ ಭಗ್ನವಾಯಿತಾ ಎಂಬುದು ಸದ್ಯ ಅಭಿಮಾನಿಗಳಲ್ಲಿರುವ ಪ್ರಶ್ನೆ. ಆದರೆ ಈ ಹಂತದಲ್ಲಿ ಆರ್‌ಸಿಬಿಯ ಕನಸು ಸಂಪೂರ್ಣವಾಗಿ ಭಗ್ನವಾಗಿಲ್ಲ. ಆದರೆ ಹಾದು ಕಠಿಣವಾಗಿರುವುದು ನಿಜ. ಆರ್‌ಸಿಬಿ ತಂಡ ಮುಂದಿನ ಮೂರು ಪಂದ್ಯಗಳಲ್ಲಿಯೂ ಗೆಲುವು ಸಾಧಿಸುವುದು ಈಗ ಅನಿವಾರ್ಯವಾಗಿದೆ. ಆದರೆ ಅದು ಸುಲಭವಿಲ್ಲ. ಆರ್‌ಸಿಬಿ ಮುಂದಿನ ಮೂರು ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟನ್ಸ್ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications