For Quick Alerts
ALLOW NOTIFICATIONS  
For Daily Alerts
 

IPL 2023: ಮುಂಬೈ ಪರ 3 ಸಿಕ್ಸರ್ ಚಚ್ಚಿ ಗೆಲುವು ತಂದುಕೊಟ್ಟ ಟಿಮ್ ಡೇವಿಡ್ ಈ ಹಿಂದೆ ಆರ್‌ಸಿಬಿಯಲ್ಲಿದ್ರಾ?

IPL 2023: Present Mumbai Indians star Tim David once played for RCB; Know how much he scored

ಟಿಮ್ ಡೇವಿಡ್.. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವ ಆಟಗಾರ. 2019ರಿಂದ 2020ರವರೆಗೆ ಸಿಂಗಾಪುರ ದೇಶದ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದ ಟಿಮ್ ಡೇವಿಡ್ 2022ರಿಂದ ಆಸ್ಟ್ರೇಲಿಯಾ ಜರ್ಸಿ ತೊಟ್ಟು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾಗವಹಿಸುತ್ತಿದ್ದಾರೆ.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಬಲ್ಲ ಸಾಮರ್ಥ್ಯವಿರುವ ಬಲಗೈ ಬ್ಯಾಟರ್ ಹಾಗೂ ಆಫ್ ಬ್ರೇಕ್ ಬೌಲಿಂಗ್ ಆಲ್‌ರೌಂಡರ್ ಆಗಿರುವ ಟಿಮ್ ಡೇವಿಡ್ 2022ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಪಾಲಾದರು.

ಡೆಲ್ಲಿ ಕ್ಯಾಪಿಟಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ತೀವ್ರ ಪೈಪೋಟಿಯ ನಡುವೆಯೂ ಮುಂಬೈ ಇಂಡಿಯನ್ಸ್ 8.25 ಕೋಟಿ ಸುರಿದು ಟಿಮ್ ಡೇವಿಡ್ ಅವರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಹೀಗೆ ತನ್ನನ್ನು ದುಬಾರಿ ಮೊತ್ತಕ್ಕೆ ಖರೀದಿಸಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಟಿಮ್ ಡೇವಿಡ್ ನ್ಯಾಯ ಒದಗಿಸುವಲ್ಲಿ ವಿಫಲವಾಗಿಲ್ಲ. ಹೌದು, ನಿನ್ನೆ ( ಏಪ್ರಿಲ್ 30 ) ಮುಂಬೈನ ವಾಂಖೆಡೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ರೋಚಕ ಗೆಲುವಿಗೆ ಟಿಮ್ ಡೇವಿಡ್ ಕಾರಣವಾದರು.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿ ಎದುರಾಳಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 213 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾದ ಮುಂಬೈ ಇಂಡಿಯನ್ಸ್ 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು.

ಕೊನೆಯ ಓವರ್‌ನಲ್ಲಿ ಗೆಲ್ಲಲು 17 ರನ್‌ಗಳ ಅಗತ್ಯವಿದ್ದಾಗ ಟಿಮ್ ಡೇವಿಡ್ ಮೊದಲ ಮೂರು ಎಸೆತಗಳಲ್ಲಿಯೇ ಮೂರು ಸಿಕ್ಸರ್‌ಗಳನ್ನು ಬಾರಿಸಿ ಅಬ್ಬರದ ಜಯ ಸಾಧಿಸಲು ಕಾರಣರಾದರು. ಈ ಮೂಲಕ ರೋಹಿತ್ ಶರ್ಮಾ ಹುಟ್ಟುಹಬ್ಬದ ದಿನದಂದೇ ಮುಂಬೈ ಇಂಡಿಯನ್ಸ್ ಈ ಬೃಹತ್ ಗೆಲುವನ್ನು ಸಾಧಿಸಿ ಸತತ ಎರಡು ಸೋಲುಗಳ ಬಳಿಕ ಗೆಲುವಿನ ಹಾದಿಗೆ ಮರಳಿತು.

ಹೀಗೆ ಐಪಿಎಲ್‌ನ 1000ನೇ ಪಂದ್ಯದಲ್ಲಿ 14 ಎಸೆತಗಳಿಗೆ ಅಜೇಯ 45 ರನ್ ಚಚ್ಚಿ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿರುವ ಟಿಮ್ ಡೇವಿಡ್ ಬಗ್ಗೆ ಚರ್ಚೆಗಳು ಜೋರಾಗಿದ್ದು, ಸಾಮಾನ್ಯವಾಗಿ ಡೇವಿಡ್ ಈ ಹಿಂದೆ ಯಾವ ತಂಡದ ಆಟಗಾರನಾಗಿದ್ದರು ಎಂಬ ಅಂಶವೂ ಸಹ ಚರ್ಚೆಗೀಡಾಗಿದೆ.

tim david

ಟಿಮ್ ಡೇವಿಡ್ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿದ್ರು, ಇವರೂ ಸಹ ಆರ್‌ಸಿಬಿಯಿಂದ ಹೊರಬಿದ್ದ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಬ್ಬರಿಸುತ್ತಿದ್ದಾರೆ, ಈತನ ಸಾಮರ್ಥ್ಯವನ್ನು ಗುರುತಿಸುವಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿಫಲವಾಗಿದೆ ಎಂದು ಕಾಮೆಂಟ್ ಹಾಗೂ ಟ್ರೋಲ್‌ಗಳು ಹರಿದಾಡುತ್ತಿವೆ.

ಇನ್ನು 2021ರಲ್ಲಿ ಫಿನ್ ಅಲೆನ್ ಕಣಕ್ಕಿಳಿಯಲು ಅಲಭ್ಯರಾದಾಗ ಆರ್‌ಸಿಬಿ 20 ಲಕ್ಷಕ್ಕೆ ಟಿಮ್ ಡೇವಿಡ್ ಅವರನ್ನು ಖರೀದಿಸಿತ್ತು. ಆದರೆ ಇಡೀ ಟೂರ್ನಿಯಲ್ಲಿ ಟಿಮ್ ಡೇವಿಡ್‌ಗೆ ಒಂದು ಪಂದ್ಯದಲ್ಲಿ ಮಾತ್ರ ಕಣಕ್ಕಿಳಿಯಲು ಅವಕಾಶ ಸಿಕ್ಕಿತ್ತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಟಿಮ್ ಡೇವಿಡ್ 3 ಎಸೆತಗಳಲ್ಲಿ ಕೇವಲ 1 ರನ್ ಕಲೆಹಾಕಿದ್ದರು. ಇದಾದ ಬಳಿಕ ಯಾವುದೇ ಪಂದ್ಯದಲ್ಲಿಯೂ ಸಹ ಟಿಮ್ ಡೇವಿಡ್‌ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ.

ಇನ್ನು ಕಳೆದ ವರ್ಷ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದು 8 ಪಂದ್ಯಗಳಲ್ಲಿ 186 ರನ್ ಗಳಿಸಿದ್ದ ಟಿಮ್ ಡೇವಿಡ್ ಈ ಬಾರಿ ಆಡುವ ಹೆಚ್ಚು ಅವಕಾಶ ಪಡೆದುಕೊಂಡಿದ್ದಾರೆ. ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಆಡಿರುವ ಎಲ್ಲಾ ಪಂದ್ಯಗಳಲ್ಲಿಯೂ ಆಡುವ ಅವಕಾಶವನ್ನು ಪಡೆದುಕೊಂಡಿರುವ ಟಿಮ್ ಡೇವಿಡ್ 8 ಪಂದ್ಯಗಳಲ್ಲಿ 158 ರನ್ ಕಲೆಹಾಕಿದ್ದಾರೆ.

Story first published: Monday, May 1, 2023, 11:36 [IST]
Other articles published on May 1, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+