Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ವಡಾಪಾವ್, ಟೀ.. ರೋಹಿತ್ ಕುರಿತು ಕೆಟ್ಟದಾಗಿ ಟ್ರೋಲ್ ಮಾಡಿದ ಪಂಜಾಬ್ ಕಿಂಗ್ಸ್! ಇದೆಷ್ಟು ಸರಿ?

IPL 2023: Punjab Kings indirectly trolled Rohit Sharma by posting Vadapav tweet

ಪ್ರಸ್ತುತ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದು, ಇಂದು (ಏಪ್ರಿಲ್ 22) ಎರಡು ಪಂದ್ಯಗಳು ಜರುಗಲಿವೆ. ಮಧ್ಯಾಹ್ನ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾದರೆ, ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಈ ಮೂಲಕ ಟೂರ್ನಿಯ ಲೀಗ್ ಹಂತದ ಒಟ್ಟು 31 ಪಂದ್ಯಗಳು ಮುಕ್ತಾಯವಾಗಲಿದ್ದು, ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳುವಲ್ಲಿ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಹೀಗೆ ದಿನದಿಂದ ದಿನಕ್ಕೆ ತಂಡಗಳ ನಡುವೆ ಪೈಪೋಟಿ ಹೆಚ್ಚಾಗುತ್ತಿದ್ದು, ವಿವಿಧ ತಂಡಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟವೂ ಸಹ ಹೆಚ್ಚಾಗುತ್ತಿದೆ. ತಂಡವೊಂದರ ಅಥವಾ ಆಟಗಾರರ ನೆಗೆಟಿವ್ ಅಂಶಗಳನ್ನು ಎದುರಾಳಿ ತಂಡದ ಅಭಿಮಾನಿಗಳು ಬಳಸಿ ಟ್ರೋಲ್ ಮಾಡುತ್ತಿದ್ದಾರೆ.

ಇನ್ನು ಅಭಿಮಾನಿಗಳು ಮಾತ್ರವಲ್ಲದೇ ಫ್ರಾಂಚೈಸಿಗಳೂ ಸಹ ತಮ್ಮ ಎದುರಾಳಿ ತಂಡಗಳ ಬಗ್ಗೆ ತಮ್ಮ ಖಾತೆಗಳಲ್ಲಿ ಟ್ರೋಲ್ ಪೋಸ್ಟ್ ಹಾಕಿ ಕಾಲೆಳೆದ ಉದಾಹರಣೆಗಳಿವೆ. ಮೊನ್ನೆಯಷ್ಟೇ ಲಕ್ನೋ ಸೂಪರ್ ಜೈಂಟ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದ ಬಳಿಕ ಸಾಮಾಜಿಕ ಜಾಲತಾಣದಲ್ಲಿ 'ಮಹಿಳೆಯರೇ ಹಾಗೂ ಮಹನೀಯರೇ, ಪ್ಲೇ ಬೋಲ್ಡ್ ಎಂದರೆ ಈ ರೀತಿ ಆಡುವುದು' ಎಂದು ಬರೆದುಕೊಳ್ಳುವ ಮೂಲಕ ಆರ್‌ಸಿಬಿ ತಂಡವನ್ನು ಕಾಲೆಳೆದಿತ್ತು.

ಈ ಟ್ವೀಟ್ ಭಾರೀ ಆಕ್ರೋಶಕ್ಕೂ ಸಹ ಕಾರಣವಾಗಿತ್ತು. ಆದರೆ ಇದರಲ್ಲಿ ಲಕ್ನೋ ಯಾರನ್ನೂ ಸಹ ನೋಯಿಸುವ ಹಾಗೆ ಬರೆದುಕೊಂಡಿಲ್ಲ, ಇದನ್ನು ಆಟದ ದೃಷ್ಟಿಯಲ್ಲಿ ಮಾತ್ರ ನೋಡಿ ಎಂದು ಹಲವರು ಕಾಮೆಂಟ್ ಮಾಡಿದ್ದರು. ಇದೇ ರೀತಿಯ ಟ್ವೀಟ್ ಒಂದನ್ನು ಇದೀಗ ಪಂದ್ಯ ನಡೆಯುವುದಕ್ಕೂ ಮುನ್ನವೇ ಪಂಜಾಬ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡದ ಕಾಲನ್ನು ಎಳೆಯಲು ಮಾಡಿದೆ.

ಹೌದು, ಇಂದು ರಾತ್ರಿ ನಡೆಯಲಿರುವ ಪಂದ್ಯದಲ್ಲಿ ತನ್ನ ಎದುರಾಳಿ ತಂಡವಾಗಿ ಕಣಕ್ಕಿಳಿಯಲಿರುವ ಮುಂಬೈ ಇಂಡಿಯನ್ಸ್ ಕಾಲನ್ನು ಎಳೆಯಲು ಪಂಜಾಬ್ ಕಿಂಗ್ಸ್ ಟ್ವೀಟ್ ಒಂದನ್ನು ಮಾಡಿದ್ದು, ಇದು ರೋಹಿತ್ ಶರ್ಮಾ ಅಭಿಮಾನಿಗಳಿಗೆ ಬೇಸರವನ್ನು ತರಿಸಿದೆ. ರಬಾಡಾ ಫೋಟೊ ಮುಂದೆ ವಡಾಪಾವ್ ಹಾಗೂ ಟೀಯನ್ನು ಎಡಿಟ್ ಮಾಡಲಾಗಿರುವ ಫೋಟೊವನ್ನು ಟ್ವೀಟ್ ಮಾಡಿರುವ ಪಂಜಾಬ್ ಕಿಂಗ್ಸ್ 'ರಬಾಡಾಗೆ ಇಷ್ಟವಿರುವ ತಿಂಡಿ ಏನೆಂದು ಊಹಿಸಬಲ್ಲಿರಾ? ಮುಂಬೈನಲ್ಲಿದ್ದಾಗ ರಬಾಡಾಗೆ ವಡಾಪಾವ್ ಹಾಗೂ ಟೀ ಎಂದರೆ ಬಲು ಇಷ್ಟ' ಎಂದು ಬರೆದುಕೊಂಡಿದೆ.

punjab kings

ಇನ್ನು ರೋಹಿತ್ ಶರ್ಮಾರನ್ನು ಫಿಟ್‌ನೆಸ್ ವಿಚಾರವಾಗಿ ಟ್ರೋಲ್ ಮಾಡುವಾಗ ವಡಾಪಾವ್ ಹೆಚ್ಚಾಗಿ ತಿಂದ ಕಾರಣ ಫಿಟ್‌ನೆಸ್ ಕಾಪಾಡಲಾಗುತ್ತಿಲ್ಲ ಎಂದು ಕಾಲೆಳೆಯುವುದು ಪ್ರತಿ ಕ್ರಿಕೆಟ್ ಪ್ರೇಮಿಗೂ ಸಹ ತಿಳಿದಿರುವ ವಿಷಯವೇ. ಹೀಗಾಗಿ ಪಂಜಾಬ್ ಕಿಂಗ್ಸ್ ಮಾಡಿರುವ ಈ ಟ್ವೀಟ್ ರೋಹಿತ್ ಶರ್ಮಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಭಾರತದ ಫ್ರಾಂಚೈಸಿಯೊಂದು ಟೀಮ್ ಇಂಡಿಯಾ ನಾಯಕನನ್ನು ಇಷ್ಟು ಕೆಳಮಟ್ಟಕ್ಕೆ ಇಳಿದು ಪರೋಕ್ಷವಾಗಿ ಟ್ರೋಲ್ ಮಾಡುವುದು ಎಷ್ಟು ಸರಿ ಎಂದು ಕ್ರಿಕೆಟ್ ಪ್ರೇಮಿಗಳು ಪ್ರಶ್ನೆ ಹಾಕಿದ್ದಾರೆ.

ಇನ್ನು ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಆರನೇ ಸ್ಥಾನದಲ್ಲಿದ್ದು, ಮುಂಬೈ ಇಂಡಿಯನ್ಸ್ ಏಳನೇ ಸ್ಥಾನದಲ್ಲಿದೆ. ಸದ್ಯ ಈ ಟ್ವೀಟ್‌ನಿಂದ ಇತ್ತಂಡಗಳ ನಡುವಿನ ಪಂದ್ಯದ ರೋಚಕತೆ ಹೆಚ್ಚಾಗಿದ್ದು, ಯಾವ ತಂಡ ಗೆದ್ದು ಎದುರಾಳಿಗಳನ್ನು ಮೈದಾನದಲ್ಲಿ ಟ್ರೋಲ್ ಮಾಡುತ್ತೋ ಕಾದು ನೋಡಬೇಕಿದೆ.

Story first published: Saturday, April 22, 2023, 13:27 [IST]
Other articles published on Apr 22, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+