Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಸತತ 2ನೇ ಪಂದ್ಯ ಗೆದ್ದ ಬಳಿಕ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಹೇಳಿದ್ದಿಷ್ಟು!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಟೂರ್ನಿ ನಿಧಾನಕ್ಕೆ ಕಾವೇರುತ್ತಿದೆ. ಬುಧವಾರ ನಡೆದ ಐಪಿಎಲ್ 16ನೇ ಆವೃತ್ತಿಯ 8ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದು ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಈ ಗೆಲುವಿನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಪಾತ್ರವು ಮಹತ್ವದ್ದಾಗಿತ್ತು. ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಶಿಖರ್ ಧವನ್ ಆರಂಭಿಕನಾಗಿ ಕಣಕ್ಕಿಳಿದು 86 ರನ್‌ಗಳನ್ನು ಗಳಿಸಿದರು. 153.57ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ ಶಿಖರ್ ಧವನ್ 9 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದ್ದರು. ಈ ಗೆಲುವಿನ ಬಳಿಕ ಮಾತನಾಡಿದ ಪಂಜಾಬ್ ನಾಯಕ ಶಿಖರ್ ಧವನ್ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು ತಮ್ಮ ಬ್ಯಾಟಿಂಗ್‌ನಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಯೊಂದನ್ನು ಹೇಳಿಕೊಂಡಿದ್ದಾರೆ.

IPL 2023: Punjab Kings skipper Shikhar Dhawan happy after consecutive 2 victory

"ಈ ಎರಡು ಪಂದ್ಯಗಳಲ್ಲಿ ನಾವು ಗೆಲುವು ಸಾಧಿಸಿ ಅದ್ಭುತವಾದ ಆರಂಭವನ್ನು ಪಡೆದುಕೊಂಡಿದ್ದು ಉತ್ತಮವಾಘಿ ಆಡುತ್ತಿದ್ದೇವೆ. ನಾನು ಕೂಡ ನನ್ನ ಸ್ಟ್ರೈಕ್‌ರೇಟನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನವನ್ನು ನಡೆಸುತ್ತೇನೆ. ವಿಕೆಟ್‌ಗಳು ಪಂದ್ಯದ ಮೇಲಿನ ಹಿಡಿತವನ್ನು ತಕ್ಷಣಕ್ಕೆ ಹೆಚ್ಚಿಸುತ್ತದೆ. ಈ ಬಾರಿ ನಾವು ಬ್ಯಾಟಿಂಗ್ ಲೈನಪ್‌ನಲ್ಲಿ ಹೆಚ್ಚಿನ ಆಳವನ್ನು ಹೊಂದಿದ್ದೇವೆ ಹಾಗಾಗಿ ಹೆಚ್ಚಿನ ಬೌಂಡರಿಗಳನ್ನು ಬಾರಿಸಿ ಎದುರಾಳಿಗಳ ಮೇಲೆ ಒತ್ತಡವನ್ನು ಹೇರಬಹುದಾಗಿದೆ" ಎಂದಿದ್ದಾರೆ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್.

ಮುಂದುವರಿದು ಮಾತನಾಡಿದ ಅವರು, "ಎದುರಾಳಿ ತಂಡಗಳು ಕೂಡ ಅದ್ಭುತವಾದ ಬೌಲಿಂಗ್ ವಿಭಾಗವನ್ನು ಹೊಂದಿರುವ ಕಾರಣ ಕೆಲ ಅದ್ಭುಗವಾದ ಓವರ್‌ಗಳನ್ನು ಎಸೆಯುತ್ತಾರೆ. ಹಾಗಾಗಿ ಎದುರಾಳಿಗಳಿಗೂ ನೀವು ಗೌರವವನ್ನು ನೀಡಬೇಕಾಗುತ್ತದೆ. ಆದರೆ ಆಕ್ರಮಣಕಾರಿ ಆಟವನ್ನು ಮುಂದುವರಿಸಿಕೊಂಡು ಮುಂದುವರಿಯಬೇಕು" ಎಂದಿದ್ದಾರೆ ಪಂಜಾಬ್ ಕಿಂಗ್ಸ್ ತಂಡದ ಅನುಭವಿ ಆಟಗಾರ ಹಾಗೂ ನಾಯಕ ಶಿಖರ್ ಧವನ್.

ಈ ಪಂದ್ಯದಲ್ಲಿ ಶಿಖರ್ ಧವನ್ ಯುವ ಆಟಗಾರ ಪ್ರಬ್ಸಿಮ್ರಾನ್ ಸಿಂಗ್ ಜೊತೆಗೂಡಿ ಅದ್ಭುತವಾದ ಆರಂಭವನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 90 ರನ್‌ಗಳ ಜೊತೆಯಾಟವನ್ನು ನೀಡಿತು. ಪ್ರಬ್ಸಿಮ್ರಾನ್ 34 ಎಸೆತಗಳನ್ನು ಎದುರಿಸಿ 60 ರನ್‌ ಬಾರಿಸಿ ಸ್ಪೋಟಕ ಆರಂಭವನ್ನು ಪಡೆಯಲು ಕಾರಣವಾದರು. ಆದರೆ ಶಿಖರ್ ಧವನ್ ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಪ್ರದರ್ಶಿಸಿದ್ದು ಮೊದಲ 44 ರನ್‌ಗಳನ್ನು ಗಳಿಸಲು 36 ಎಸೆತಗಳ್ನು ಬಳಸಿಕೊಂಡಿದ್ದರು. ಬಳಿಕ ತಮ್ಮ ರನ್‌ವೇಗವನ್ನು ಹೆಚ್ಚಿಸಿದ ಅವರು ಸ್ಪಿನ್ನರ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಆರಂಭಿಸಿದರು.

ಇನ್ನು ಈ ಪಂದ್ಯದಲ್ಲಿ ಶಿಖರ್ ಧವನ್ ಹಾಗೂ ಪ್ರಬ್ಸಿಮ್ರಾನ್ ಭರ್ಜರಿ ಪ್ರದರ್ಶನದ ಕಾರಣದಿಂದಾಗಿ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 197 ರನ್‌ಗಳನ್ನು ಗಳಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಆರ್ ಅಶ್ವಿನ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಲೆಕ್ಕಾಚಾರ ಕೂಡ ಫಲಿಸಲಿಲ್ಲ. ನಾಯಕ ಸಂಜು ಸ್ಯಾಮ್ಸನ್, ಶಿಮ್ರಾನ್ ಹೇಟ್ಮೇಯರ್ ಧ್ರುವ್ ಜೋರೆಲ್ ಸಾಕಷ್ಟು ಹೋರಾಟ ನಡೆಸಿದರಾದರೂ 5 ರನ್‌ಗಳ ಅಲ್ಪ ಅಂತರದಿಂದ ಗೆಲುವು ಅಸಾಧ್ಯವಾಯಿತು. ಈ ಮೂಲಕ ಆರ್‌ಆರ್ ಈ ಆವೃತ್ತಿಯಲ್ಲಿ ಮೊದಲ ಸೋಲು ಕಂಡರೆ ಪಂಜಾಬ್ ಕಿಂಗ್ಸ್ ಸತತ ಎರಡನೇ ಗೆಲುವು ಸಾಧಿಸಿದೆ.

Story first published: Thursday, April 6, 2023, 8:58 [IST]
Other articles published on Apr 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+