IPL 2023: ಈ ಕಾರಣಕ್ಕೆ ಚೆನ್ನೈ ವಿರುದ್ಧ ಚೆಪಾಕ್ ಮೈದಾನದಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಶುಬ್ಮನ್ ಗಿಲ್
ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಕ್ವಾಲಿಫೈಯರ್ ಪಂದ್ಯ ಆಯೋಜನೆಯಾಗಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಸಿಎಸ್‌ಕೆ ತಂಡದ ತವರಿನ ಮೈದಾನದಲ್ಲಿ ಈ ಪಂದ್ಯ ನಡೆಯಲಿರುವ ಕಾರಣ ತವರಿನ ಲಾಭವನ್ನು ಸಿಎಸ್‌ಕೆ ಹೇಗೆ ಬಳಸಿಕೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಗುಜರಾತ್ ಟೈಟನ್ಸ್ ತಂಡದ ಸ್ಟಾರ್ ಆಟಗಾರ ಶುಬ್ಮನ್ ಗಿಲ್ ಪ್ರತಿಕ್ರಿಯಿಸಿದ್ದು ಚೆಪಾಕ್ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್ ಪಂದ್ಯ ನಡೆಯಲಿರುವ ಕಾರಣ ಆತವಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚೆನ್ನೈನ ಈ ಕ್ರೀಡಾಂಗಣ ಗುಜರಾತ್ ಟೈಟನ್ಸ್ ತಂಡ ಹೊಂದಿರುವ ಆಟಗಾರರಿಗೆ ಹೆಚ್ಚು ಸೂಕ್ತವಾಗಿದೆ ಎಂದು ಗಿಲ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಈ ಮೈದಾನದಲ್ಲಿ ಮೇಲುಗೈ ಸಾಧಿಸುವ ಭರವಸೆಯಿದೆ ಎಂದಿದ್ದಾರೆ.

"ಚೆನ್ನೈ ಪಿಚ್‌ಗೆ ಪೂರಕವಾಗಿರುವಂತಾ ಬೌಲಿಂಗ್ ವಿಭಾಗವನ್ನು ನಾವು ಹೊಂದಿದ್ದೇವೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚೆನ್ನೈನಲ್ಲಿಯೇ ಎದುರಿಸುತ್ತಿರುವ ಕಾರಣ ಇದು ಬಹಳಷ್ಟು ನಿರೀಕ್ಷೆಯ ಪಂದ್ಯವಾಗಿದೆ. ಎರಡನೇ ಬಾರಿಗೆ ನಾವು ಫೈನಲ್‌ಗೆ ಪ್ರವೇಶ ಪಡೆಯುವ ವಿಶ್ವಾಸ ನಮಗಿದೆ" ಎಂದಿದ್ದಾರೆ ಶುಬ್ಮನ್ ಗಿಲ್.
ಇನ್ನು ಇದೇ ಸಂಧರ್ಭದಲ್ಲಿ ಶುಬ್ಮಗ್ ಗಿಲ್ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸಿಡಿಸಿದ ಶತಕದ ಬಗ್ಗೆ ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿ ಬಗ್ಗೆ ಮಾತನಾಡಿದ್ದಾರೆ. "ಉತ್ತಮವಾರ ಆರಂಭವನ್ನು ಪಡೆಯುವುದು ಇಲ್ಲಿ ಬಹಳ ಮುಖ್ಯವಾಗುತ್ತದೆ. ನಂತರ ಅದನ್ನು ದೊಡ್ಡ ಇನ್ನಿಂಗ್ಸ್‌ಆಗಿ ಬದಲಾಯಿಸಬೇಕು. ಸಂತಸದ ಸಂಗತಿಯೆಂದರೆ ಕಳೆದ ಪಂದ್ಯದಲ್ಲಿ ಅಂದುಕೊಂಡಂತೆಯೇ ನಡೆಯಿತು" ಎಂದಿದ್ದಾರೆ ಶುಬ್ಮನ್ ಗಿಲ್ಲ.
ಇನ್ನು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಈವರೆಗೆ ಅಜೇಯ ಸಾಧನೆ ಮಾಡಿದೆ. ಈವರೆಗೆ ಈ ಎರಡು ತಮಡಗಳು ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಮೂರರಲ್ಲಿಯೂ ಹಾರ್ದಿಕ್ ಪಡೆ ಗೆಲುವು ಸಾಧಿಸಿದೆ. ಇದು ಸಹಜವಾಗಿ ಜಿಟಿ ತಂಡಕ್ಕೆ ಹೆಚ್ಚಿನ ಆತ್ಮವಿಶ್ವಾಸ ನೀಡಲಿದೆ. ಇದೀಗ ಮತ್ತೊಮ್ಮೆ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿದ್ದು ಪಂದ್ಯದ ಕುತೂಹಲ ಹೆಚ್ಚಾಗಿದೆ.
ಇನ್ನು ಶುಬ್ಮನ್ ಗಿಲ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅಮೋಘ ಫಾರ್ಮ್ ಪ್ರದರ್ಶಿಸಿದ್ದಾರೆ. ಸತತ ಎರಡನೇ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ ಗಿಲ್. 14 ಪಂದ್ಯಗಳಲ್ಲಿ ಆಡಿರುವ ಪಂಜಾಬ್ ಮೂಲದ ಈ ಆಟಗಾರ 680 ರನ್‌ಗಳನ್ನು ಗಳಿಸಿದ್ದು ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಅವರಿಗಿಂತ ಕೇವಲ 50 ರನ್ ಹಿಂದಿದ್ದು ಕನಿಷ್ಠ ಎರಡು ಪಂದ್ಯಗಳಲ್ಲಿ ಆಡುವ ಅವಕಾಶವಿರುವ ಕಾರಣ ಮೊದಲ ಸ್ಥಾನಕ್ಕೇರುವ ಅವಕಾಶ ನಿಚ್ಚಳವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications