Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ರವಿಚಂದ್ರನ್ ಅಶ್ವಿನ್ ಔಟಾಗ್ತಿದ್ದಂತೆ ಕಣ್ಣೀರು ಹಾಕಿದ ಮಗಳು: ವಿಡಿಯೋ ನೋಡಿ

ಐಪಿಎಲ್‌ 2023ರ ಆವೃತ್ತಿಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಗುಜರಾತ್ ಟೈಟನ್ಸ್ ವಿರುದ್ಧ ಗೆಲುವು ಸಾಧಿಸಿದೆ. ಭಾನುವಾರ ನಡೆದ ರೋಚಕ ಪಂದ್ಯದಲ್ಲಿ 3 ವಿಕೆಟ್‌ ಗೆಲುವು ಪಡೆದ ರಾಜಸ್ಥಾನ ರಾಯಲ್ಸ್ ಐಪಿಎಲ್‌ನಲ್ಲಿ ಮೊದಲ ಗೆಲುವು ಸಾಧಿಸಿದೆ. ರವಿಚಂದ್ರನ್ ಅಶ್ವಿನ್ 3 ಎಸೆತಗಳಲ್ಲಿ 10 ರನ್ ಗಳಿಸಿ ರಾಜಸ್ಥಾನ ಗೆಲುವನ್ನು ಸುಲಭವಾಗಿಸಿತು. ಅಪ್ಪನ ಬ್ಯಾಟಿಂಗ್ ಅನ್ನು ಟಿವಿಯಲ್ಲಿ ನೋಡುತ್ತಿದ್ದ ಅಶ್ವಿನ್ ಮಗಳು, ಅವರು ಔಟಾಗುತ್ತಿದ್ದಂತೆ ಗಳ ಗಳನೆ ಅತ್ತಿದ್ದಾಳೆ.

ರವಿಚಂದ್ರನ್ ಅಶ್ವಿನ್ ಸದ್ಯ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್‌ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿ ಕೂಡ ಅವರು ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೂಡ ಅಶ್ವಿನ್ ಅತ್ಯುತ್ತಮ ಪ್ರದರ್ಶನ ನೀಡಿದರು. 4 ಓವರ್ ಗಳಲ್ಲಿ 37 ರನ್ ನೀಡಿದ ಅವರು, ವಿಕೆಟ್ ಪಡೆಯುವಲ್ಲಿ ವಿಫಲವಾದರು. ಬೌಲಿಂಗ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡದಿದ್ದರೂ ಬ್ಯಾಟಿಂಗ್‌ನಲ್ಲಿ ಮಿಂಚಿದರು.

Ravichandran Ashwin

19ನೇ ಓವರ್ ನಲ್ಲಿ ಅಶ್ವಿನ್ ಬ್ಯಾಟಿಂಗ್‌ಗೆ ಬಂದಾಗ ರಾಜಸ್ಥಾನ ರಾಯಲ್ಸ್ ಗೆಲುವಿಗೆ 10 ಎಸೆತಗಳಲ್ಲಿ 17 ರನ್ ಬೇಕಿತ್ತು. ಅಶ್ವಿನ್ ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ತಾವು ಎದುರಿಸಿದ ಮೊದಲ ಎಸೆತವನ್ನೇ ಬೌಂಡರಿಗೆ ಕಳುಹಿಸಿದರು. ಎರಡನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ರಾಜಸ್ಥಾನವನ್ನು ಗೆಲುವನ್ನು ಸುಲಭವಾಗಿಸಿದರು, ಮೂರನೇ ಎಸೆತದಲ್ಲೇ ಅವರು ಮತ್ತೊಂದು ಬೌಂಡರಿ ಗಳಿಸಲು ಯತ್ನಿಸಿ ತೆವಾಟಿಯಾಗೆ ಕ್ಯಾಚ್ ನೀಡಿದರು. ಅವರು ಔಟಾದಾಗ ರಾಜಸ್ಥಾನ ಗೆಲುವಿಗೆ 7 ಎಸೆತಗಳಲ್ಲಿ 7 ರನ್ ಬೇಕಿತ್ತು.

ಅಶ್ವಿನ್ ಔಟಾಗುತ್ತಿದ್ದಂತೆ ಕಣ್ಣೀರು ಹಾಕಿದ ಮಗಳು

ಅಪ್ಪನ ಆಟವನ್ನು ಟಿವಿಯಲ್ಲಿ ನೋಡಿ ಮಗಳು ಆನಂದಿಸುತ್ತಿದ್ದಳು. ಅಶ್ವಿನ್ 10 ರನ್ ಗಳಿಸಿ ಔಟಾಗುತ್ತಿದ್ದಂತೆ ಕಣ್ಣೀರು ಹಾಕುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾಳೆ. ಅಶ್ವಿನ್ ಪತ್ನಿ ಪ್ರೀತಿ ನಾರಾಯಣ್ ಈ ಮುದ್ದಾದ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರವಿಚಂದ್ರನ್ ಅಶ್ವಿನ್ ಅವರಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ಅಕಿರ ಅಶ್ವಿನ್ ಮತ್ತು ಆದ್ಯ ಆಶ್ವಿನ್. ಅಕಿರ ಅಶ್ವಿನ್ ಅಪ್ಪ ಔಟಾಗುತ್ತಿದ್ದಂತೆ ಕಣ್ಣೀರು ಹಾಕಿದರು.

Ravichandran Ashwin

ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್

ರಾಜಸ್ಥಾನ ರಾಯಲ್ಸ್ ಸದ್ಯ ಆಡಿರುವ 5 ಪಂದ್ಯಗಳಲ್ಲಿ 4 ಗೆಲುವು ಸಾಧಿಸುವ ಮೂಲಕ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕಳೆದ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಅವರು, ಫೈನಲ್‌ ಕೂಡ ತಲುಪಿದ್ದರು. ಆದರೆ, ಗುಜರಾತ್ ಟೈಟಾನ್ಸ್ ವಿರುದ್ಧ ಸೋಲುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ಬಾರಿ ಮತ್ತೆ ಚಾಂಪಿಯನ್ ಆಗುವ ಮಹತ್ವಾಕಾಂಕ್ಷೆ ಹೊಂದಿದ್ದು, ಅದೇ ರೀತಿಯ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದ್ದ ರಾಜಸ್ಥಾನ ರಾಯಲ್ಸ್ ಈ ಬಾರಿ ಮೊದಲ ಮುಖಾಮುಖಿಯಲ್ಲೇ ಹಾಲಿ ಚಾಂಪಿಯನ್ನರನ್ನು ಸೋಲಿಸಿದೆ. ಶಿಮ್ರಾನ್ ಹೆಟ್ಮೆಯರ್, ಸಂಜು ಸ್ಯಾಮ್ಸನ್ ಅಮೋಘ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಗೆಲ್ಲಿಸಿದರು. ಪಂದ್ಯದ ನಂತರ ಮಾತನಾಡಿದ, ಹೆಟ್ಮೆಯರ್ ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಿಕೊಂಡಿದ್ದೇವೆ ಎಂದು ಹೇಳಿದರು. ರಾಜಸ್ಥಾನ ರಾಯಲ್ಸ್ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ.

Story first published: Monday, April 17, 2023, 18:50 [IST]
Other articles published on Apr 17, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+