Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ravindra Jadeja: ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 9ನೇ ಭಾರತೀಯ ರವೀಂದ್ರ ಜಡೇಜಾ

ಭಾರತ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಬುಧವಾರ, ಏಪ್ರಿಲ್ 13ರಂದು ಟಿ20 ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳ ಮೈಲುಗಲ್ಲು ಸ್ಥಾಪಿಸಿದರು.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ರಾಜಸ್ಥಾನ ರಾಯಲ್ಸ್ ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಂದ್ಯದಲ್ಲಿ ರವೀಂದ್ರ ಜಡೇಜಾ ಈ ಸಾಧನೆ ಮಾಡಿದರು.

IPL 2023: Ravindra Jadeja Becomes 9th Indian To Take 200 Wickets In T20 Cricket

ವಿಶ್ವದ ಈ ತಲೆಮಾರಿನ ವಿಕೆಟ್ ಟೇಕರ್ ಬೌಲರ್‌ಗಳಲ್ಲಿ ಒಬ್ಬರಾಗಿರುವ ರವೀಂದ್ರ ಜಡೇಜಾ, ಟಿ20 ಸ್ವರೂಪದ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳ ಕ್ಲಬ್‌ಗೆ ಪ್ರವೇಶಿಸಿದ 9ನೇ ಭಾರತೀಯ ಆಟಗಾರನಾಗಿದ್ದಾರೆ.

ಬುಧವಾರ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬೌಲರ್ ಆಗಿದ್ದರು. ದೇವದತ್ ಪಡಿಕ್ಕಲ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಅವರ ವಿಕೆಟ್ ಪಕಬಳಿಸಿದರು. ತಮ್ಮ ಕೋಟಾದ 4 ಓವರ್‌ಗಳಲ್ಲಿ 5.20ರ ಎಕಾನಮಿ ದರದಲ್ಲಿ 21 ರನ್ ನೀಡಿ 2 ವಿಕೆಟ್ ಪಡೆದರು. 2023ರ ಐಪಿಎಲ್‌ನಲ್ಲಿ ಅಡಿದ 4 ಪಂದ್ಯಗಳಿಂದ 6 ವಿಕೆಟ್ ಪಡೆದಿದ್ದಾರೆ.

IPL 2023: Ravindra Jadeja Becomes 9th Indian To Take 200 Wickets In T20 Cricket

ರವೀಂದ್ರ ಜಡೇಜಾ ತಮ್ಮ 296 ಟಿ20 ಪಂದ್ಯಗಳಲ್ಲಿ 30.25ರ ಸರಾಸರಿ ಮತ್ತು 7.54ರ ಎಕಾನಮಿ ದರದಲ್ಲಿ 200 ವಿಕೆಟ್‌ಗಳನ್ನು ಹೊಂದಿದ್ದಾರೆ. ಟಿ20 ಸ್ವರೂಪದಲ್ಲಿ ರವೀಂದ್ರ ಜಡೇಜಾ ಅವರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು 16 ರನ್‌ಗಳಿಗೆ 5 ವಿಕೆಟ್ ಆಗಿದೆ.

ಭಾರತ ತಂಡದ ಪರ ಆಡಿದ 64 ಟಿ20 ಪಂದ್ಯಗಳಲ್ಲಿ ರವೀಂದ್ರ ಜಡೇಜಾ 28.49ರ ಸರಾಸರಿ ಮತ್ತು 7.04ರ ಎಕಾನಮಿ ದರದಲ್ಲಿ 51 ವಿಕೆಟ್‌ಗಳನ್ನು ಪಡೆದಿದ್ದಾರೆ. ಟಿ20 ಪಂದ್ಯಗಳಲ್ಲಿ ಭಾರತ ತಂಡಕ್ಕಾಗಿ ಅವರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು 3 15 ರನ್‌ಗಳಿಗೆ 3 ವಿಕೆಟ್ ಆಗಿದೆ.

IPL 2023: Ravindra Jadeja Becomes 9th Indian To Take 200 Wickets In T20 Cricket

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅಗ್ರ ಐವರು
ಶಕೀಬ್ ಅಲ್ ಹಸನ್ - ಬಾಂಗ್ಲಾದೇಶ - 136 ವಿಕೆಟ್

ಟಿಮ್ ಸೌಥಿ - ನ್ಯೂಜಿಲೆಂಡ್ - 134 ವಿಕೆಟ್

ರಶೀದ್ ಖಾನ್ - ಅಫ್ಘಾನಿಸ್ತಾನ - 129 ವಿಕೆಟ್

ಇಶ್ ಸೋಧಿ - ನ್ಯೂಜಿಲೆಂಡ್ -115 ವಿಕೆಟ್

ಲಸಿತ್ ಮಾಲಿಂಗ - ಶ್ರೀಲಂಕಾ - 107 ವಿಕೆಟ್

ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ 91 ವಿಕೆಟ್‌ಗಳೊಂದಿಗೆ ಭಾರತ ತಂಡದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಜಡೇಜಾ ಈ ದಾಖಲೆ ಮಾಡಿದ ಏಕೈಕ ಆಟಗಾರ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ಜಡೇಜಾ ಐಪಿಎಲ್‌ನಲ್ಲಿ 2,000 ಪ್ಲಸ್ ರನ್ ಗಳಿಸಿದ ಮತ್ತು 100 ಪ್ಲಸ್ ವಿಕೆಟ್‌ಗಳನ್ನು ಪಡೆದ ಏಕೈಕ ಆಟಗಾರನಾಗಿದ್ದಾರೆ. ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಅವರು 130ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆಯುವುದರ ಜೊತೆಗೆ 2,506 ರನ್‌ಗಳನ್ನು ಗಳಿಸಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳೆಂದರೆ, ಡ್ವೇನ್ ಬ್ರಾವೋ 183 ವಿಕೆಟ್, ಯುಜ್ವೇಂದ್ರ ಚಾಹಲ್ 176 ವಿಕೆಟ್, ಲಸಿತ್ ಮಾಲಿಂಗ 170 ವಿಕೆಟ್, ಅಮಿತ್ ಮಿಶ್ರಾ ಮತ್ತು ರವಿಚಂದ್ರನ್ ಅಶ್ವಿನ್ 169 ವಿಕೆಟ್ ಪಡೆದವರಾಗಿದ್ದಾರೆ.

ICC T20 Ranking: ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಬಿಟ್ಟುಕೊಡದ ಸೂರ್ಯಕುಮಾರ್ ಯಾದವ್

ಒಟ್ಟಾರೆಯಾಗಿ, ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳೆಂದರೆ, ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೋ 615 ವಿಕೆಟ್, ರಶೀದ್ ಖಾನ್ 536 ವಿಕೆಟ್, ವೆಸ್ಟ್ ಇಂಡೀಸ್ ಆಲ್‌ರೌಂಡರ್ ಸುನಿಲ್ ನರೈನ್ 484 ವಿಕೆಟ್, ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹಿರ್ 469 ವಿಕೆಟ್ ಮತ್ತು ಶಕೀಬ್ ಅಲ್ ಹಸನ್ 451 ವಿಕೆಟ್ ಪಡೆದಿದ್ದಾರೆ.

Story first published: Thursday, April 13, 2023, 13:51 [IST]
Other articles published on Apr 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+