For Quick Alerts
ALLOW NOTIFICATIONS  
For Daily Alerts
 

IPL 2023: ಕ್ವಾಲಿಫಯರ್ ಗೆದ್ದ ನಂತರ ಧೋನಿ ಫ್ಯಾನ್ಸ್ ತಲೆ ತಗ್ಗಿಸುವಂತಹ ಪೋಸ್ಟ್ ಮಾಡಿದ ಜಡೇಜಾ!

IPL 2023: Ravindra Jadeja slams MS Dhoni fans who celebrated his dismissal

ನಿನ್ನೆ ( ಮೇ 23) ಚೆನ್ನೈನ ಎಂಎ ಚಿದಂಬರಂ ಅಂತರರಾಷ್ಟ್ರೀಯ ಕ್ರಿಕೆಟ್ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಕ್ವಾಲಿಫಯರ್ ಪಂದ್ಯದಲ್ಲಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದುಕೊಂಡಿದೆ.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿ ಗುಜರಾತ್ ಟೈಟನ್ಸ್ ತಂಡಕ್ಕೆ ಗೆಲ್ಲಲು 173 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಗುಜರಾತ್ ಟೈಟನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ದಾಳಿಗೆ ಮಣಿದು 20 ಓವರ್‌ಗಳಲ್ಲಿ 157 ರನ್‌ಗಳಿಗೆ ಆಲ್‌ಔಟ್ ಆಗಿ 15 ರನ್‌ಗಳ ಅಂತರದ ಸೋಲನ್ನು ಅನುಭವಿಸಿದೆ.

ಈ ಗೆಲುವಿನ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ಪ್ರವೇಶ ಮಾಡಿದರೆ ಸೋತ ಗುಜರಾತ್ ಟೈಟನ್ಸ್ ಎರಡನೇ ಕ್ವಾಲಿಫಯರ್ ಪಂದ್ಯಕ್ಕೆ ಕಾಲಿಟ್ಟಿದೆ. ಇನ್ನು ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನಡೆಸಿದ ರುತುರಾಜ್ ಗಾಯಕ್ವಾಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ತಂಡದ ಗೆಲುವಿಗೆ ಕಾರಣರಾದ ಮತ್ತೋರ್ವ ಆಟಗಾರ ರವೀಂದ್ರ ಜಡೇಜಾ 'ಅಪ್ ಸ್ಟಾಕ್ಸ್ ಮೋಸ್ಟ್ ವ್ಯಾಲ್ಯುಯಬಲ್ ಅಸೆಟ್ ಆಫ್ ದ ಮ್ಯಾಚ್' ಪ್ರಶಸ್ತಿಗೆ ಭಾಜನರಾದರು.

ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರವೀಂದ್ರ ಜಡೇಜಾ 16 ಎಸೆತಗಳನ್ನು ಎದುರಿಸಿ 22 ರನ್ ಕಲೆಹಾಕಿದರು. ಬೌಲಿಂಗ್‌ನಲ್ಲಿ ದಾಸನ್ ಶನಕ ಹಾಗೂ ಡೇವಿಡ್ ಮಿಲ್ಲರ್ ರೀತಿಯ ಸ್ಪೋಟಕ ಆಟಗಾರರ ವಿಕೆಟ್ ಪಡೆದ ರವೀಂದ್ರ ಜಡೇಜಾ 2 ವಿಕೆಟ್‌ಗಳನ್ನು ಪಡೆದು, ಅತ್ಯುತ್ತಮ ಪ್ರದರ್ಶನವನ್ನು ನೀಡಿದರು.

ಹೀಗೆ ಒಳ್ಳೆಯ ಪ್ರದರ್ಶನಕ್ಕಾಗಿ ಪಡೆದ ಮೋಸ್ಟ್ ವ್ಯಾಲ್ಯುಯಬಲ್ ಪ್ರಶಸ್ತಿಯ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಾಷಿಂಗ್ಟನ್ ಸುಂದರ್ 'ನಾನು ಮೋಸ್ಟ್ ವ್ಯಾಲ್ಯುಯಬಲ್ ಪ್ಲೇಯರ್ ಎಂಬುದು ಅಪ್‌ಸ್ಟಾಕ್ಸ್‌ಗೆ ಗೊತ್ತಿದೆ. ಆದರೆ ಕೆಲವು ಅಭಿಮಾನಿಗಳಿಗೆ ತಿಳಿದಿಲ್ಲ' ಎಂದು ಲಾಫಿಂಗ್ ಇಮೋಜಿ ಹಾಕಿ ಬರೆದುಕೊಂಡಿದ್ದಾರೆ.

ಹೀಗೆ ರವೀಂದ್ರ ಜಡೇಜಾ ಯಾಕೆ ಅಭಿಮಾನಿಗಳ ವಿರುದ್ಧ ಅಧಿಕೃತ ಖಾತೆಯಲ್ಲಿ ಇಷ್ಟು ಕೇವಲವಾಗಿ ಬರೆದುಕೊಂಡಿದ್ದಾರೆ ಎಂದು ಅನೇಕರು ಗೊಂದಲಕ್ಕೀಡಾಗಿದ್ದಾರೆ. ಆದರೆ ಜಡೇಜಾ ತಮ್ಮದ್ದೇ ತಂಡದ ಅಭಿಮಾನಿಗಳ ಬಗ್ಗೆ ಇಷ್ಟು ಕೇವಲವಾಗಿ ಬರೆದುಕೊಳ್ಳಲು ಕಾರಣ ಎಂಎಸ್ ಧೋನಿ ಅಭಿಮಾನಿಗಳ ಅತಿರೇಕದ ವರ್ತನೆ ಕಾರಣ ಎನ್ನಬಹುದು.

ಹೌದು, ರವೀಂದ್ರ ಜಡೇಜಾ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟಿಂಗ್ ಮಾಡುವಾಗ ಸ್ಟೇಡಿಯಂನದಲ್ಲಿ ನೆರೆದಿರುವ ಧೋನಿ ಫ್ಯಾನ್ಸ್ ತಮ್ಮ ನೆಚ್ಚಿನ ಆಟಗಾರ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಕಾರಣ ಧೋನಿ ಧೋನಿ ಎಂದು ಹಲವಾರು ಪಂದ್ಯಗಳಲ್ಲಿ ಕೂಗಿದ್ದರು. ಅಲ್ಲದೇ ಜಡೇಜಾ ವಿಕೆಟ್ ಬಿದ್ದ ಕೂಡಲೇ ಸಂಭ್ರಮಿಸಿದ್ದರು.

ಇದರ ಬಗ್ಗೆ ಕಳೆದ ಪಂದ್ಯವೊಂದರ ನಂತರ ಸ್ವತಃ ಪ್ರತಿಕ್ರಿಯಿಸಿದ್ದ ರವೀಂದ್ರ ಜಡೇಜಾ ಧೋನಿ ಬ್ಯಾಟಿಂಗ್ ನೋಡಲು ನಾನು ಔಟ್ ಆದದ್ದನ್ನು ಹಲವು ಧೋನಿ ಅಭಿಮಾನಿಗಳು ಸಂಭ್ರಮಿಸುತ್ತಾರೆ ಎಂದು ನೇರವಾಗಿಯೇ ಹೇಳಿದ್ದರು.

ಹೀಗಾಗಿ ಜಡೇಜಾ ನಾನು ಮೋಸ್ಟ್ ವ್ಯಾಲ್ಯುಯಬಲ್ ಪ್ಲೇಯರ್ ಎಂಬುದು ಅಪ್‌ಸ್ಟಾಕ್ಸ್‌ಗೆ ಗೊತ್ತಿದೆ. ಆದರೆ ಕೆಲವು ಅಭಿಮಾನಿಗಳಿಗೆ ತಿಳಿದಿಲ್ಲ ಎಂದು ತನ್ನ ವಿಕೆಟ್ ಬಿದ್ದಾಗ ಸಂಭ್ರಮಿಸುವ ಧೋನಿ ಅಭಿಮಾನಿಗಳ ವಿರುದ್ಧ ಪರೋಕ್ಷವಾಗಿ ಹಂಚಿಕೊಂಡಿದ್ದಾರೆ ಎಂಬುದನ್ನು ಸುಲಭವಾಗಿ ತಿಳಿಯಬಹುದಾಗಿದೆ.

Story first published: Wednesday, May 24, 2023, 13:12 [IST]
Other articles published on May 24, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+