IPL 2023: ಗಾಯಾಳು ವಿಲ್ ಜಾಕ್ಸ್ ಬದಲಿಗೆ ಈ ಮೂವರು ಆಲ್‌ರೌಂಡರ್‌ಗಳ ಮೇಲೆ RCB ಕಣ್ಣು

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಋತುವಿಗೆ ದಿನಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 31ರಂದು ಅಹಮದಾಬಾದ್‌ನಲ್ಲಿ ಅದ್ಧೂರಿ ಚಾಲನೆ ಸಿಗಲಿದೆ.
ಐಪಿಎಲ್ ಪಂದ್ಯಾವಳಿ ಆರಂಭಕ್ಕೂ ಮುನ್ನ ಕೆಲವು ತಂಡಗಳಿಗೆ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ರಿಷಭ್ ಪಂತ್, ಮುಂಬೈ ಇಂಡಿಯನ್ಸ್ ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ಝೈ ರಿಚರ್ಡ್‌ಸನ್ ಮತ್ತು ಕೆಕೆಆರ್ ತಂಡದಲ್ಲಿ ಶ್ರೇಯಸ್ ಅಯ್ಯರ್ ಸೇರಿದಂತೆ ಪ್ರಮುಖ ಆಟಗಾರರು ಗಾಯದ ಕಾರಣದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಅದೇ ರೀತಿ ಇದೀಗ ಗಾಯಾಳುಗಳ ಪಟ್ಟಿಗೆ ಹೊಸ ಹೆಸರು ಸೇರಿಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಆಲ್‌ರೌಂಡರ್ ಐಪಿಎಲ್ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ. ಇದು ಆರ್‌ಸಿಬಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ.
ಇಂಗ್ಲೆಂಡ್‌ನ ಆಲ್‌ರೌಂಡರ್ ವಿಲ್ ಜಾಕ್ಸ್ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಸ್ನಾಯುಸೆಳೆತಕ್ಕೆ ಒಳಗಾದ ಕಾರಣ 2023ರ ಐಪಿಎಲ್‌ನಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆಯಾಗಿದೆ. ವಿಲ್ ಜಾಕ್ಸ್ ಅವರನ್ನು ಆರ್‌ಸಿಬಿ ತಂಡ 3.2 ಕೋಟಿ ರೂ.ಗೆ ಖರೀದಿಸಿತ್ತು.
ಆರ್‌ಸಿಬಿ ತಂಡವು ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬ್ಯಾಕ್‌ಅಪ್ ಆಗಿ ವಿಲ್ ಜಾಕ್ಸ್ ಅವರನ್ನು ಸೇರಿಸಿಕೊಂಡಿತ್ತು. ಅಪಘಾತದ ನಂತರ, ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿಯ ಐಪಿಎಲ್ ಋತುವಿನ ಒಂದು ಭಾಗವನ್ನು ಕಳೆದುಕೊಳ್ಳುವ ನಿರೀಕ್ಷೆಯಿತ್ತು. ಆದರೆ, ಆಸೀಸ್‌ನ ಆಲ್‌ರೌಂಡರ್ ಭಾರತದಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದಾರೆ.
ಗಾಯಾಳು ವಿಲ್ ಜಾಕ್ಸ್ ಬದಲಾಗಿ ಆರ್‌ಸಿಬಿ ತಂಡವು ಮೂವರು ಆಟಗಾರರ ಮೇಲೆ ಕಣ್ಣಿಟ್ಟಿದೆ. ಅವರೆಂದರೆ..

ಮೈಕಲ್ ಬ್ರೇಸ್‌ವೆಲ್
ಐಪಿಎಲ್ 2023 ಪಂದ್ಯಾವಳಿಗಾಗಿ ವಿಲ್ ಜಾಕ್ಸ್ ಅವರ ಸಂಭಾವ್ಯ ಬದಲಿಯಾಗಿ ಕೇಳಿಬರುತ್ತಿರುವ ಹೆಸರೆಂದರೆ ಮೈಕಲ್ ಬ್ರೇಸ್‌ವೆಲ್.
ನ್ಯೂಜಿಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಮೈಕಲ್ ಬ್ರೇಸ್‌ವೆಲ್ ಯುವ ಕ್ರಿಕೆಟಿಗನಾಗಿದ್ದು, ಅವರು ಚುಟಕು ಕ್ರಿಕೆಟ್‌ನಲ್ಲಿ ಅದ್ಭುತವಾಗಿ ರನ್ ಗಳಿಸುವ ಮತ್ತು ವಿಕೆಟ್ ಕಬಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಮೈಕಲ್ ಬ್ರೇಸ್‌ವೆಲ್ ಆಕ್ರಮಣಕಾರಿ ಬ್ಯಾಟಿಂಗ್ ವಿಧಾನಕ್ಕೆ ಹೆಸರುವಾಸಿಯಾಗಿದ್ದು, ಇವರು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಸೇರುವ ನಿರೀಕ್ಷೆ ಇದೆ. ಕಳೆದ ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದ ಇವರು, ಭಾರತದ ವಿರುದ್ಧದ ವೈಟ್‌ಬಾಲ್ ಪಂದ್ಯದಲ್ಲಿ 78 ಎಸೆತಗಳಲ್ಲಿ ಅವರ 140 ರನ್ ಬಾರಿಸಿ ಮಿಂಚಿದರು.

ಟ್ರಾವಿಸ್ ಹೆಡ್
ಗಾಯದ ಕಾರಣ ಐಪಿಎಲ್‌ನಿಂದ ಹೊರಗುಳಿದಿರುವ ವಿಲ್ ಜಾಕ್ಸ್ ಬದಲಿಗೆ ಮೈಕೆಲ್ ಬ್ರೇಸ್‌ವೆಲ್ ಆಯ್ಕೆಯಾಗದಿದ್ದಲ್ಲಿ ಆರ್‌ಸಿಬಿ ತಂಡದ ಮುಂದಿನ ಟಾರ್ಗೆಟ್ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್. ಆಸ್ಟ್ರೇಲಿಯಾದ ಯುವ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಸದ್ಯ ಬ್ಯಾಟ್ ಮೂಲಕ ಸದ್ದು ಮಾಡುತ್ತಿದ್ದಾರೆ.
ಟ್ರಾವಿಸ್ ಹೆಡ್ ಐಪಿಎಲ್‌ಗೆ ಹೇಳಿಮಾಡಿಸಿದ ಆಲ್‌ರೌಂಡರ್. ಏಕೆಂದರೆ, ಟ್ರಾವಿಸ್ ಹೆಡ್ ಆಫ್-ಸ್ಪಿನ್ ಬೌಲಿಂಗ್ ಮತ್ತು ಎಡಗೈ ಬ್ಯಾಟಿಂಗ್ ಮಾಡುತ್ತಾರೆ. ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿರುವ ಟ್ರಾವಿಸ್ ಹೆಡ್ ಆಯ್ಕೆಯಾಗುವ ನಿರೀಕ್ಷೆ ಇದೆ.

ದಸುನ್ ಶನಕ
ಶ್ರೀಲಂಕಾದ ಆಲ್‌ರೌಂಡರ್ ದಸುನ್ ಶನಕ ಅವರು ವಿಲ್ ಜಾಕ್ಸ್ ಬದಲಿಗೆ ಅತ್ಯುತ್ತಮ ಆಟಗಾರನಾಗಲಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಮಿಂಚುತ್ತಿರುವ ದಸುನ್ ಶನಕ 2023ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಸದಸ್ಯರಾಗಬಹುದು.
ಸ್ಪಷ್ಟವಾಗಿ ಹೇಳುವುದಾದರೆ, ಭಾರತದ ನೆಲದಲ್ಲಿ ದಸುನ್ ಶನಕಗೆ ಅದ್ಭುತ ಅನುಭವವಿದ್ದು, ಆರ್‌ಸಿಬಿಯ ಕೆಳ ಮಧ್ಯಮ ಕ್ರಮಾಂಕದಲ್ಲಿ ಅಗತ್ಯವಿರುವ ಶಕ್ತಿಯನ್ನು ಒದಗಿಸುವ ಸಾಮರ್ಥ್ಯವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications