Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಿರ್ಣಾಯಕ ಪಂದ್ಯದಲ್ಲಿ RCBಗೆ ಸನ್‌ರೈಸರ್ಸ್ ಎದುರಾಳಿ: ಯಾವ ತಂಡಕ್ಕಿದೆ ಮೇಲುಗೈ? ಅಂಕಿಅಂಶಗಳು ಹೇಳೋದೇನು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುರುವಾರ ಅತ್ಯಂತ ಮಹತ್ವದ ಪಂದ್ಯವನ್ನು ಆಡಲಿದ್ದು ತಂಡಕ್ಕೆ ಇದು ಅಕ್ಷರಶಃ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಆರ್‌ಸಿಬಿ 12 ಪಂದ್ಯಗಳನ್ನು ಆಡಿದ್ದು ಇನ್ನು ಕೊನೆಯ ಎರಡು ಪಂದ್ಯಗಳು ಮಾತ್ರವೇ ಇರುವ ಕಾರಣ ಈ ಪಂದ್ಯದಲ್ಲಿ ಗೆದ್ದು ಪ್ಲೇಆಪ್ ರೇಸ್‌ನಲ್ಲಿ ಮೇಲುಗೈ ಸಾಧಿಸುವ ಅನಿವಾರ್ಯತೆಯಲ್ಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎದುರಾಳಿಯಾಗಿರುವುದು ಸನ್‌ರೈಸರ್ಸ್ ಹೈದರಾಬಾದ್ ತಂಡ.

ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಟೂರ್ನಿಯಲ್ಲಿ ಈಗಾಗಲೇ ಪ್ಲೇಆಫ್ ಸ್ಪರ್ಧೆಯಿಂದ ಹೊರಬಿದ್ದಾಗಿದೆ. ಈ ಹಂತದಲ್ಲಿ ಎಸ್‌ಆರ್‌ಹೆಚ್ ಸೋತರೂ ಗೆದ್ದರೂ ಕಳೆದುಕೊಳ್ಳುವಂತದ್ದೇನೂ ಇಲ್ಲ. ಹೀಗಾಗಿ ಯಾವುದೇ ಒತ್ಡವಿಲ್ಲದೆ ಎಸ್‌ಆರ್‌ಹೆಚ್ ತಂಡ ಆಡಲಿದ್ದು ಆರ್‌ಸಿಬಿ ತಂಡಕ್ಕೆ ತನ್ನ ಮೇಲಿರುವ ಒತ್ತಡವೇ ಅಪಾಯವಾಗುವ ಸಾಧ್ಯತೆಯಿದೆ.

IPL 2023, RCB face SRH in do or die match: who has statistical lead, head to head and other details

ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಎಸ್‌ಆರ್‌ಹೆಚ್ ಹಾಗೂ ಆರ್‌ಸಿಬಿ ತಂಡಗಳ ಕೆಲ ಪ್ರಮುಖ ಅಂಕಿಅಂಶಗಳ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಹೆಡ್‌ ಟು ಹೆಡ್ ದಾಖಲೆ

ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಆರ್‌ಸಿಬಿ ತಂಡಗಳು ಐಪಿಎಲ್ ಇತಿಹಾಸದಲ್ಲಿ ಈವರೆಗೆ ಒಟ್ಟು 22 ಬಾರಿ ಮುಖಾಮುಖಿಯಾಗಿದೆ. ಈಪೈಕಿ ಸನ್‌ರೈಸರ್ಸ್ ಹೈದರಾಬಾದ್ ತಂಡ 12 ಬಾರಿ ಗೆದ್ದಿದ್ದರೆ ಆರ್‌ಸಿಬಿ ಗೆದ್ದಿರುವುದು 9 ಪಂದ್ಯಗಳಲ್ಲಿ ಮಾತ್ರ. ಒಂದು ಪಂದ್ಯ ಫಲಿತಾಂಶವಿಲ್ಲದೆ ಮುಕ್ತಾಯವಾಗಿದೆ. ಕಳೆದ ಬಾರಿಯ ಆವೃತ್ತಿಯಲ್ಲಿ ಎರಡು ತಂಡಗಳು ಕೂಡ ತಲಾ ಒಂದೊಂದು ಗೆಲುವು ಸಾಧಿಸಿತ್ತು.

ಕ್ರೀಡಾಂಗಣದ ಅಂಕಿಅಂಶಗಳು

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸ್ಮರಣೀಯ ಅನುಭವವನ್ನು ಹೊಂದಿಲ್ಲ. ಹೈದರಾಬಾದ್‌ನಲ್ಲಿ ಆರ್‌ಸಿಬಿ ಈವರೆಗೆ ಒಟ್ಟು 10 ಪಂದ್ಯಗಳನ್ನು ಆಡಿದೆ. ಪ್ರಸ್ತುತ ಕಾರ್ಯನಿರ್ವಹಿಸದ ಡೆಕ್ಕನ್ ಚಾರ್ಚರ್ಸ್ ವಿರುದ್ಧ ಇಲ್ಲಿ 3 ಪಂದ್ಯಗಳನ್ನು ಆಡಿದ್ದರೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 7 ಪಂದ್ಯಗಳನ್ನು ಆಡಿದೆ. ಆದರೆ ಈ ತಾಣದಲ್ಲಿ ಆರ್‌ಸಿಬಿ ಒಟ್ಟು ಗೆದ್ದಿರುವುದು ಕೇವಲ 2 ಪಂದ್ಯಗಳಲ್ಲಿ ಮಾತ್ರ! 2015ರಲ್ಲಿ ಕೊನೆಯ ಬಾರಿಗೆ ಆರ್‌ಸಿಬಿ ಈ ಮೈದಾನದಲ್ಲಿ ಗೆಲುವು ಸಾಧಿಸಿತ್ತು.

2023ರ ಐಪಿಎಲ್‌ನಲ್ಲಿ ಬ್ಯಾಟಿಂಗ್ ವಿಭಾಗದ ಸಾಧನೆ

ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಈ ಬಾರಿಯ ಆವೃತ್ತಿಯಲ್ಲಿ ಅಮೋಘ ಸಾಧನೆ ಮಾಡಿದ್ದು ಟೂರ್ನಿಯಲ್ಲಿ ಈವರೆಗೆ 57.36ರ ಸರಾಸರಿಯಲ್ಲಿ 631 ರನ್‌ಗಳಿಸಿದ್ದು ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಆರ್‌ಸಿಬಿ ಪರವಾಗಿ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ. ಕೊಹ್ಲಿ ಬ್ಯಾಟ್‌ನಿಂದ 438 ರನ್‌ಗಳಿ ಹರಿದುಬಂದಿದೆ. ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಅದ್ಭುತ ಫಾರ್ಮ್‌ನಲ್ಲಿದ್ದು 384 ರನ್‌ಗಳನ್ನು ಗಳಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಹೆನ್ರಿಕ್ ಕ್ಲಾಸೆನ್ ಅವರು ಅತಿ ಹೆಚ್ಚು ರನ್‌ಗಳಿಸಿದ್ದು 326 ರನ್‌ಗಳಿಸಿದ್ದಾರೆ.

ಬೌಲಿಂಗ್‌ನಲ್ಲಿ ಅತ್ಯುತ್ತಮ ಸಾಧನೆ

ಇನ್ನು ಈ ವರ್ಷದ ಟೂರ್ನಿಯಲ್ಲಿ ಬೌಲಿಂಗ್ ವಿಭಾಗದಲ್ಲಿ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಅತ್ಯುತ್ತಮ ಪ್ರದರ್ಶನ ನೀಡಿದ್ದು ಟೂರ್ನಿಯಲ್ಲಿ ಈವರೆಗೆ 12 ಪಂದ್ಯಗಳಲ್ಲಿ 16 ವಿಕೆಟ್ ಸಂಪಾದಿಸಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಹರ್ಷಲ್ ಪಟೇಲ್ ಎರಡನೇ ಸ್ಥಾನದಲ್ಲಿದ್ದು 12 ಪಂದ್ಯಗಳಲ್ಲಿ 12 ವಿಕೆಟ್ ಪಡೆದುಕೊಂಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಭುವನೇಶ್ವರ್ ಕುಮಾರ್ 12 ಪಂದ್ಯಗಳಲ್ಲಿ 14 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಕಳೆದ ಪಂದ್ಯದಲ್ಲಿ ಭುವಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದರು.

Story first published: Wednesday, May 17, 2023, 11:51 [IST]
Other articles published on May 17, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+