Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

AB De Villiers: ಕೊಹ್ಲಿ ಅಲ್ಲ, ಗೇಲ್ ಅಲ್ಲ; ತಮ್ಮ ಸಾರ್ವಕಾಲಿಕ ಶ್ರೇಷ್ಠ ಟಿ20 ಆಟಗಾರನನ್ನು ಹೆಸರಿಸಿದ ಎಬಿ ಡಿವಿಲಿಯರ್ಸ್

IPL 2023: RCB Former Cricketer AB de Villiers Names His Greatest T20 Player Af All Time

ಇಂಡಿಯನ್ ಪ್ರೀಮಿಯರ್ ಲೀಗ್‌ನ ಬಲಿಷ್ಠ ಹಾಗೂ ಜನಪ್ರಿಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಅವರು ತಮ್ಮ ಸಾರ್ವಕಾಲಿಕ ಶ್ರೇಷ್ಠ ಟಿ20 ಆಟಗಾರನ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಸ್ಟಾರ್ ಬ್ಯಾಟರ್ ಹಾಗೂ ಆರ್‌ಸಿಬಿ ತಂಡದ ತಮ್ಮ ದೀರ್ಘಕಾಲದ ಸಹ ಆಟಗಾರರಾದ ವಿರಾಟ್ ಕೊಹ್ಲಿ ಅಥವಾ ಕ್ರಿಸ್ ಗೇಲ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದು ಆಯ್ಕೆ ಮಾಡದೆ, ಅಫ್ಘಾನಿಸ್ತಾನದ ರಶೀದ್ ಖಾನ್ ಅವರನ್ನು ಟಿ20 ಶ್ರೇಷ್ಠ ಎಂದು ಎಬಿ ಡಿವಿಲಿಯರ್ಸ್ ಹೆಸರಿಸಿದ್ದಾರೆ.

ಸೂಪರ್‌ಸ್ಪೋರ್ಟ್‌ನೊಂದಿಗೆ ಮಾತನಾಡಿದ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿಡಿ, ತನ್ನ ಆಯ್ಕೆಯ ಆಟಗಾರನ ಬಗ್ಗೆ ವಿಶ್ಲೇಷಿಸಿದರು. ರಶೀದ್ ಖಾನ್ ಕ್ರಿಕೆಟ್‌ನ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರು ವಿಭಾಗಗಳಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುತ್ತಾನೆ ಎಂದು ಸಮಜಾಯಿಷಿ ನೀಡಿದರು.

IPL 2023: RCB Former Cricketer AB de Villiers Names His Greatest T20 Player Af All Time

"ನನ್ನ ಆಯ್ಕೆಯ ಸಾರ್ವಕಾಲಿಕ ಶ್ರೇಷ್ಠ ಟಿ20 ಕ್ರಿಕೆಟಿಗ ಬೇರೆ ಯಾರೂ ಅಲ್ಲ, ಅದು ರಶೀದ್ ಖಾನ್. ಆತ ಬ್ಯಾಟ್ ಮತ್ತು ಬಾಲ್ ಎರಡೂ ವಿಭಾಗಗಳಲ್ಲಿ ಪಂದ್ಯ ವಿಜೇತ ಆಟಗಾರನಾಗಿದ್ದಾನೆ. ರಶೀದ್ ಖಾನ್ ಯಾವಾಗಲೂ ಗೆಲ್ಲಲು ಎದುರು ನೋಡುತ್ತಾರೆ. ಮೈದಾನದಲ್ಲಿ ತುಂಬಾ ಸ್ಪರ್ಧಾತ್ಮಕವಾಗಿರುತ್ತಾರೆ," ಎಂದು ಎಬಿ ಡಿವಿಲಿಯರ್ಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

2015ರಲ್ಲಿ ಚೊಚ್ಚಲ ಪಂದ್ಯವನ್ನಾಡಿದ ನಂತರ ರಶೀದ್ ಖಾನ್ ಕ್ರಿಕೆಟ್‌ನಲ್ಲಿ ವೇಗವಾಗಿ ಮುನ್ನುಗ್ಗುತ್ತಿದ್ದಾರೆ. 24 ವರ್ಷದ ಆಲ್‌ರೌಂಡರ್ ಟಿ20 ಇತಿಹಾಸದಲ್ಲಿ ಡ್ವೇನ್ ಬ್ರಾವೋ ನಂತರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

IPL 2023: RCB Former Cricketer AB de Villiers Names His Greatest T20 Player Af All Time

ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ವೇಗ ಮತ್ತು ಬ್ಯಾಟ್ಸ್‌ಮನ್‌ಗಳನ್ನು ವಂಚಿಸುವ ಬೌಲಿಂಗ್‌ನಿಂದಾಗಿ ವಿಶ್ವದ ಹಲವು ಬ್ಯಾಟರ್‌ಗಳು ಭಯಪಡುತ್ತಾರೆ. 382 ಪಂದ್ಯಗಳಿಂದ 18.17ರ ಸರಾಸರಿಯಲ್ಲಿ 514 ವಿಕೆಟ್‌ಗಳನ್ನು ಪಡೆದಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಆಡಿದ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾನೇಜ್‌ಮೆಂಟ್‌ನೊಂದಿಗೆ ಚರ್ಚೆ ನಡೆಸಲು ಬೆಂಗಳೂರಿಗೆ ಬಂದಿದ್ದರು. 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್‌ಗಾಗಿ ಆರ್‌ಸಿಬಿ ತಂಡದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಅವರು ಈಗಾಗಲೇ ಆಡದಿರಲು ನಿರ್ಧರಿಸಿದ್ದಾರೆ.

Story first published: Monday, March 6, 2023, 18:45 [IST]
Other articles published on Mar 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+