IPL 2023: ಪ್ಲೇಆಫ್ ಹಾದಿ ಕಠಿಣಗೊಳಿಸಿದ RCB: ಕೊನೆಯ 4 ಪಂದ್ಯಗಳಲ್ಲಿ ಫಾಫ್ ಪಡೆಗೆ ಇರುವ ಸವಾಲು ಹೇಗಿದೆ?
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಏರಿಳಿತ ಮುಂದುವರಿದಿದೆ. ಒಂದೆರಡು ಪಂದ್ಯಗಳಲ್ಲಿ ಅದ್ಭುತವಾಗಿ ಗೆದ್ದರೆ ಮತ್ತೊಂದು ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡುತ್ತಿದೆ. ಗೆಲ್ಲಬಹುದಾಗುವ ಪಂದ್ಯಗಳ್ನು ಕಳೆದುಕೊಳ್ಳುತ್ತಿದ್ದು ಅಸಾಧ್ಯ ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್‌ಗಳ ಅಂತರದಿಂದ ಸೋಲು ಕಾಣುವ ಮೂಲಕ ತಂಡ ಮತ್ತೊಮ್ಮೆ ಸಂಕಷ್ಟದಲ್ಲಿದೆ.
ಆರ್‌ಸಿಬಿ ಸದ್ಯ ಆಡಿರುವ 10 ಪಂದ್ಯಗಳಲ್ಲಿ ಐದು ಗೆಲುವು ಹಾಗೂ ಐದು ಸೋಲು ಅನುಭವಿಸಿದೆ, ಈ ಮೂಲಕ 10 ಅಂಕಗಳೊಂದಿಗೆ ಸದ್ಯಕ್ಕೆ ಆರ್‌ಸಿಬಿ ಐದನೇ ಸ್ಥಾನದಲ್ಲಿದೆ. ಆದರೆ ಆರ್‌ಸಿಬಿ ತಂಡ ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆಯಬೇಕಿದ್ದರೆ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವುದು ಅಗತ್ಯ. ಇಲ್ಲವಾದರೆ ಫಾಫ್ ಪಡೆ ಲೀಗ್ ಹಂತದಿಂದ ಹೊರಬೀಳಬೇಕಾಗುತ್ತದೆ. ಟೂರ್ನಿಯಲ್ಲಿ ಆರ್‌ಸಿಬಿ ತಂಡಕ್ಕೆ ಇನ್ನು ಉಳಿದಿರುವುದು ಕೇವಲ ನಾಲ್ಕು ಪಂದ್ಯಗಳು ಮಾತ್ರ. ಈ ನಾಲ್ಕು ಪಂದ್ಯಗಳಲ್ಲಿ ಆರ್‌ಸಿಬಿ ತಂಡದ ಈ ಬಾರಿಯ ಭವಿಷ್ಯ ಅಡಗಿದೆ ಎಂಬುದು ಸತ್ಯ.

ಹಾಗಾದರೆ ಆರ್‌ಸಿಬಿ ತಂಡಕ್ಕೆ ಮುಂದಿನ ನಾಲ್ಕು ಪಂದ್ಯಗಳಲ್ಲಿ ಯಾವೆಲ್ಲಾ ತಂಡಗಳು ಎದುರಾಗುತ್ತವೆ. ಈ ಸವಾಲನ್ನು ಆರ್‌ಸಿಬಿ ಹೇಗೆ ಎದುರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಮುಂದೆ ಓದಿ..
ಮಂಗಳವಾರ ಆರ್‌ಸಿಬಿಗೆ ಮುಂಬೈ ಇಂಡಿಯನ್ಸ್ ಎದುರಾಳಿ
ಆರ್‌ಸಿಬಿ ತಂಡ ತನ್ನ ಮುಂದಿನ ಪಂದ್ಯದನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಸದ್ಯ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಅಂಕಪಟ್ಟಿಯಲ್ಲಿ ಎರಡು ತಂಡಗಳ ಸ್ಥಿತಿಯೂ ಬಹುತೇಕ ಒಂದೇ ರೀತಿಯಿದೆ. ಎರಡು ತಂಡಗಳು ಕೂಡ ಆಡಿರುವ ಹತ್ತು ಪಂದ್ಯಗಳಲ್ಲಿ ಐದು ಗೆಲುವು ಹಾಗೂ ಐದು ಸೋಲು ಅನುಭವಿಸಿದೆ. ನೆಟ್ ರನ್‌ರೇಟ್‌ನಲ್ಲಿ ಆರ್‌ಸಿಬಿ -209 ಹೊಂದಿದ್ದರೆ ಮುಂಬೈ ಇಂಡಿಯನ್ಸ್ -454 ಅಂಕ ಹೊಂದಿದೆ. ಹೀಗಾಗಿ ಆರ್‌ಸಿಬಿ 5ನೇ ಸ್ಥಾನದಲ್ಲಿ ಹಾಗೂ ಮುಂಬೈ ಇಂಡಿಯನ್ಸ್ 6ನೇ ಸ್ಥಾನದಲ್ಲಿದೆ.
ಇನ್ನು ಈ ಬಾರಿಯ ಆವೃತ್ತಿಯಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ತಮ್ಮ ಮೊದಲ ಮುಖಾಮುಖಿಯಲ್ಲಿ ಎದುರಾಳಿಯಾಗಿದ್ದಾಗ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಸದ್ಯ ಮುಂಬೈ ಇಂಡಿಯನ್ಸ್ ತಂಡದ ಬಹುತೇಕ ಆಟಗಾರರು ಉತ್ತಮ ಲಯದಲ್ಲಿದ್ದು ಈ ಸವಾಲು ಆರ್‌ಸಿಬಿ ಕಠಿಣವಾಗಿರುವುದರಲ್ಲಿ ಅನುಮಾನವಿಲ್ಲ. ಅಲ್ಲದೆ ಈ ಪಂದ್ಯ ಮುಂಬೈ ಇಂಡಿಯನ್ಸ್ ತಂಡದ ತವರಿನಲ್ಲಿಯೇ ನಡೆಯುತ್ತಿದೆ.
ರಾಜಸ್ಥಾನ್ ರಾಯಲ್ಸ್‌ಗೆ ಸವಾಲು
ಆರ್‌ಸಿಬಿ ತಂಡ ಮುಂಬೈ ಇಂಡಿಯ್ಸ್ ವಿರುದ್ಧದ ಸೆಣೆಸಾಟದ ಬಳಿಕ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯಲಿದ್ದು ಮೇ 14 ಶನಿವಾರ ಈ ಪಂದ್ಯ ಆಯೋಜನೆಯಾಗಲಿದೆ. ಈಗಾಗಲೇ ಮೊದಲ ಸುತ್ತಿನಲ್ಲಿ ಈ ಎರಡು ತಮಡಗಳು ಮುಖಾಮುಖಿಯಾಗಿದ್ದು ಆ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿತ್ತು. ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಆರ್‌ಆರ್ ತಂಡ ನಂತರ ಮಂಕಾಗಿದ್ದು ನೆಟ್ ರನ್‌ರೇಟ್ ಹೊರತುಪಡಿಸಿದರೆ ಉಳಿದಂತೆ ಆರ್‌ಸಿಬಿಯದ್ದೇ ಸ್ಥಿತಿಯಲ್ಲಿದೆ ಆರ್‌ಆರ್ ತಂಡ. ಈ ಬಾರಿ ಆರ್‌ಆರ್ ತಂಡದ ತವರಿನಲ್ಲಿ ಈ ಪಂದ್ಯ ನಡೆಯಲಿರುವ ಕಾರಣ ಈ ಸವಾಲು ಕಠಿಣವಾಗಿರಲಿದೆ.
ಸನ್‌ರೈಸರ್ಸ್‌ಗೆ ಹೈದರಾಬಾದ್ ಪೈಪೋಟಿ
ಆರ್‌ಸಿಬಿ ತಂಡ ಈ ಬಾರಿಯ ಆವೃತ್ತಿಯ 13ನೇ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಇದು ಈ ಬಾರಿಯ ಲೀಗ್ ಹಂತದಲ್ಲಿ ಆರ್‌ಸಿಬಿ ಎಸ್‌ಆರ್‌ಹೆಚ್ ವಿರುದ್ಧದ ಸೆಣೆಸಾಡುವ ಏಕೈಕ ಪಂದ್ಯ. ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿಯ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದು ಕೆಲ ಪಂದ್ಯಗಳಲ್ಲಿ ಮಾತ್ರ ಅದ್ಭುತ ಪ್ರದರ್ಶನ ನೀಡಿದೆ. ಈ ಹಂತದಲ್ಲಿ ಎಸ್‌ಆರ್‌ಹೆಚ್ ತಂಡ 9 ಪಂದ್ಯಗಳನ್ನು ಆಡಿದ್ದು ಇದರಲ್ಲಿ 3 ಗೆಲುವು ಹಾಗೂ 6 ಸೋಲು ಕಂಡಿದ್ದು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಐಡೆನ್ ಮಾರ್ಕ್ರಮ್ ನೇತೃತ್ವದ ತಂಡವನ್ನು ಅದರದ್ದೇ ತವರಿನಲಕ್ಲಿ ಎದುರಿಸಲಿದ್ದು ಈ ಸೆಣೆಸಾಟದಲ್ಲಿ ಆರ್‌ಸಿಬಿ ಮೇಲುಗೈ ಸಾಧಿಸಲಿದೆಯಾ ಎಂಬುದು ಕುತೂಹಲ ಮೂಡಿಸಿದೆ.
ಕೊನೆಯ ಮುಖಾಮುಖಿಯಲ್ಲಿ ಹಾಲಿ ಚಾಂಪಿಯನ್ ಎದುರಾಳಿ
ಇನ್ನು ಆರ್‌ಸಿಬಿ ತಂಡಕ್ಕೆ ಈ ಬಾರಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಎದುರಾಳಿಯಾಗಲಿದೆ. ಗುಜರಾತ್ ಟೈಟನ್ಸ್ ತಂಡ ಹಾಲಿ ಚಾಂಪಿಯನ್ ಪಟ್ಟಕ್ಕೆ ಪೂರಕವಾದ ಪ್ರದರ್ಶನ ನೀಡುತ್ತಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಆಡಿರುವ 10 ಪಂದ್ಯಗಳಲ್ಲಿ ಈಗಾಗಲೇ 7 ಗೆಲುವು ಸಾಧಿಸಿದ್ದು 14 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಈ ಮೂಲಕ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಖಾತ್ರಿಪಡಿಸಿಕೊಳ್ಳುವ ಆತುರದಲ್ಲಿದೆ. ಸಾಕಷ್ಟು ಸಕಾರಾತ್ಮಕ ಸಂಗತಿಗಳೊಂದಿಗೆ ಆತ್ಮವಿಶ್ವಾಸದಲ್ಲಿರುವ ಜಿಟಿ ತಂಡ ಆರ್‌ಸಿಬಿ ತಂಡಕ್ಕೆ ಅತ್ಯಂತ ಕಠಿಣ ಸವಾಲಾಗುವುದರಲ್ಲಿ ಅನುಮಾನವಿಲ್ಲ. ಇದು ಆರ್‌ಸಿಬಿ ತವರಿನಲ್ಲಿ ನಡೆಯುವ ಪಂದ್ಯವಾಗಿದ್ದುಈ ಪಂದ್ಯದಲ್ಲಿ ಯಾಔ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications