Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

GT vs RCB: ಒಳ್ಳೆ ರನ್ ಕಲೆಹಾಕಿದ್ರೂ ಆತನಿಂದ ಸೋತೆವು ಎಂದ ಫಾಫ್ ಡು ಪ್ಲೆಸಿಸ್!

IPL 2023: RCB skipper Faf Du Plessis revealed the reason for their loss against Gujarat Titans

ನಿನ್ನೆ ( ಮೇ 21 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಅಂತಿಮ ಪಂದ್ಯ ಜರುಗಿತು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯಕ್ಕೂ ಮುನ್ನ ನಡೆದಿದ್ದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದು ಪ್ಲೇಆಫ್ ಆಸೆ ಜೀವಂತವಾಗಿರಿಕೊಂಡಿದ್ದ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಆದರೆ ಗುಜರಾತ್ ಟೈಟನ್ಸ್ ಈ ಪಂದ್ಯದಲ್ಲಿ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್ ಕನಸನ್ನು ಒಡೆದುಹಾಕಿದೆ.

ಮೊದಲು ಬ್ಯಾಟಿಂಗ್ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ಹಾಗೂ ಅಬ್ಬರದ ಶತಕದ ನೆರವಿನಿಂದ 20 ಓವರ್‌ಗಳಲ್ಲಿ ವಿಕೆಟ್ 5 ನಷ್ಟಕ್ಕೆ 197 ರನ್ ಕಲೆಹಾಕಿ ಎದುರಾಳಿ ಗುಜರಾತ್ ಟೈಟನ್ಸ ತಂಡಕ್ಕೆ ಗೆಲ್ಲಲು 198 ರನ್‌ಗಳ ಗುರಿಯನ್ನು ನೀಡಿತ್ತು.

ಈ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾದ ಗುಜರಾತ್ ಟೈಟನ್ಸ್ ಶುಬ್‌ಮನ್ ಗಿಲ್ ಭರ್ಜರಿ ಶತಕದ ನೆರವಿನಿಂದ 19.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಕಲೆಹಾಕಿ 6 ವಿಕೆಟ್‌ಗಳ ಭರ್ಜರಿ ಗೆಲುವನ್ನು ಸಾಧಿಸಿತು.

ಪೈಪೋಟಿಯುತ ಗುರಿಯನ್ನು ನೀಡಿದರೂ ಸಹ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹದಿನಾರನೇ ಬಾರಿಗೆ ತನ್ನ ಅಭಿಮಾನಿಗಳಿಗೆ ಬೇಸರವನ್ನು ತಂದಿದೆ. ಇನ್ನು ಪಂದ್ಯ ಮುಕ್ತಾಯವಾದ ಬಳಿಕ ಪಂದ್ಯದಲ್ಲಿ ಸೋಲಲು ಕಾರಣವೇನು ಎಂಬುದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ತಿಳಿಸಿದ್ದಾರೆ.

ತುಂಬಾ ಬೇಸರವಾಗುತ್ತಿದೆ ಎಂದು ಮಾತನ್ನು ಆರಂಭಿಸಿದ ಫಾಫ್ ಡು ಪ್ಲೆಸಿಸ್ ನಾವು ಇಂದು ತುಂಬಾ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿದಿದ್ದೆವು ಎಂದರು. ಎರಡನೇ ಇನ್ನಿಂಗ್ಸ್‌ನಲ್ಲಿ ತುಂಬಾ ಒದ್ದೆ ಇತ್ತು, ಮೊದಲ ಇನ್ನಿಂಗ್ಸ್‌ನಲ್ಲೂ ಸಹ ಒದ್ದೆ ಇತ್ತು, ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಗ್ರಿಪ್ ಇರಲಿಲ್ಲ, ಪದೇ ಪದೇ ಚೆಂಡನ್ನು ಬದಲಿಸಬೇಕಾಯಿತು. ವಿರಾಟ್ ನಂಬಲಸಾದ್ಯವಾದ ಬ್ಯಾಟಿಂಗ್ ಮಾಡಿ ಒಂದೊಳ್ಳೆ ರನ್ ಕಲೆಹಾಕಿದೆವು ಎನ್ನುವ ಹಾಗೆ ಮಾಡಿದರು. ಆದರೆ ಶುಬ್‌ಮನ್ ಗಿಲ್ ಅವರ ಅಮೋಘ ಆಟ ನಮ್ಮಿಂದ ಪಂದ್ಯವನ್ನು ಕಸಿದುಕೊಂಡಿತು ಎಂದು ತಿಳಿಸಿದರು.

ಈ ಮೂಲಕ ಶುಬ್‌ಮನ್ ಗಿಲ್ ತಮ್ಮ ಸೋಲಿಗೆ ಕಾರಣ ಎಂದು ಫಾಫ್ ಡು ಪ್ಲೆಸಿಸ್ ತಿಳಿಸಿದರು. ಇನ್ನೂ ಮುಂದುವರಿದು ಮಾತನಾಡಿದ ಫಾಫ್ ತಂಡದ ಮೊದಲ ನಾಲ್ಕು ಬ್ಯಾಟ್ಸ್‌ಮನ್‌ಗಳು ಚೆನ್ನಾಗಿಯೇ ರನ್ ಕಲೆಹಾಕಿದರು. ಮಧ್ಯಮ ಕ್ರಮಾಂಕ ಟೂರ್ನಿಯುದ್ದಕ್ಕೂ ರನ್ ಗಳಿಸಲೇ ಇಲ್ಲ, ನಮ್ಮ ಇಚ್ಛೆಯಂತೆ ಇನ್ನಿಂಗ್ಸ್‌ ಮಧ್ಯದಲ್ಲಿ ವಿಕೆಟ್ ಸಹ ಬೀಳಲಿಲ್ಲ ಎಂದು ತಿಳಿಸಿದರು.

ಒಟ್ಟಿನಲ್ಲಿ ನಿನ್ನೆಯ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಹೆಚ್ಚಿನ ರನ್ ಬಾರದೇ ಇದ್ದದ್ದು ಹಾಗೂ ಬೌಲಿಂಗ್ ವಿಭಾಗದ ವಿಫಲತೆಯಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹತ್ವದ ಪಂದ್ಯದಲ್ಲಿ ಸೋತು ಪ್ಲೇಆಫ್ ಪ್ರವೇಶಿಸುವಲ್ಲಿ ವಿಫಲವಾಗಿ ಟೂರ್ನಿಯಿಂದ ಹೊರಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಪಂದ್ಯದಲ್ಲಿ ಸೋತ ಕಾರಣ ಮುಂಬೈ ಇಂಡಿಯನ್ಸ್ ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ. ಒಂದನೇ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಪಂದ್ಯಗಳು ಮುಖಾಮುಖಿಯಾಗಲಿವೆ.

Story first published: Monday, May 22, 2023, 11:33 [IST]
Other articles published on May 22, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+