For Quick Alerts
ALLOW NOTIFICATIONS  
For Daily Alerts
 

RCB vs CSK: ಸಿಎಸ್‌ಕೆ ವಿರುದ್ಧದ ಸೋಲಿನ ಬಳಿಕ RCBಯ ಹುಳುಕು ಬೊಟ್ಟು ಮಾಡಿದ ಜಹೀರ್ ಖಾನ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆರ್‌ಸಿಬಿ ತಂಡ ಸೋಲು ಅನುಭವಿಸಿದ್ದು ತವರಿನಲ್ಲಿ ನಿರಾಸೆ ಅನುಭವಿಸಿದೆ. ಮೊದಲಿಗೆ ಬೌಲಿಂಗ್‌ನಲ್ಲಿ ಎಡವಿದ್ದ ಆರ್‌ಸಿಬಿ ತಂಡ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನದ ಹೊರತಾಗಿಯೂ ಅಂತಿಮ ಹಂತದಲ್ಲಿ ಎಡವಿದ ಕಾರಣ ಸೋಲು ಕಾಣುವಂತಾಯಿತು. ಈ ಸೋಲಿನ ಬಗ್ಗೆ ವಿಮರ್ಶೆಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಸಮಸ್ಯೆ ಏನು ಎಂಬುದನ್ನು ವಿವರಿಸಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿತ್ತು. ಋತುರಾಜ್ ಗಾಯಕ್ವಾಡ್ ವಿಕೆಟನ್ನು ಆರಂಭದಲ್ಲಿಯೇ ಕಳೆದುಕೊಂಡಿತಾದರೂ ಡೆವೋನ್ ಕಾನ್ವೆ ಅವರ 45 ಎಸೆತಗಳಲ್ಲಿ ಬಂದ 83 ರನ್‌ಗಳ ಇನ್ನಿಂಗ್ಸ್‌ ಹಾಗೂ ಅಜಿಂಕ್ಯಾ ರಹಾನೆ ಹಾಗೂ ಶಿವಂ ದುಬೆ ಅಬ್ಬರದ ಪ್ರದರ್ಶನ ನೀಡಿದ ಕಾರಣದಿಂದಾಗಿ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ ಬರೊಬ್ಬರಿ 226 ರನ್‌ಗಳನ್ನು ಗಳಿಸಲು ಶಕ್ತವಾಯಿತು.

IPL 2023 RCB vs CSK: Zaheer Khan explain the problem of RCBs batting line-up after defeat against CSK

ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ತಂಡಕ್ಕೆ ನಿರೀಕ್ಷಿತ ಆರಂಭ ದೊರೆಯಲಿಲ್ಲ. ವಿರಾಟ್ ಕೊಹ್ಲಿ ಹಾಗೂ ಮಹಿಪಾಲ್ ಲೋಮ್ರೋರ್ ಶೀಘ್ರ ವಿಕೆಟ್ ಕಳೆದುಕೊಳ್ಳುವ ಮೂಲಕ ಆರ್‌ಸಿಬಿ ಆರಂಭಿಕ ಹಿನ್ನಡೆಗೆ ಒಳಗಾಯಿತು. ಬಳಿಕ ನಾಯಖ ಫಾಫ್ ಡು ಪ್ಲೆಸಿಸ್‌ಗೆ ಜೊತೆಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಪ್ರದರ್ಶನ ನೀಡಿದರು. ಈ ಜೋಡಿ ತಂಡವನ್ನು ಅಪಾಯದಿಂದ ಪಾರು ಮಾಡಿದ್ದಲ್ಲದೆ ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದ್ದರು. ಗೆಲುವಿನ ವಿಶ್ವಾಸದಲ್ಲಿದ್ದಾಗ ಈ ಜೋಡಿ ವಿಕೆಟ್ ಕಳೆದುಕೊಂಡಿತು. ಆದರೆ ಬಳಿಕ ಬಂದ ಬ್ಯಾಟರ್‌ಗಳು ಜವಾಬ್ಧಾರಿಯುತ ಪ್ರದರ್ಶಣ ನೀಡದ ಕಾರಣ ಆರ್‌ಸಿಬಿ ಈ ಪಂದ್ಯವನ್ನು ಸೋಲುವಂತಾಯಿತು.

ಈ ಸೋಲಿನ ಹಿನ್ನೆಲೆಯಲ್ಲಿ ಮಾತನಾಡಿದ ಜಹೀರ್ ಖಾನ್ ಆರ್‌ಸಿಬಿ ತಂಡದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಕಳೆದ ಬಾರಿಯ ಐಪಿಎಲ್‌ನಲ್ಲಿ ನಿರ್ವಹಿಸಿದ ಪಾತ್ರವನ್ನು ನಿಭಾಗಿಸಲು ದಿನೇಶ್ ಕಾರ್ತಿಕ್ ವಿಫಲವಾಗಿದ್ದಾರೆ ಎಂದಿದ್ದಾರೆ. ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕದ ಇತರ ಆಟಗಾರರು ಅನನುಭವಿಗಳು ಆಗಿರುವ ಕಾರಣ ಬ್ಯಾಟಿಂಗ್‌ನಲ್ಲಿ ಸಮಸ್ಯೆಗೆ ಒಳಗಾಗುತ್ತಿದೆ ಎಂದಿದ್ದಾರೆ ಜಹೀರ್ ಖಾನ್.

"ವಿರಾಟ್ ಕೊಹ್ಲಿ ಶೀಘ್ರವಾಗಿ ವಿಕೆಟ್ ಕಳೆದುಕೊಂಡ ಬಳಿಕ ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಒತ್ತಡವನ್ನು ಅರ್ಥ ಮಾಡಿಕೊಂಡು ಅದ್ಭುತವಾಗಿ ಪ್ರದರ್ಶನ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಅಥವಾ ಫಿನಿಷಿಂಗ್ ಜವಾಬ್ಧಾರಿ ವಹಿಸಿಕೊಂಡಿರುವ ದಿನೇಶ್ ಕಾರ್ತಿಕ್ ಕಳೆದ ಬಾರಿ ನಿರ್ವಹಿಸಿದ ಪಾತ್ರವನ್ನು ನಿಭಾಯಿಸಲು ವಿಫಲವಾದರು. ಉಳಿದ ಆಟಗಾರು ಅನನುಭವಿಗಳಾಗಿರುವ ಕಾರಣ ಈ ಸಮಸ್ಯೆ ಮುಂದೆಯೂ ಆರ್‌ಸಿಇಗೆ ಕಾಡಲಿದೆ" ಎಂದಿದ್ದಾರೆ ಜಹೀರ್ ಖಾನ್.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿರುವ ಕಾರಣ ಆರ್‌ಸಿಬಿ ತಂಡ ಈಗ ಮತ್ತೆ ಗೆಲುವಿನ ಲಯಕ್ಕೆ ಮರಳುವ ಚಿತ್ತ ನಡೆಸಲಿದೆ. ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದ್ದು ಮೊಹಾಲಿಯಲ್ಲಿ ಈ ಪಂದ್ಯ ನಡೆಯಲಿದೆ. ಗುರುವಾರ ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಚೇತರಿಕೆ ಕಾಣುವ ಪ್ರಯತ್ನ ನಡೆಸಲಿದೆ ಆರ್‌ಸಿಬಿ.

Story first published: Tuesday, April 18, 2023, 15:32 [IST]
Other articles published on Apr 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+