Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs GT: ನಿರ್ಣಾಯಕ ಪಂದ್ಯಕ್ಕೆ ಮಳೆರಾಯ ವಿಲನ್? ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಿದೆ ಹವಾಮಾನ ವರದಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೆಂಗಳೂರಿನಲ್ಲಿ ಇಂದು ಗುಜರಾತ್ ಟೈಟನ್ಸ್ ತಂಡ ವಿರುದ್ಧ ಟೂರ್ನಿಯ ಅಂತಿಮ ಹಾಗೂ ನಿರ್ಣಾಯಕ ಲೀಗ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಆರ್‌ಸಿಬಿ ತಂಡದ ಪ್ಲೇಆಫ್ ದೃಷ್ಟಿಯಿಂದ ಈ ಪಂದ್ಯ ಬಹಳ ನಿರ್ಣಾಯಕ ಎನಿಸಿಕೊಂಡಿದೆ. ಈ ಪಂದ್ಯದಲ್ಲಿ ಗೆದ್ದರೆ ಮಾತ್ರವೇ ಪ್ಲೇಆಫ್ ಸಾಧ್ಯ ಎಂಬ ಸ್ಥಿತಿಯಿದೆ. ಆದರೆ ಈ ಮಹತ್ವದ ಪಂದ್ಯಕ್ಕೆ ಮಳೆರಾಯ ಅಡ್ಡಿಯುಂಡು ಮಾಡುವ ಭೀತಿಯಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳುರು ಹಾಗೂ ಗುಜರಾತ್ ಟೈಟನ್ಸ ವಿರುದ್ಧದ ಪಂದ್ಯಕ್ಕೂ ಮುನ್ನಾದಿನ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ಪಂದ್ಯದ ದಿನವೂ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡ್ಡಿಯಿಂಟು ಮಾಡುವ ಭೀತಿ ಸ್ಪಷ್ಟವಾಗಿದೆ. ಶನಿವಾರ ಮಳೆಯ ಕಾಣದಿಂದಾಗಿ ಆಟಗಾರರು ಹೊರಾಂಗಣ ಅಭ್ಯಾಸ ನಡೆಸಲು ಕೂಡ ಸಾಧ್ಯವಾಗಿರಲಿಲ್ಲ.

IPL 2023, RCB vs GT: Bengaluru Weather Report ahead of Royal Challengers Bangalore vs Gujarat Titans match

ಹವಾಮಾನ ವರದಿಯ ಪ್ರಕಾರ ಇಂದು ಸಂಜೆ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ನಿಗದಿಗಿಂತ ತೆವಾಗಿ ಪಂದ್ಯ ಆರಂಬವಾಗುವ ಅಥವಾ ಪಂದ್ಯದ ಆರಂಭಕ್ಕೆ ಅವಕಾಶವೇ ದೊರೆಯದ ಸ್ಥಿತಿಯಿದೆ. ಅಕ್ಯುವೆದರ್ ಪ್ರಕಾರ ಭಾನುವಾರ ಮಧ್ಯಾಹ್ನದಿಂದಲೇ ಬೆಂಗಳೂರು ನಗರದಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಶೇಕಡಾ 50ರಷ್ಟು ಮಳೆಯಾಘುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಹೇಳುತ್ತಿದೆ. ಸಂಜೆ 7 ಗಂಟೆ ಪಂದ್ಯದ ಟಾಸ್ ಪ್ರಕ್ರಿಯೆಯ ಸಮಯವಾಗಿದ್ದು ಈ ಸಂದರ್ಭದಲ್ಲಿ ಮಳೆಯಾಗುವ ಸಾಧ್ಯತೆ ಶೇಕಡಾ 65ರಷ್ಟಿದೆ. ರಾತ್ರಿ 9-11ರ ಅವಧಿಯ ವರೆಗೂ ಇದೇ ವಾತಾವರಣವಿರುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಹೇಳಿದೆ.

ಪಂದ್ಯ ನಡೆಯದಿದ್ದರೆ?
ಇನ್ನು ಈ ಪಂದ್ಯ ನಡೆಯಲು ಮಳೆ ಅವಕಾಶ ನೀಡದಿದ್ದರೆ ಪಂದ್ಯವನ್ನು ರದ್ದಾಗಲಿದ್ದು ಎರಡು ತಂಡಗಳು ಕೂಡ ತಲಾ ಒಂದು ಅಂಕಗಳನ್ನು ಪಡೆಯಲಿದೆ. ಆಗ ಈ ಪಂದ್ಯಕ್ಕೂ ಹಿಂದಿನ ಪಂದ್ಯ ಮುಂಬೈ ಇಮಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದ ಫಲಿತಾಂಶ ಮಹತ್ವ ಪಡೆದುಕೊಳ್ಳಲಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಗೆಲುವು ಸಾಧಿಸಿದ್ದರೆ ಮುಂಬೈ ಇಂಡಿಯನ್ಸ್ ತಂಡ ಆಗ 16 ಅಂಕಗಳನ್ನು ಪಡೆದುಕೊಳ್ಳಲಿದ್ದು ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ 4ನೇ ಸ್ಥಾನವನ್ನು ಪಡೆಯಲಿದೆ. ಆರ್‌ಸಿಬಿ ತಂಡ 15 ಅಂಕಗಳಿಗೆ ಸೀಮಿಯವಾಗಲಿದ್ದು 5ನೇ ಸ್ಥಾನಕ್ಕೆ ಕುಸಿಯಲಿದೆ.

ಇನ್ನು ಗುಜರಾತ್ ಟೈಟನ್ಸ್ ತಂಡ ನಂಬರ್1 ಸ್ಥಾನದೊಂದಿಗೆ ಈಗಾಗಲೇ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಸ್ಥಾನದೊಂದಿಗೆ ಪ್ಲೇಆಫ್‌ಗೆ ಪ್ರವೇಶ ಪಡೆದಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಪ್ಲೇಆಫ್‌ಗೆ ಪ್ರವೇಶ ಪಡೆದಿದೆ.

Story first published: Sunday, May 21, 2023, 12:53 [IST]
Other articles published on May 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+