ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ ತಂಡ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಸವಾಲೊಡ್ಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯಾವ ತಂಡ ಮೇಲುಗೈ ಸಾಧಿಸಲಿದೆ ಎಂಬುದಕ್ಕೆ ಕೆಲವೇ ಗಂಟೆಗಳಲ್ಲಿ ಉತ್ತರ ದೊರೆಯಲಿದೆ. ಎರಡು ತಂಡಗಳಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಸ್ಟಾರ್ ಆಟಗಾರರಿದ್ದು ಯಾವ ಆಟಗಾರರು ಈ ಪಂದ್ಯದಲ್ಲಿ ಯಶಸ್ಸು ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಆಡಿರುವ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಮೂರನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಮತ್ತೊಂದೆಡೆ ಆರ್‌ಸಿಬಿ ತಂಡ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡ ಬಳಿಕ ಎರಡನೇ ಪಂದ್ಯವನ್ನು ಹೀನಾಯವಾಗಿ ಸೋತಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲುವಿನ ನಿರೀಕ್ಷೆಯಲ್ಲಿ ಎರಡೂ ತಮಡಗಳು ಕೂಡ ಇದೆ. ಆರ್‌ಸಿಬಿ ತಂಡ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಆಡಲಿರುವ ಕಾರಣ ತಂಡದ ಉತ್ಸಾಹ ಹೆಚ್ಚಾಗಿರುವುದರಲ್ಲಿ ಅನುಮಾನವಿಲ್ಲ.

Rashid Khan: IPL 2023ರ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದ ರಶೀದ್ ಖಾನ್
ಈ ಪಂದ್ಯದಲ್ಲಿ ಎರಡು ತಂಡಗಳ ಕೆಲ ಆಟಗಾರರು ಪ್ರಮುಖ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟಿದ್ದಾರೆ. ಯಾವೆಲ್ಲಾ ಆಟಗಾರರು ಈ ಪಂದ್ಯದಲ್ಲಿ ವಿಶೇಷ ಮೈಲಿಗಲ್ಲುಗಳನ್ನು ಸಾಧಿಸಬಹುದು? ಇಲ್ಲಿದೆ ಮಾಹಿತಿ.
* ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಐಪಿಎಲ್‌ನಲ್ಲಿ 4000 ರನ್‌ಗಳ ಮೈಲಿಗಲ್ಲಿನ ಸನಿಹದಲ್ಲಿದ್ದಾರೆ. ಐಪಿಎಲ್‌ನಲ್ಲಿ 113 ಪಂದ್ಯಗಳನ್ನು ಆಡಿರುವ ಕೆಎಲ್ ರಾಹುಲ್ ಪ್ರಸ್ತುತ 3952 ರನ್‌ಗಳನ್ನು ಗಳಿಸಿದ್ದು 47ರ ಸರಾಸರಿಯಲ್ಲಿ 135.5ರಷ್ಟು ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಸದ್ಯ 4000 ರನ್‌ಗಳ ಮೈಲಿಗಲ್ಲು ದಾಟಲು 48 ರನ್‌ಗಳ ಅಗತ್ಯವಿದೆ.
* ಇನ್ನು ಎಲ್‌ಎಸ್‌ಜಿ ನಾಯಕ ಕೆಎಲ್ ರಾಹುಲ್ ಮತ್ತೊಂದು ಮೈಲಿಗಲ್ಲಿನ ಸನಿಹದಲ್ಲಿದ್ದು ಟಿ20 ಕ್ರಿಕೆಟ್‌ನಲ್ಲಿ 300 ಸಿಕ್ಸರ್ ಸಿಡಿಸಿದ ಸಾಧನೆ ಮಾಡುವ ಅವಕಾಶ ಹೊಂದಿದ್ದಾರೆ. ಆದರೆ ಈ ಸಾಧನೆ ಮಾಡಲು ಅವರು ಇಂದು 11 ಸಿಕ್ಸರ್‌ಗಳನ್ನು ಬಾರಿಸಬೇಕಿದೆ.
*ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ನಿಕೋಲಸ್ ಪೂರನ್ ಐಪಿಎಲ್‌ನಲ್ಲಿ 1000 ರನ್‌ಗಳ ಮೈಲುಗಲ್ಲು ತಲುಪುವ ಸನಿಹದಲ್ಲಿದ್ದಾರೆ. ಇದಕ್ಕಾಗಿ ನಿಕೋಲಸ್ ಪೂರನ್ ಕೇವಲ 9 ರನ್ ಮಾತ್ರವೇ ಗಳಿಸಬೇಕಿದೆ. ಪೂರನ್ ಐಪಿಎಲ್‌ನಲ್ಲಿ 50 ಪಂದ್ಯಗಳನ್ನು ಆಡಿದ್ದು 991 ರನ್‌ಗಳನ್ನು ಗಳಿಸಿದಿದ್ದಾರೆ. 152.9ರಷ್ಟು ಅದ್ಭುತವಾದ ಸ್ಟ್ರೈಕ್‌ರೇನ್ ಹೊಂದಿದ್ದಾರೆ.
* ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ಪರವಾಗಿ ಮಿಂಚಿರುವ ಆಟಗಾರ ಕೇಲ್ ಮೇಯರ್ಸ್ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 2000 ರನ್‌ಗಳ ಗಡಿದಾಟುವ ಅವಕಾಶ ಹೊಂದಿದ್ದಾರೆ. ಇದಕ್ಕಾಗಿ ಅವರು ಈ ಪಂದ್ಯದಲ್ಲಿ ಕೇವಲ 8 ರನ್‌ಗಳನ್ನು ಗಳಿಸಬೇಕಿದೆ.
*ಮತ್ತೋರ್ವ ಎಲ್‌ಎಸ್‌ಜಿ ಆಟಗಾರ ದೀಪಕ್ ಹೂಡಾ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 3000 ರನ್‌ಗಳನ್ನು ಗಳಿಸಿದ ಸಾಧನೆ ಮಾಡುವ ಅವಕಾಶ ಹೊಂದಿದ್ದಾರೆ. ಅದಕ್ಕಾಗಿ ಹೂಡಾ ಈ ಪಂದ್ಯದಲ್ಲಿ 52 ರನ್ ಗಳಿಸಬೇಕು.
*ಆರ್‌ಸಿಬಿ ತಂಡದ ಪ್ರಮುಖ ವೇಗದ ಬೌಲರ್ ಹರ್ಷಲ್ ಪಟೇಲ್ ಐಪಿಎಲ್‌ನಲ್ಲಿ 100 ವಿಕೆಟ್‌ಗಳ ಸಾಧನೆಗೆ ಹತ್ತಿರವಾಗಿದ್ದಾರೆ. ಇದಕ್ಕಾಗಿ ಈ ಪಂದ್ಯದಲ್ಲಿ ಹರ್ಷಲ್ ಪಟೇಲ್ ಕೇವಲ ಒಮದು ವಿಕೆಟ್ ಕಬಳಿಸಿದರೆ ಸಾಕು.
*ಎಲ್‌ಎಸ್‌ಜಿ ತಂಡದ ಸ್ಪಿನ್ನರ್ ಅಮಿತ್ ಮಿಶ್ರಾ ಐಪಿಎಲ್‌ನಲ್ಲಿ ಒಟ್ಟಿ 168 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಅವರು ಮೂರು ವಿಕೆಟ್‌ಗಳನ್ನು ಪಡೆದರೆ ಲಸಿತ್ ಮಲಿಂಗಾ ಅವರನ್ನು ಹಿಂದಿಕ್ಕಲಿದ್ದು ಐಪಿಎಲ್‌ನಲ್ಲಿ ಮೂರನೇ ಅತ್ಯಂತ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಲಿದ್ದಾರೆ.
*ಆರ್‌ಸಿಬಿ ತಂಡದ ವಿಕೆಟ್ ಕೀಪರ್ ಬ್ಯಾಟರ್ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸುವ ಅವಕಾಶ ಹೊಂದಿದ್ದಾರೆ. ಟಿ20 ಮಾದರಿಯಲ್ಲಿ ದಿನೇಶ್ ಕಾರ್ತಿಕ್ 7000 ರನ್‌ಗಳನ್ನು ಪೂರ್ತಿಗೊಳಿಸಿದ ಆಟಗಾರ ಎಂಬ ಅವಕಾಶವನ್ನು ಹೊಂದಿದ್ದು ಇದಕ್ಕಾಗಿ ಅವರು 50 ರನ್‌ಗಳನ್ನು ಗಳಿಸಬೇಕಿದೆ.