IPL 2023: ಎಲ್ಲಾ 10 ತಂಡಗಳಿಂದ ಕೈಬಿಡಲಾದ ಕರ್ನಾಟಕ ಆಟಗಾರರ ಪಟ್ಟಿ

ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಐಪಿಎಲ್ 2023ರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಹೀಗಾಗಿ ಎಲ್ಲಾ ಹತ್ತು ಫ್ರಾಂಚೈಸಿಗಳು ತಮ್ಮ ತಂಡದ ಉಳಿಸಿಕೊಂಡ ಮತ್ತು ಕೈಬಿಟ್ಟ ಆಟಗಾರರ ಪಟ್ಟಿಯನ್ನು ನವೆಂಬರ್ 15ರಂದು ಬಿಸಿಸಿಐಗೆ ಸಲ್ಲಿಸಿವೆ.
16ನೇ ಐಪಿಎಲ್ ಆವೃತ್ತಿಗೆ ಎಲ್ಲಾ 10 ತಂಡಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ಹಿನ್ನೆಲೆ ಆಯಾ ಫ್ರಾಂಚೈಸಿಗಳು ತಮ್ಮ ಬಲಿಷ್ಠ ತಂಡಗಳನ್ನು ಕಟ್ಟಿಕೊಳ್ಳಲು ಕಿರು ಹರಾಜಿಗೆ ಸಜ್ಜಾಗಿವೆ.
2023ರ ಹರಾಜಿಗೆ ಮುಂಚಿತವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳಿಂದ ಬಿಡುಗಡೆಯಾದ ಹಿರಿಯ ಆಟಗಾರರಲ್ಲಿ ಪಂಜಾಬ್ ಕಿಂಗ್ಸ್‌ನ ನಾಯಕರಾಗಿದ್ದ ಮಯಾಂಕ್ ಅಗರ್ವಾಲ್ ಪ್ರಮುಖ ಆಟಗಾರನಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಸ್ಥಿರವಾದ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲರಾದ ಮಯಾಂಕ್, ನಾಯಕನಾಗಿ ತಂಡವನ್ನು ನಾಕೌಟ್ ಹಂತಕ್ಕೂ ತೆಗೆದುಕೊಂಡು ಹೋಗುವಲ್ಲಿ ವಿಫಲರಾಗಿದ್ದರು.
ಮಯಾಂಕ್ ಅಗರ್ವಾಲ್ ಬದಲಿಗೆ ಭಾರತ ರಾಷ್ಟ್ರೀಯ ತಂಡದ ಹಿರಿಯ ಬ್ಯಾಟರ್ ಶಿಖರ್ ಧವನ್ ಅವರು ಪಂಜಾಬ್ ಕಿಂಗ್ಸ್ ತಂಡದ ಹೊಸ ನಾಯಕನಾಗಿ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ.

ಕಳೆದ ತಿಂಗಳು ಅಂತಾರಾಷ್ಟ್ರಿಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ ಇನ್ನೊಬ್ಬ ಕನ್ನಡಿಗ ರಾಬಿನ್ ಉತ್ತಪ್ಪ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೈಬಿಟ್ಟಿದೆ. ಅದೇ ರೀತಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ ತಂಡ ಮನೀಶ್ ಪಾಂಡೆರನ್ನು ಬಿಡುಗಡೆಗೊಳಿಸಿದೆ.
ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವ ಮಯಾಂಕ್ ಅಗರ್ವಾಲ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ ಕೈಬಿಟ್ಟಿದ್ದು, ಮುಂದಿನ ಹರಾಜು ಪ್ರಕ್ರಿಯೆಯಲ್ಲಿ ಯಾವ ತಂಡದ ಪಾಲಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಐಪಿಎಲ್ ತಂಡಗಳು ತಮ್ಮ ರಿಟೆನ್ಶನ್ ವೇಳೆ ಮಯಾಂಕ್ ಅಗರ್ವಾಲ್ ಸೇರಿ ಕರ್ನಾಟಕದ 8 ಆಟಗಾರರನ್ನು ಕೈಬಿಟ್ಟಿದ್ದು, ಅವರ ಹೆಸರು ಇಲ್ಲಿದೆ.
ಮಯಾಂಕ್ ಅಗರ್ವಾಲ್- ಪಂಜಾಬ್ ಕಿಂಗ್ಸ್
ಮನೀಶ್ ಪಾಂಡೆ- ಲಕ್ನೋ ಸೂಪರ್‌ಜೈಂಟ್ಸ್
ಜೆ ಸುಚಿತ್, ಆರ್ ಸಮರ್ಥ್ ಮತ್ತು ಶ್ರೇಯಸ್ ಗೋಪಾಲ್- ಸನ್‌ರೈಸರ್ಸ್ ಹೈದರಾಬಾದ್
ಕರುಣ್ ನಾಯರ್- ರಾಜಸ್ಥಾನ ರಾಯಲ್ಸ್
ಅನೀಶ್ವರ್ ಗೌತಮ್ ಮತ್ತು ಲುವ್ನಿತ್ ಸಿಸೋಡಿಯಾ- ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಬಿನ್ ಉತ್ತಪ್ಪ- ಚೆನ್ನೈ ಸೂಪರ್ ಕಿಂಗ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications