ಅಂತಿಮ 5 ಎಸೆತದಲ್ಲಿ 5 ಸಿಕ್ಸರ್: ಕೆಕೆಆರ್‌ಗೆ ಸಂಬಲಸಾಧ್ಯ ಗೆಲುವು ತಂದುಕೊಟ್ಟ ರಿಂಕು ಸಿಂಗ್!

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ರೋಚಕ ಪಂದ್ಯಕ್ಕೆ ಇಂದು ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಸೋಲಿನ ಅಂಚಿನಲ್ಲಿದ್ದ ಕೆಕೆಆರ್ ತಂಡವನ್ನು ಪವಾಡ ಸದೃಶ್ವಾಗಿ ರಿಂಕು ಸಿಂಗ್ ಗೆಲ್ಲಿಸಿದ್ದು ತಾನೆಂಥಾ ಅದ್ಭುತ ಆಟಗಾರ ಎಂಬುದನ್ನು ಸಾರಿದ್ದಾರೆ. ಕೊನೆಯ ಐದು ಎಸೆತಗಳಲ್ಲಿ 29 ರನ್‌ಗಳ ಅಗತ್ಯವಿದ್ದಾಗ ರಿಂಕು ಸಿಂಗ್ ಎಲ್ಲಾ ಐದು ಎಸೆತಗಳನ್ನು ಕೂಡ ಸಿಕ್ಸರ್‌ಗೆ ಅಟ್ಟುವ ಮೂಲಕ ಕೆಕೆಆರ್‌ಗೆ ಅಮೋಘ ಗೆಲುವು ತಂದಿಟ್ಟಿದ್ದಾರೆ. ಈ ಮೂಲಕ ಗುಜರಾತ್ ಟೈಟನ್ಸ್ ತಂಡ ಮೊದಲ ಸೋಲು ಅನುಭವಿಸಿದೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ಕೆಕೆಆರ್‌ಗೆ ಭರ್ತಿ 205 ರನ್‌ಗಳ ಗುರಿ ನೀಡಿತ್ತು. ವೆಂಕಟೇಶ್ ಐಯ್ಯರ್ ಹಾಗೂ ನಾಯಕ ನಿತೀಶ್ ರಾಣಾ ಅವರ ಅದ್ಭುತ ಪ್ರದರ್ಶನದಿಮದಾಗಿ ಕೆಕೆಆರ್ ತಂಡ ಅದ್ಭುತ ಹೋರಾಟವನ್ನು ನೀಡುತ್ತಾ ಸಾಗಿತ್ತು. ನಿತೀಶ್ ರಾಣಾ 29 ಎಸೆತಗಳಲ್ಲಿ 45 ರನ್ ಬಾರಿಸಿದ ಬಳಿಕ ಈ ಜೋಡಿಯ 100 ರನ್‌ಗಳ ಜೊತೆಯಾಟ ಅಂತ್ಯವಾಯಿತು.
ಬಳಿಕ ವೆಂಕಟೇಶ್ ಐಯ್ಯರ್ 40 ಎಸೆತಗಳಲ್ಲಿ 83 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಈ ಸಂದರ್ಭದಲ್ಲಿ ತಂಡದ ಮೊತ್ತ 15.5 ಓವರ್‌ಗಳಲ್ಲಿ 154ಕ್ಕೆ 4 ವಿಕೆಟ್. ವೆಂಕಟೇಶ್ ಐಯ್ಯರ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆಯೇ ಕೆಕೆಆರ್ ತಂಡ ಹಠಾತ್ ಕುಸಿತಕ್ಕೆ ಒಳಗಾಯಿತು. ತಂಡದ ಪ್ರಮುಖ ಆಟಗಾರರಾದ ಆಂಡ್ರೆ ರಸೆಲ್, ಸುನಿಲ್ ನರೈನ್ ಹಾಗೂ ಕಳೆದ ಪಂದ್ಯದ ಹೀರೋ ಶಾರ್ದೂಲ್ ಠಾಕೂರ್ ವಿಕೆಟ್‌ಗಳನ್ನು ಕೇವಲ ಒಂದು ರನ್ ಅಂತರದಲ್ಲಿ ಕಳೆದುಕೊಂಡಿತು. ಅಲ್ಲಿಗೆ ಕೆಕೆಆರ್ ಸ್ಕೋರ್ 16.3 ಓವರ್‌ಗಳಲ್ಲಿ 155ಕ್ಕೆ 7 ವಿಕೆಟ್.
ಬಳಿಕ ಸಂಪೂರ್ಣ ಜವಾಬ್ಧಾರಿ ವಹಿಸಿಕೊಂಡಿದ್ದು ರಿಂಕೂ ಸಿಂಗ್. ತನ್ನ ಂಏಲಿದ್ದ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ರಿಂಕು ಸಿಂಗ್ ಕೆಕೆಆರ್‌ಗೆ ನಿರೀಕ್ಷಿಸಲೂ ಸಾಧ್ಯವಾಗದ ಗೆಲುವು ತಂದುಕೊಟ್ಟರು. ಅದರಲ್ಲೂ ಅಂತಿಮ ಓವರ್‌ನಲ್ಲಿ ಕೆಕೆಆರ್ ತಂಡಕ್ಕೆ ಗೆಲ್ಲು ಅಗತ್ಯವಿದ್ದಿದ್ದು ಭರ್ತಿ 31 ರನ್. ಈ ಹಂತದಲ್ಲಿ ಕೆಕೆಆರ್ ಗೆಲ್ಲಲಿದೆ ಎಂದು ಯಾರು ಕೂಡ ನಿರೀಕ್ಷಿಸಿರಲಿಲ್ಲ.
ಯಶ್ ದಯಾಳ್ ಎಸೆದ ಈ ಕೊನೆಯ ಓವರ್‌ನಲ್ಲಿ ಆರಂಭಿಕ ಎಸೆತವನ್ನು ಎದುರಿಸಿದ ಉಮೇಶ್ ಯಾದವ್ ಒಂಟಿ ರನ್ ತೆಗೆದು ರಿಂಕು ಸಿಂಗ್‌ಗೆ ಬ್ಯಾಟಿಂಗ್‌ಗೆ ಅವಕಾಶ ಮಾಡಿಕೊಟ್ಟರು. ಬಳಿಕ ರಿಂಕು ಸಿಂಗ್ ಅವರದ್ದೇ ಆರ್ಭಟ. ಮುಂದಿನ ಎಲ್ಲಾ ಐದು ಎಸೆತಗಳನ್ನು ಕೂಡ ಸಿಕ್ಸರ್‌ಗೆ ಅಟ್ಟಿದ ರಿಂಕು ಸಿಂಗ್ ಐಪಿಎಲ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದರು. ಈ ಮೂಲಕ ಕೆಕೆಆರ್ ತಂಡ ಸತತ ಎರಡನೇ ಗೆಲುವು ಸಾಧಿಸಿದೆ.
ಇನ್ನು ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟನ್ಸ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಆಟಗಾರ ವೃದ್ಧಿಮಾನ್ ಸಹಾ 17 ರನ್‌ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ ಬ್ಯಾಟಿಂಗ್‌ಗೆ ಸಾಯಿ ಸುದರ್ಶನ ಮತ್ತೊಮ್ಮೆ ಜವಾಬ್ಧಾರಿಯುತ ಪ್ರದರ್ಶನ ನಿಡಿ ಗಮನಸೆಳೆದ್ದು ಸತತ ಎರಡೇ ಅರ್ಧ ಶತಕ ಸಿಡಿಸಿದರು. 38 ಎಸೆತಗಳನ್ನು ಎದುರಿಸಿದ ಸಾಯಿ ಸುದರ್ಶನ 53 ರನ್‌ಗಳಿಸಿ ಮಿಂಚಿದರು. ಇವರಿಗೆ ಉತ್ತಮವಾಗಿ ಸಾಥ್ ನೀಡಿದ ಶುಬ್ಮನ್ ಗಿಲ್ 39 ರನ್‌ಗಳಿಸಿದರು. ಇನ್ನು ಅಭಿನಮ್ ಮನೋಹರ್ 14 ರನ್‌ಗಳಿಗೆ ಔಟಾದ ಕ್ರೀಸ್‌ಗೆ ಇಳಿದ ವಿಜಯ್ ಶಂಕರ್ ರೌದ್ರಾವತಾರ ತೋರಿದರು.
ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವಿಜಯ್ ಶಂಕರ್ ಕೇವಲ 24 ಎಸೆತಗಳಲ್ಲಿ 63 ರನ್ ಬಾರಿಸಿ ಅಬ್ಬರಿಸಿದ್ದಾರೆ. ನಾಲ್ಕು ಬೌಂಡರಿ ಹಾಗೂ ಐದು ಸಿಕ್ಸರ್ ಬಾರಿಸಿದ ವಿಜತ್ ಶಂಕರ್ ತಂಡದ ಮೊತ್ತ ಇನ್ನೂರರ ಗಡಿ ದಾಟಲು ಕಾರಣವಾದರು. 262.50 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ವಿಜಯ್ ಅಜೇಯವಾಗುಳಿದರು ಈ ಭರ್ಜರಿ ಪ್ರದರ್ಶನದ ಕಾರಣದಿಂದಾಗಿ ಗುಜರಾತ್ ಟೈಟನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 204 ರನ್‌ಗಳಿಸಿತು
ಕೋಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗ: ರಹಮಾನುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ಎನ್ ಜಗದೀಸನ್, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಸುಯಶ್ ಶರ್ಮಾ, ಲಾಕಿ ಫರ್ಗುಸನ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ
ಗುಜರಾತ್ ಟೈಟನ್ಸ್ ಆಡುವ ಬಳಗ: ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ರಶೀದ್ ಖಾನ್(ನಾಯಕ), ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications