Rinku Singh: ಯುವ ಕ್ರಿಕೆಟಿಗರ ಕನಸಿಗೆ ನೀರೆರೆದ ರಿಂಕು ಸಿಂಗ್; 50 ಲಕ್ಷ ರೂ. ಖರ್ಚಿನಲ್ಲಿ ಕ್ರೀಡಾ ಹಾಸ್ಟೆಲ್ ನಿರ್ಮಾಣ!
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೆಲವು ಅಚ್ಚರಿ ಹಾಗೂ ರೋಮಾಂಚನಕಾರಿ ಕ್ಷಣಗಳಿಗೆ ಕ್ರಿಕೆಟ್ ಪ್ರೇಮಿಗಳು ಸಾಕ್ಷಿಯಾಗಿದ್ದು, ಅದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ಅಂತಿಮ ಓವರ್ ಕೂಡ ಒಂದಾಗಿದೆ.
ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟರ್ ರಿಂಕು ಸಿಂಗ್ ಕೊನೆಯ ಓವರ್‌ನಲ್ಲಿ ಸತತ ಸಿಕ್ಸರ್ ಬಾರಿಸಿ ನಂಬಲಾಸಾಧ್ಯ ಗೆಲುವು ತಂದುಕೊಟ್ಟರು. ಅಂದಿನಿಂದ ರಿಂಕು ಸಿಂಗ್ ಎಂಬ ಹೆಸರು ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಚರ್ಚೆಯಾಯಿತು ಮತ್ತು ತಂಡದ ಮಾಲೀಕ ಶಾರೂಖ್ ಖಾನ್ ಸೇರಿದಂತೆ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದರು.

ರಿಂಕು ಸಿಂಗ್ ಅವರ ಗೊತ್ತಿರದ ಕಥೆಯೊಂದು ಇದೀಗ ಹೊರಬಂದಿದೆ. ಅವರ ಕ್ರೀಡಾ ಕಳಕಳಿ ಮತ್ತು ಕ್ರಿಕೆಟ್ ಅನ್ನು ಅವರು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಈ ನಿಸ್ವಾರ್ಥ ಸೇವೆ ಸಾಕ್ಷಿಯಾಗಿದೆ.
ಉತ್ತರಪ್ರದೇಶ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅವರು ಬಡತನದಿಂದ ಬಳಲುತ್ತಿರುವ ಕ್ರಿಕೆಟಿಗರಿಗೆ ಹಾಸ್ಟೆಲ್ ನಿರ್ಮಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಯುವ ಕ್ರಿಕೆಟಿಗರು ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಅಲಿಘರ್‌ನಲ್ಲಿ ಹಾಸ್ಟೆಲ್ ನಿರ್ಮಿಸಲು 50 ಲಕ್ಷ ರೂ. ವೆಚ್ಚ ಮಾಡುತ್ತಿದ್ದಾರೆ.
"ಮೂರು ತಿಂಗಳ ಹಿಂದೆ ರಿಂಕು ಸಿಂಗ್ ತನ್ನ ತಂಡವನ್ನು ಸೇರುವ ಮೊದಲು ಕಟ್ಟಡದ ಪ್ರಗತಿಯನ್ನು ಹತ್ತಿರದಿಂದ ವೀಕ್ಷಿಸುವುದರೊಂದಿಗೆ ಕೆಲಸ ಪ್ರಾರಂಭವಾಯಿತು. ಈ ಹಾಸ್ಟೆಲ್ 14 ಕೊಠಡಿಗಳನ್ನು ಹೊಂದಿರುತ್ತದೆ ಮತ್ತು ಪ್ರತಿಯೊಂದೂ ನಾಲ್ಕು ಪ್ರಶಿಕ್ಷಣಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತದೆ. ಶೆಡ್, ಪ್ರತ್ಯೇಕ ಶೌಚಾಲಯಗಳನ್ನೂ ನಿರ್ಮಿಸಲಾಗುತ್ತಿದೆ".

"ಈ ಪ್ರಶಿಕ್ಷಣಾರ್ಥಿಗಳು ಸ್ಥಳದಲ್ಲಿ ನಡೆಸುತ್ತಿರುವ ಕ್ಯಾಂಟೀನ್‌ನ ಆಹಾರ ಸೇವಿಸಬಹುದು. ಇದಕ್ಕೆ ಸುಮಾರು 50 ಲಕ್ಷ ರೂ. ವೆಚ್ಚವಾಗಲಿದೆ ಮತ್ತು ಸಂಪೂರ್ಣ ವೆಚ್ಚವನ್ನು ರಿಂಕು ಸಿಂಗ್ ಭರಿಸುತ್ತಿದ್ದಾರೆ," ಎಂದು ಅಲಿಘರ್ ಕ್ರಿಕೆಟ್ ಸ್ಕೂಲ್ ಮತ್ತು ಅಕಾಡೆಮಿ ಕೋಚ್ ಹೇಳಿದ್ದಾರೆ.
ಇನ್ನು ಹಾಸ್ಟೆಲ್‌ನ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳುವ ರಿಂಕು ಸಿಂಗ್ ಹಿರಿಯ ಸಹೋದರ ಸೋನು, ತನ್ನ ಸಹೋದರನ ಕನಸು ಅಂತಿಮವಾಗಿ ನನಸಾಗುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾನೆ.
"ಬಡತನದ ಕಾರಣ ನಾವು ಒಟ್ಟಿಗೆ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸಿದ್ದೇವೆ. ಆದರೆ ರಿಂಕು ಯಾವಾಗಲೂ ಕ್ರಿಕೆಟ್‌ನತ್ತ ಗಮನ ಹರಿಸಬೇಕೆಂದು ನಾವು ಬಯಸುತ್ತೇವೆ. ರಿಂಕು ನಮ್ಮನ್ನು ಬಡತನದಿಂದ ಹೊರತಂದಿದ್ದು ಮಾತ್ರವಲ್ಲದೆ, ಬಡ ಕ್ರಿಕೆಟಿಗರಿಗೆ ಹಾಸ್ಟೆಲ್ ನಿರ್ಮಿಸಲು ನಿರ್ಧರಿಸಿದ್ದರಿಂದ ನಾವು ಮಾಡಿದ ತ್ಯಾಗಕ್ಕೆ ಫಲ ಸಿಕ್ಕಿದೆ," ಎಂದು ಸೋನು ಸಿಂಗ್ ತಿಳಿಸಿದ್ದಾರೆ.

ಐಪಿಎಲ್ 2023: ಕೊನೆಯ ಓವರ್‌ನಲ್ಲಿ 5 ಸಿಕ್ಸರ್ ಬಾರಿಸಿದ ರಿಂಕು ಸಿಂಗ್
ರಿಂಕು ಸಿಂಗ್ 2023ರ ಐಪಿಎಲ್‌ನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ಕೊನೆಯ ಓವರ್‌ನಲ್ಲಿ 29 ರನ್ ಬೇಕಿದ್ದಾಗ, ಯುಪಿ ತಂಡದ ಸಹ ಆಟಗಾರ ಯಶ್ ದಯಾಳ್ ಬೌಲಿಂಗ್‌ನಲ್ಲಿ ಸತತ 5 ಎಸೆತಗಳಲ್ಲಿ 5 ಸಿಕ್ಸರ್ ಬಾರಿಸಿದರು. ಯುಪಿ ತಂಡದ ಸಹ ಆಟಗಾರ ಯಶ್ ದಯಾಳ್
ಎಡಗೈ ಬ್ಯಾಟರ್ ರಿಂಕು ಸಿಂಗ್ 2017ರಲ್ಲಿ ಮೊದಲು ಪಂಜಾಬ್ ಕಿಂಗ್ಸ್ ಪರ 10 ಲಕ್ಷ ರೂ.ಗೆ ಆಯ್ಕೆಯಾಗಿದ್ದರು. ನಂತರದ ಋತುವಿನಲ್ಲಿ 80 ಲಕ್ಷ ರೂ.ಗೆ ಖರೀದಿಸಿದ ಕೆಕೆಆರ್ ತಂಡಕ್ಕೆ ಸೇರಿದ ನಂತರ ಐಪಿಎಲ್‌ಗೆ ಪದಾರ್ಪಣೆ ಮಾಡಿದರು.
ಐಪಿಎಲ್ 2022ರ ಋತುವಿನಲ್ಲಿ ಆಡಿದ ಏಳು ಪಂದ್ಯಗಳಲ್ಲಿ 148.72 ಸ್ಟ್ರೈಕ್‌ರೇಟ್‌ನಲ್ಲಿ 174 ರನ್ ಗಳಿಸಿದರು. ಆಗ ರಿಂಕು ಸಿಂಗ್ ತಮ್ಮ ಪ್ರತಿಭೆ ತೋರಿಸಿದರು. ಈ ವರ್ಷ ರಿಂಕು ಸಿಂಗ್ ಐದು ಪಂದ್ಯಗಳಲ್ಲಿ 162.62 ಸ್ಟ್ರೈಕ್‌ರೇಟ್‌ನಲ್ಲಿ 174 ರನ್ ಬಾರಿಸಿದ್ದಾರೆ.
ಉತ್ತರಪ್ರದೇಶ ಪರ ದೇಶೀಯ ಕ್ರಿಕೆಟ್‌ನಲ್ಲಿ ರಿಂಕು ಸಿಂಗ್ ಅಷ್ಟೇ ಪ್ರಭಾವಶಾಲಿ ಪ್ರದರ್ಶನ ನೀಡಿದ್ದಾರೆ. ಆಡಿದ 40 ಲಿಸ್ಟ್-ಎ ಪಂದ್ಯಗಳಲ್ಲಿ 59.89 ಸರಾಸರಿಯಲ್ಲಿ ಏಳು ಶತಕಗಳು ಮತ್ತು 19 ಅರ್ಧ ಶತಕಗಳನ್ನು ಒಳಗೊಂಡಂತೆ 2,875 ರನ್ ಗಳಿಸಿದ್ದಾರೆ.
ಇನ್ನು ರಿಂಕು ಸಿಂಗ್ ಪ್ರಥಮ ದರ್ಜೆ ಪಂದ್ಯಗಳಲ್ಲಿ 53 ಸರಾಸರಿಯನ್ನು ಹೊಂದಿದ್ದು, 50 ಪಂದ್ಯಗಳಲ್ಲಿ ಒಂದು ಶತಕ ಮತ್ತು 16 ಅರ್ಧಶತಕಗಳು ಒಳಗೊಂಡಂತೆ 1,749 ರನ್ ಗಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications