ಇಂಡಿಯನ್ ಪ್ರೀಮಿಯರ್ ಲೀಗ್ ಬಹುತೇಕ ಅಂತಿಮ ಹಂತವನ್ನು ಪ್ರವೇಶಿಸಿದೆ. ಲೀಗ್ ಹಂತದ ನಾಲ್ಕು ಪಂದ್ಯಗಳು ಮಾಥ್ರವೇ ಬಾಕಿಯಿದ್ದು ಬಳಿಕ ಪ್ಲೇಆಫ್ ಪಂದ್ಯಗಳು ನಡೆಯಲಿದೆ. ಈ ಸಂದರ್ಭದಲ್ಲಿ ಪ್ಲೇಫ್ ಪ್ರವೇಶಿಸುವ ತಂಡಗಳು ಯಾವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗುಜರಾತ್ ಟೈಟನ್ಸ್ ಮಾತ್ರವೇ ಅಧಿಕೃತವಾಗಿ ಫ್ಲೇಆಫ್‌ಗೆ ಪ್ರವೇಶಿಸಿದ್ದು ಉಳಿದ ಮೂರು ಸ್ಥಾನಗಳಿಗಾಗಿ ಆರು ತಂಡಗಳು ಇನ್ನು ಕೂಡ ಪೈಪೋಟಿ ಮುಂದುವರಿದಿದೆ.
ಈ ಸಂದರ್ಭದಲ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಯುವ ಆಟಗಾರರಿಬ್ಬರು ನೀಡಿದ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಪ್ರತಿಕ್ರಿಯಿಸಿದ್ದಾರೆ. ಯುವ ಆಟಗಾರ ಶುಬ್ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಭಾರತೀಯ ಕ್ರಿಕೆಟ್‌ನ ಭವಿಷ್ಯದ ದೊಡ್ಡ ಆಟಗಾರರಾಗಲಿದ್ದಾರೆ ಎಂದು ರಾಬಿನ್ ಉತ್ತಪ್ಪ ಪ್ರತಿಕ್ರಿಯಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಈ ಇಬ್ಬರು ಆಟಗಾರರು ಕೂಡ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದಾರೆ.

ಯಶಸ್ವಿ ಜೈಸ್ವಾಲ್ ಶುಕ್ರವಾರ ನಡೆದ ಪಣಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್‌ನ ಹೊಸ ದಾಖಲೆ ಬರೆದಿದ್ದಾರೆ. ಐಪಿಎಲ್‌ನಲ್ಲಿ ಅನ್‌ಕ್ಯಾಪ್‌ಡ್ ಆಟಗಾರನಾಗಿ ಈ ವೃತ್ತಿಯಲ್ಲಿ ಯಶಸ್ವಿ ಜೈಸ್ವಾಲ್ 625 ರನ್‌ಗಳನ್ನು ಕಲೆಹಾಕಿದ್ದು ಅನ್‌ಕ್ಯಾಪ್‌ಡ್ ಆಟಗಾರನೊಬ್ಬ ದಾಖಲಿಸಿದ ಅತಿ ಹೆಚ್ಚಿನ ಸ್ಕೋರ್ ಇದಾಗಿದೆ. ಇದಕ್ಕೂ ಮುನ್ನ 2008ರ ಐಪಿಎಲ್‌ನಲ್ಲಿ 618 ರನ್ ಗಳಿಸಿದ ಶಾನ್ ಮಾರ್ಶ್ ಈ ದಾಖಲೆ ಬರೆದಿದ್ದರು. 15 ವರ್ಷಗಳ ಬಳಿಕ ಈಗ ಈ ದಾಖಲೆ ಮುರಿದಿದೆ.
ಇನ್ನು ಇದೇ ಸಂದರ್ಭದಲ್ಲಿ ಜೈಸ್ವಾಲ್ 25 ವರ್ಷಕ್ಕಿಂತ ಮುನ್ನ ಐಪಿಎಲ್ ಆವೃತ್ತಿಯೊಂದರಲ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ವಿಶೇಷ ಗುಂಪನ್ನು ಸೇರಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಶಾನ್ ಮಾರ್ಷ್, ವಿರಾಟ್ ಕೊಹ್ಲಿ, ರಿಷಬ್ ಪಂತ್ ಮತ್ತು ಋತುರಾಜ್ ಗಾಯಕ್ವಾಡ್ ಇದ್ದಾರೆ. ಕೊಹ್ಲಿ 2013 ರಲ್ಲಿ 634 ರನ್ ಗಳಿಸಿದ್ದರೆ 2018 ರಲ್ಲಿ ಪಂತ್ 684 ರನ್ ಗಳಿಸಿದ್ದರು ಮತ್ತು 2021 ರಲ್ಲಿ ಗಾಯಕ್ವಾಡ್ 636 ರನ್‌ಗಳ ಕೊಡುಗೆ ನೀಡಿದ್ದಾರೆ.
"ಇದು ನಿಜಕ್ಕೂ ವಿಶೇಷವಾದ ಸಂಗತಿ. ಶುಬ್ಮನ್ ಗಿಲ್ ಜೊತೆಗೆ ಯಶಸ್ವಿ ಜೈಸ್ವಾಲ್ ಕೂಡ ಭಾರತೀಯ ಕ್ರಿಕೆಟ್ ಭವಿಷ್ಯದ ಭರವಸೆಯ ಆಟಗಾರ ಎನಿಸಿಕೊಂಡಿದ್ದಾರೆ. ಇದು ಕೇವಲ ಅವರ ಪ್ರಬುದ್ಧತೆಯಲ್ಲಿ ಮಾತ್ರವಲ್ಲದೆ ಅವರ ರನ್‌ದಾಹವೂ ಇದಕ್ಕೆ ಕಾರಣ. ಅದನ್ನು ಬೀವು ಅವರ ಕಣ್ಣುಗಳಲ್ಲಿ ಕಾಣಬಹುದು. ಅದು ನಿಜಕ್ಕೂ ಅದ್ಭುತ. ಅದನ್ನು ನಿಲ್ಲಿಸಬೇಡ" ಎಂದು ಯುವ ಆಟಗಾರ ಯಶಸ್ವಿ ಜೈಸ್ವಾಲ್ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ ರಾಬಿನ್ ಉತ್ತಪ್ಪ.
ಇನ್ನು ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಆರಂಭಿಕ ಆಟಗಾರ ಶುಬ್ಮನ್ ಗಿಲ್ 13 ಪಂದ್ಯಗಳಲ್ಲಿ 576 ರನ್ ಗಳಿಸಿದ್ದಾರೆ. ಗಿಲ್ ಅವರ ಚೊಚ್ಚಲ ಐಪಿಎಲ್ ಶತಕ ಸತತ ಎರಡನೇ ವರ್ಷ ಜಿಟಿ ತಂಡಕ್ಕೆ ಐಪಿಎಲ್ ಪ್ಲೇಆಫ್‌ಗಳಿಗೆ ಅರ್ಹತೆ ಪಡೆಯಲು ನೆರವಾಯಿತು.