Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs LSG: ಅಲ್ಪಮೊತ್ತ ಗಳಿಸಿಯೂ ಲಕ್ನೋ ಕಟ್ಟಿಹಾಕಿ ಗೆದ್ದು ಸೇಡು ತೀರಿಸಿಕೊಂಡ ಆರ್‌ಸಿಬಿ!

IPL 2023: Royal Challengers Bangalore beats Lucknow Super Giants by 18 runs

ಇಂದು ( ಮೇ 1 ) ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲಕ್ನೋ ಸೂಪರ್‌ ಜೈಂಟ್ಸ್ ವಿರುದ್ಧ 18 ರನ್‌ಗಳ ಭರ್ಜರಿ ಗೆಲುವನ್ನು ಕಂಡಿದೆ.

ಈ ಮೂಲಕ ಮೊದಲ ಮುಖಾಮುಖಿ ಪಂದ್ಯದಲ್ಲಿ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತು ಹಿನ್ನಡೆ ಅನುಭವಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇಡನ್ನು ತೀರಿಸಿಕೊಂಡಿದೆ.

ಇನ್ನು ಏಕನ ಕ್ರಿಕೆಟ್ ಕ್ರೀಡಾಂಗಣದ ಪಿಚ್‌ನಲ್ಲಿ ಎರಡೂ ತಂಡಗಳೂ ಸಹ ರನ್ ಗಳಿಸಲು ಪರದಾಡಿದವು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಡಿಮೆ ರನ್ ಗಳಿಸಿದಾಗ ಟ್ರೋಲ್ ಮಾಡಿದವರು ಲಕ್ನೋ ಸೂಪರ್ ಜೈಂಟ್ಸ್ ಕೂಡ ನಿಧಾನವಾಗಿ ರನ್ ಕಲೆಹಾಕಲು ಮುಂದಾದಾಗ ಸೈಲೆಂಟ್ ಆಗಿಬಿಟ್ಟಿದ್ದರು.

ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಕಲೆಹಾಕಿ ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲ್ಲಲು 127 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾಗಿರುವ ಲಕ್ನೋ ಸೂಪರ್ ಜೈಂಟ್ಸ್ 19.5 ಓವರ್‌ಗಳಲ್ಲಿ 108 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ 18 ರನ್‌ಗಳ ಹೀನಾಯ ಸೋಲನ್ನು ಕಂಡಿದೆ.

ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯಲ್ಲಿ ಐದನೇ ಗೆಲುವನ್ನು ಕಂಡು ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿಕೆ ಕಂಡರೆ, ಎರಡನೇ ಸ್ಥಾನದಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ಎರಡರಿಂದ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಆಡಿದ ಇನ್ನಿಂಗ್ಸ್ ಥೇಟ್ ಏಕದಿನ ಪಂದ್ಯದ ರೀತಿಯೇ ಇತ್ತು. ಕೇವಲ ಈ ಇಬ್ಬರ ಬ್ಯಾಟಿಂಗ್ ಮಾತ್ರವಲ್ಲದೇ ಇಡೀ ತಂಡದ ಬ್ಯಾಟಿಂಗ್ ವೇಗ ಇದೇ ಮಾದರಿಯಲ್ಲಿತ್ತು.

ವಿರಾಟ್ ಕೊಹ್ಲಿ 30 ಎಸೆತಗಳಲ್ಲಿ 31 ರನ್ ಗಳಿಸಿದರೆ, ಫಾಫ್ ಡು ಪ್ಲೆಸಿಸ್ 40 ಎಸೆತಗಳಲ್ಲಿ 44 ರನ್ ಗಳಿಸಿದರು. ಇನ್ನುಳಿದಂತೆ ಅನುಜ್ ರಾವತ್ 9, ಗ್ಲೆನ್ ಮ್ಯಾಕ್ಸ್‌ವೆಲ್ 4, ಸುಯಶ್ ಪ್ರಭುದೇಸಾಯಿ 6, ದಿನೇಶ್ ಕಾರ್ತಿಕ್ 16, ಮಹಿಪಾಲ್ ಲೊಮ್ರೊರ್ 3, ಕರ್ನ್ ಶರ್ಮಾ 2, ಮೊಹಮ್ಮದ್ ಸಿರಾಜ್ ಡಕ್ ಔಟ್, ವನಿಂದು ಹಸರಂಗ ಅಜೇಯ 8 ರನ್ ಹಾಗೂ ಜೋಶ್ ಹೇಜಲ್‌ವುಡ್ ಅಜೇಯ 1 ರನ್ ಗಳಿಸಿದರು.

ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಗಾಯಕ್ಕೊಳಗಾಗಿ ಪಂದ್ಯದಿಂದ ಹೊರಗುಳಿದ ಕಾರಣ ಕೃನಾಲ್ ಪಾಂಡ್ಯ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದಾರೆ. ಲಕ್ನೋ ಪರ ನವೀನ್ ಉಲ್ ಹಕ್ 3, ರವಿ ಬಿಷ್ಣೋಯಿ 2 ಹಾಗೂ ಅಮಿತ್ ಮಿಶ್ರಾ 2 ವಿಕೆಟ್ ಪಡೆದರು.

ಲಕ್ನೋ ಸೂಪರ್ ಜೈಂಟ್ಸ್ ಇನ್ನಿಂಗ್ಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ ಅಲ್ಪ ಮೊತ್ತದ ಗುರಿಯನ್ನು ಬೆನ್ನತ್ತಲು ಯತ್ನಿಸಿದ ಲಕ್ನೋ ಸೂಪರ್ ಜೈಂಟ್ಸ ಪರ ಆರಂಭಿಕರಾಗಿ ಕೈಲ್ ಮೇಯರ್ಸ್ ಹಾಗೂ ಆಯುಶ್ ಬದೋನಿ ಕಣಕ್ಕಿಳಿದರು. ಕೈಲ್ ಮೇಯರ್ಸ್ ಡಕ್ ಔಟ್ ಆದರೆ, ಬದೋನಿ 4 ರನ್ ಗಳಿಸಿದರು. ಇನ್ನುಳಿದಂತೆ ಕೃನಾಲ್ ಪಾಂಡ್ಯ 14, ದೀಪಕ್ ಹೂಡಾ 1, ಮಾರ್ಕಸ್ ಸ್ಟೊಯಿನಿಸ್ 13, ನಿಕೋಲಸ್ ಪೂರನ್ 9, ಕೃಷ್ಣಪ್ಪ ಗೌತಮ್ 23, ರವಿ ಬಿಷ್ಣೋಯಿ 5, ಅಮಿತ್ ಮಿಶ್ರಾ 19, ನವೀನ್ ಉಲ್ ಹಕ್ 13 ರನ್ ಹಾಗೂ ಯಾವುದೇ ರನ್ ಗಳಿಸದ ಕೆಎಲ್ ರಾಹುಲ್ ಅಜೇಯರಾಗಿ ಉಳಿದರು.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ 23 ರನ್‌ಗಿಂತ ಹೆಚ್ಚು ರನ್‌ಗಳನ್ನು ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ಬಾರಿಸಲಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಜೋಶ್ ಹೇಜಲ್‌ವುಡ್ ಹಾಗೂ ಕರ್ನ್ ಶರ್ಮಾ ತಲಾ ಎರಡು ವಿಕೆಟ್‌ಗಳನ್ನು ಪಡೆದುಕೊಂಡರೆ, ಮೊಹಮ್ಮದ್ ಸಿರಾಜ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ ಹಾಗೂ ಹರ್ಷಲ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.

Story first published: Monday, May 1, 2023, 23:49 [IST]
Other articles published on May 1, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+