ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ನೀಡಿದ ಅಮೋಘ ಪ್ರದರ್ಶನ ಈ ಬಾರಿಯ ಐಪಿಎಲ್‌ನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಸ್ಪೋಟಕ ಪ್ರದರ್ಶನ ನೀಡಿದ ಎಲ್‌ಎಸ್‌ಜಿ ತಂಡ ಈ ಬಾರಿಯ ಐಪಿಎಲ್‌ನ ಅತಿ ದೊಡ್ಡ ರನ್ ಬಾರಿಸಿದ್ದು ಮಾತ್ರವಲ್ಲದೆ ಐಪಿಎಲ್ ಇತಿಹಾಸದ ಎರಡನೇ ದೊಡ್ಡ ಸ್ಕೋರ್ ಗಳಿಸಿತು. ಈ ಪಂದ್ಯದ ಬಳಿಕ ಮಾಜಿ ಕ್ರಿಕೆಟಿಗ ಆರ್‌ಪಿ ಸಿಂಗ್ ಮಾತನಾಡಿದ್ದು ತಂಡದ ಓರ್ವ ಆಟಗಾರನ ಪ್ರದರ್ಶನಕ್ಕೆ ವಿಶೇಷ ಮೆಚ್ಚುಗೆ ಸೂಚಿಸಿದ್ದಾರೆ.
ಅಂದಹಾಗೆ ಆರ್‌ಪಿ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ ಆ ಆಟಗಾರ ಬೇರೆ ಯಾರೂ ಅಲ್ಲ. ಎಲ್‌ಎಸ್‌ಜಿ ತಂಡದ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸ್ಟೋಯ್ನಿಸ್ ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಓವರ್‌ಗಳಲ್ಲಿ 40 ಎಸೆತಗಳಲ್ಲಿ 72 ರನ್ ಬಾರಿಸಿ ಅಬ್ಬರಿಸಿದರು. ಇದರ ಪರಿಣಾಮವಾಗಿ ಎಲ್‌ಎಸ್‌ಜಿ ತಂಡ ನಿಗದಿತ 20 ಓವರ್‌ಗಳಲ್ಲಿ 257 ರನ್‌ಗಳನ್ನು ಗಳಿಸಲು ಶಕ್ತವಾಯಿತು. ಈ ಪಂದ್ಯದಲ್ಲಿ ಆಸಿಸ್‌ನ ಈ ಆಲ್‌ರೌಂಡರ್ ಆರು ಬೌಂಡರಿ ಹಾಗೂ ಐದು ಭರ್ಜರಿ ಸಿಕ್ಸರ್ ಸಿಡಿಸಿದ್ದಾರೆ.

ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಸ್ಟೋಯ್ನಿಸ್ ಗಮನಸೆಳೆದರು. ಎಲ್‌ಎಸ್‌ಜಿ ನೀಡಿದ ಬೃಹತರ್ ಮೊತ್ತದ ಗುರಿ ಬೆನ್ನಟ್ಟಲು ಆರಂಭಿಸಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ನಾಯಕನ ವಿಕೆಟ್ ಕಿತ್ತು ಆಘಾತ ನೀಡಿದರು ಮಾರ್ಕಸ್ ಸ್ಟೋಯ್ನಿಸ್. ಈ ಮೂಲಕ ಪಿಬಿಕೆಎಸ್ ಬೃಹತ್ ಮೊತ್ತದ ರನ್ ಬೆನ್ನಟ್ಟುವ ಸಂದರ್ಭದಲ್ಲಿ ಆರಂಭದಲ್ಲಿಯೇ ಆಘಾತ ಅನುಭವಿಸುವಂತಾಯಿತು.
ಮಾರ್ಕ್ ಸ್ಟೋಯ್ನಿಸ್ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಆರ್‌ಪಿ ಸಿಂಗ್, "ಅವರು ತಮಡದ ಮ್ಯಾನೇಜ್‌ಮೆಂಟ್ ತನ್ನನ್ನು ಅಗ್ರ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ನಡೆಸಲು ಕಳುಹಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. 20-25 ಬಾಲನ್ನು ಎದುರಿಸುವುದಕ್ಕಿಂತ 50 ಎಸೆತಗಳನ್ನು ಎದುರಿಸಿದರೆ ಹೆಚ್ಚಿನ ರನ್‌ಗಳನ್ನು ಕಲೆಹಾಕಬಹುದು. ಅವರು ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಮಾತ್ರವಲ್ಲದೆ ಬಹುತೇಕ ಎಲ್ಲಾ ಬೌಲರ್‌ಗಳಿಂದಲೂ ರನ್ ಗಳಿಸುತ್ತಾರೆ. ಆತನೋರ್ವ ಶ್ರೇಷ್ಠ ಪ್ರಬುದ್ಧ ಆಟಗಾರ" ಎಂದು ಬಣ್ಣಿಸಿದ್ದಾರೆ ಆರ್‌ಪಿ ಸಿಂಗ್.
"ಮುಂದುವರಿದು ಮಾತನಾಡಿದ ಅವರು "ಬೌಲರ್‌ಗಳು ಬಳಸುವ ತಂತ್ರಗಳನ್ನು ಅವರು ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ ಹಾಗೂ ಅದಕ್ಕೆ ಪೂರಕವಾಗಿ ಅವರು ಬ್ಯಾಟಿಂಗ್‌ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಅಲ್ಲದೆ ನಿಧಾನದ ಬೌಲಿಂಗನ್ನು ಕೂಡ ಸುಲಭವಾಗಿ ಬಾರಿಸುತ್ತಾರೆ. ಅವರಲ್ಲಿರುವ ತಾಂತ್ರಿಕ ಕೌಶಲ್ಯದಿಂದಾಗಿ ಆತ ಶ್ರೇಷ್ಠ ಬ್ಯಾಟರ್ ಎನಿಸಿಕೊಳ್ಳುತ್ತಾರೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಗಿರುವ ಆರ್‌ಪಿ ಸಿಂಗ್.
"ಮಾರ್ಕಸ್ ಸ್ಟೋಯ್ನಿಸ್ ಅವರನ್ನು ತಾಂತ್ರಿಕ ಕೌಶಲ್ಯದ ಜೊತೆಗೆ ಸಾಕಷ್ಟು ದೈಹಿಕ ಸಾಮರ್ಥ್ಯವೂ ಇದೆ. ಆ ಕಾರಣದಿಂದಾಗಿಯೇ ಅವರು ಬೌಲರ್‌ಗಳ ವಿರುದ್ಧ ಸ್ಕ್ವಾರ್ ಲೆಗ್ ಹಾಘೂ ಮಿಡ್ ವಿಕೆಟ್ ಭಾಗದಲ್ಲಿ ಮೇಲುಗೈ ಸಾಧಿಸುತ್ತಾರೆ. ಅಗತ್ಯಕ್ಕೆ ತಕ್ಕನಾದ ಹೊಡೆತಗಳನ್ನು ಬಾರಿಸುವ ಸಾಮರ್ರ್ಥಯ ಅವರಲ್ಲಿದೆ. ಆತನೋರ್ವ ಪ್ರಮುಖ ಆಟಗಾರನಾಗಿದ್ದು ಆತನಿಲ್ಲದೆ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಯೋಚಿಸಲೂ ಸಾಧ್ಯವಿಲ್ಲ" ಎಂದಿದ್ದಾರೆ ಆರ್‌ಪಿ ಸಿಂಗ್.