For Quick Alerts
ALLOW NOTIFICATIONS  
For Daily Alerts
 

Yuzvendra Chahal: ಟಿ20 ಕ್ರಿಕೆಟ್‌, ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಯುಜ್ವೇಂದ್ರ ಚಹಾಲ್

ಭಾನುವಾರ, ಏಪ್ರಿಲ್ 2ರಂದು ಹೈದರಾಬಾದ್‌ನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ 72 ರನ್‌ಗಳ ಭರ್ಜರಿ ಜಯ ಸಾಧಿಸುವುದರೊಂದಿಗೆ ಟೂರ್ನಿಯನ್ನು ಅದ್ಭುತವಾಗಿ ಶುಭಾರಂಭ ಮಾಡಿತು.

ಇನ್ನು ಇದೇ ವೇಳೆ, ಭಾರತ ತಂಡ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಟಿ20 ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳನ್ನು ಪೂರೈಸಿದ್ದು, ಈ ಮೈಲುಗಲ್ಲು ಸ್ಥಾಪಿಸಿದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು. ಸದ್ಯ ವಿಶ್ವದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿರುವ ಯುಜ್ವೇಂದ್ರ ಚಹಾಲ್ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ಮುಂದುವರೆಸಿದ್ದಾರೆ.

 Yuzvendra Chahal Becomes 1st Indian Bowler To Take 300 Wickets

ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಯುಜ್ವೇಂದ್ರ ಚಹಾಲ್ ತಮ್ಮ 4 ಓವರ್‌ಗಳ ಕೋಟಾದಲ್ಲಿ 17 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಹ್ಯಾರಿ ಬ್ರೂಕ್ ಅವರನ್ನು 13 ರನ್‌ಗೆ ಬೌಲ್ಡ್ ಮಾಡಿದ ನಂತರ, ಮಯಾಂಕ್ ಅಗರ್ವಾಲ್, ಆದಿಲ್ ರಶೀದ್ ಮತ್ತು ಭುವನೇಶ್ವರ್ ಕುಮಾರ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಈ ಮೂಲಕ ಯುಜ್ವೇಂದ್ರ ಚಹಾಲ್ ಟಿ20 ಕ್ರಿಕೆಟ್‌ನಲ್ಲಿ ತಮ್ಮ 300 ವಿಕೆಟ್‌ಗಳ ಸಾಧನೆ ಮಾಡಿದರು.

Virat Kohli IPL 2023: ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ವಿರಾಟ್ ಕೊಹ್ಲಿ

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳು
ಯುಜ್ವೇಂದ್ರ ಚಹಾಲ್ - 300 ವಿಕೆಟ್‌ಗಳು
ರವಿಚಂದ್ರನ್ ಅಶ್ವಿನ್ - 287 ವಿಕೆಟ್‌ಗಳು
ಪಿಯೂಷ್ ಚಾವ್ಲಾ - 276 ವಿಕೆಟ್‌ಗಳು
ಅಮಿತ್ ಮಿಶ್ರಾ - 272 ವಿಕೆಟ್‌ಗಳು
ಜಸ್ಪ್ರೀತ್ ಬುಮ್ರಾ - 256 ವಿಕೆಟ್‌ಗಳು

 Yuzvendra Chahal Becomes 1st Indian Bowler To Take 300 Wickets


ಇಷ್ಟೇ ಅಲ್ಲದೇ, ರಾಜಸ್ಥಾನ ರಾಯಲ್ಸ್ ಲೆಗ್‌ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರು ಐಪಿಎಲ್ ಇತಿಹಾಸದಲ್ಲಿ ಶ್ರೀಲಂಕಾದ ಮಾಜಿ ಬೌಲರ್ ಲಸಿತ್ ಮಾಲಿಂಗ ಅವರ ಎರಡನೇ ಅತಿ ಹೆಚ್ಚು ವಿಕೆಟ್‌ಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಯುಜ್ವೇಂದ್ರ ಚಹಾಲ್ ಅವರು ಲಸಿತ್ ಮಾಲಿಂಗ ಅವರ 170 ಐಪಿಎಲ್ ವಿಕೆಟ್‌ಗಳ ಸಾಧನೆಯನ್ನು ಸಮಗೊಳಿಸಿದರು.

ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರನಾಗಿದ್ದಾರೆ. ಒಟ್ಟಾರೆಯಾಗಿ, ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೊ 183 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ಲಸಿತ್ ಮಾಲಿಂಗ 170 ವಿಕೆಟ್‌ಗಳೊಂದಿಗೆ ಯುಜ್ವೇಂದ್ರ ಚಹಾಲ್ ಜೊತೆ ಎರಡನೇ ಸ್ಥಾನದಲ್ಲಿದ್ದಾರೆ.

Kane Williamson Ruled Out: ಗುಜರಾತ್ ಟೈಟನ್ಸ್‌ಗೆ ಹಿನ್ನಡೆ; 2023ರ ಐಪಿಎಲ್‌ನಿಂದ ಕೇನ್ ವಿಲಿಯಮ್ಸನ್ ಔಟ್!

265 ಟಿ20 ಪಂದ್ಯಗಳನ್ನು ಆಡಿರುವ ಯುಜ್ವೇಂದ್ರ ಚಹಾಲ್ 23.60ರ ಸರಾಸರಿ ಮತ್ತು 7.58ರ ಎಕಾನಮಿ ದರದಲ್ಲಿ 303 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಭಾರತ ತಂಡದ ಪರ 72 ಪಂದ್ಯಗಳಲ್ಲಿ 121 ವಿಕೆಟ್‌ಗಳು ಕಬಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 132 ಪಂದ್ಯಗಳಲ್ಲಿ 21.41 ಸರಾಸರಿ ಮತ್ತು 21.41ರ ಎಕಾನಮಿ ದರದಲ್ಲಿ 170 ವಿಕೆಟ್‌ಗಳನ್ನು ಪಡೆದಿದ್ದಾರೆ.

 Yuzvendra Chahal Becomes 1st Indian Bowler To Take 300 Wickets

ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅವರ ಉಳಿದ ವಿಕೆಟ್‌ಗಳು ಭಾರತೀಯ ದೇಶೀಯ ಟಿ20 ಕ್ರಿಕೆಟ್ ಟೂರ್ನಿಗಳಲ್ಲಿ ಬಂದಿವೆ.

2022ರಲ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಗೆದ್ದ ಯುಜ್ವೇಂದ್ರ ಚಹಾಲ್, ಕಳೆದ ವರ್ಷದ ಬೌಲಿಂಗ್ ಪ್ರದರ್ಶನವನ್ನು ಈ ಬಾರಿಯೂ ಮುಂದುವರೆಸಿದ್ದಾರೆ.

ಎಸ್ಆರ್‌ಎಚ್ ಮತ್ತು ಆರ್‌ಆರ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ನಿಗದಿತ 202 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್‌ಗಳ ಬೃಹತ್ ಮೊತ್ತ ಗಳಿಸಿತು. ಇದರಲ್ಲಿ ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ ಮತ್ತು ಸಂಜು ಸ್ಯಾಮ್ಸನ್ ತಲಾ ಅರ್ಧಶತಕ ಬಾರಿಸಿ ಮಿಂಚಿದರು.

204 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದಾರಾಬಾದ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 131 ರನ್‌ಗಳಿಗೆ ನಿಯಂತ್ರಣಗೊಂಡು 72 ರನ್‌ಗಳ ಸೋಲು ಕಂಡಿತು.

Story first published: Monday, April 3, 2023, 13:01 [IST]
Other articles published on Apr 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+