For Quick Alerts
ALLOW NOTIFICATIONS  
For Daily Alerts
 

ಹಾರ್ದಿಕ್ ಪಾಂಡ್ಯ ಅದ್ಭುತ ಆಟಗಾರ ಆದರೆ..: ಗುಜರಾತ್ ಟೈಟನ್ಸ್ ನಾಯಕನ ಬಗ್ಗೆ ಶಾನ್ ಪೊಲಾಕ್ ಹೇಳಿದ್ದಿಷ್ಟು!

ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಈ ಬಾರಿಯ ಐಪಿಎಲ್‌ಲ್ಲಿಯೂ ಅದ್ಭುತ ಆಟವಾಡುತ್ತಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಕಳೆದ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಆಘಾತಕಾರಿಯಾಗಿ ಸೋಲು ಕಂಡಿತ್ತು. ಅಲ್ಪ ಮೊತ್ತದ ಗುರಿ ಪಡೆದುಕೊಂಡಿದ್ದರೂ ಅಗ್ರ ಕ್ರಮಾಂಖದ ಆಟಗಾರರು ಹೀನಾಯ ಪ್ರದರ್ಶನ ನೀಡಿದ್ದರು. ಆದರೆ ನಾಯಕ ಹಾರ್ದಿಕ್ ಪಾಂಡ್ಯ ಕೊನೆಯವರೆಗೂ ಕ್ರೀಸ್‌ನಲ್ಲಿದ್ದರು ಕೂಡ ತಂಡವನ್ನು ಗೆಲ್ಲಿಸಲು ಸಾಧ್ಯವಾಗಿರಲಿಲ್ಲ.

ಈ ಪಂದ್ಯದಲ್ಲಿ ಹಾರ್ದಿಕ್ ಒಆಂಡ್ಯ ಅವರ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಟೀಕೆಗಳು ಎದ್ದುತ್ತು. ಇದೇ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ದಕ್ಷಿಣ ಆಫ್ರಿಕಾದ ದಿಗ್ಗಜ ವೇಗದ ಬೌಲರ್ ಶಾನ್ ಪೊಲಾಕ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಗುಜರಾತ್ ಟೈನಟ್ಸ್ ತಂಡದಲ್ಲಿ ನಾಯಕನಾಗಿ ಹಾರ್ದಿಕ್ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಕಣಕ್ಕಿಳಿಯುತ್ತಿರುವುದಕ್ಕೆ ತನ್ನ ಆಕ್ಷೇಪವಿಲ್ಲ ಎಂದಿದ್ದಾರೆ. ಆದರೆ ಭಿನ್ನ ಪರಿಸ್ಥಿತಿಯಲ್ಲಿ ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ನಡೆಸಬೇಕು ಎಂದಿದ್ದಾರೆ ಶಾನ್ ಪೊಲಾಕ್.

IPL 2023: Shaun Pollock said Hardik Pandya is a class player but needs to change gear

ಈ ಸಂದರ್ಭದಲ್ಲಿ ಶಾನ್ ಪೊಲಾಕ್ ಕಳೆದ ವರ್ಷದ ಐಪಿಎಲ್‌ನಲ್ಲಿ ಹಾರ್ದಿಕ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ತಾನು ಸಮರ್ಥ ಆಟಗಾರ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ ಎಂದರು. ಡಿಸಿ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನೀಡಿದ 131 ರನ್‌ಗಳ ಗುರಿಯನ್ನು ಬೆನ್ನಟ್ಟುವ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಅಜೇಯ 59 ರನ್‌ಗಳಿಸಿಯೂ ಜಿಟಿ ಸೋಲು ಕಂಡಿತ್ತು.

"ಹಾರ್ದಿಕ್ ಪಾಂಡ್ಯ ಜಿಟಿ ತಂಡದಲ್ಲಿ ಮೂರನೇ ಕ್ರಮಾಂಕದ ಬದಲಿಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಬೇಕು ಎಂದು ನನಗೆ ಅನಿಸುತ್ತಿಲ್ಲ. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರೆ ಅವರು ಈಗಲು ಕೂಡ ಕೆಳ ಕ್ರಮಾಂಕದಲ್ಲಿಯೇ ಕಣಕ್ಕಿಳಿಯುತ್ತಿದ್ದರು ಯಾಕೆಂದರೆ ಅಲ್ಲಿ ಅದರ ಅಗತ್ಯವಿತ್ತು. ಕಳೆದ ವರ್ಷ ಅವರಿಂದ ನಾನು ಕೆಲ ಅದ್ಭುತ ಇನ್ನಿಂಗ್ಸ್‌ಗಳನ್ನು ನೋಡಿದ್ದೆ" ಎಂದು ಹಾರ್ದಿಕ್ ಪಾಂಡ್ಯ ಅವರ ಕ್ರಮಾಂಕವನ್ನು ಪೊಲಾಕ್ ಸಮರ್ಥಿಸಿಕೊಂಡಿದ್ದಾರೆ.

"ನನ್ನ ಪ್ರಕಾರ ಅವರು ಕೆಲ ಸನ್ನಿವೇಶಗಳನ್ನು ನೊಡಿಕೊಂಡು ಗೇರ್ ಬದಲಿಸಬೇಕಿದೆ. ಅಗ್ರ ಕ್ರಮಾಂಕದಲ್ಲಿ ಅವರು ಬ್ಯಾಟಿಂಗ್ ನಡೆಸುವುದಕ್ಕೆ ನನ್ನಿಂದ ಯಾವುದೇ ಆಕ್ಷೇಪಗಳಿಲ್ಲ. ಆತನೋರ್ವ ಅದ್ಭುತವಾದ ಆಟಗಾರನಾಗಿದ್ದು ಚೆಂಡನ್ನು ಅದ್ಭುತವಾಗಿ ಬಾರಿಸುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ" ಎಂದಿದ್ದಾರೆ ಶಾನ್ ಪೊಲಾಕ್.

ಇನ್ನು ಇದೇ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯಗೆ ಶಾನ್ ಪೊಲಾಕ್ ಒಂದು ಸಲಹೆಯನ್ನು ಕೂಡ ನೀಡಿದ್ದಾರೆ. ವಿಕೆಟ್‌ಗಳ ನಡುವಿನ ಓಟದಲ್ಲಿ ಹಾರ್ದಿಕ್ ಹೆಚ್ಚಿನ ಪ್ರಗತಿ ಕಾಣಬೇಕು ಎಂದಿದ್ದಾರೆ. ಕಳೆದ ಪಂದ್ಯದಲ್ಲಿ ಚೆಂಡನ್ನು ದೂರಕ್ಕೆ ಬಾರಿಸಿದ್ದರೂ ಹಲವು ಸಂದರ್ಭಗಳಲ್ಲಿ ಒಂಟಿ ರನ್‌ಗೆ ತೃಪ್ತಿಪಟ್ಟುಕೊಂಡಿದ್ದರು ಎಂದಿದ್ದಾರೆ ಪೊಲಾಕ್.

Story first published: Friday, May 5, 2023, 18:22 [IST]
Other articles published on May 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+