Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shubman Gill: ಎಲ್ಲಾ ಮಾದರಿಯಲ್ಲೂ ಅಮೋಘ ಫಾರ್ಮ್: ಈ ವರ್ಷದ 6ನೇ ಶತಕ ಸಿಡಿಸಿದ ಶುಬ್ಮನ್ ಗಿಲ್

ಯುವ ಆಟಗಾರ ಶುಬ್ಮನ್ ಗಿಲ್ ಎಲ್ಲಾ ಮಾದರಿಯಲ್ಲಿಯೂ ನೀಡುತ್ತಿರುವ ಪ್ರದರ್ಶನ ಅಭಿಮಾನಿಗಳನ್ನು ನಿಬ್ಬೆರಗಾಗುವಂತೆ ಮಾಡಿದೆ. ಅದರಲ್ಲೂ ಈ ಕ್ಯಾಲೆಂಡರ್ ವರ್ಷದಲ್ಲಿ ಆರಂಭದಿಂದಲೂ ಅತ್ಯಮೋಃ ಪ್ರದರ್ಶನ ನೀಡಿ ಅಬ್ಬರಿಸುತ್ತಿದ್ದಾರೆ. ಈ ವರ್ಷ ಎಲ್ಲಾ ಮಾದರಿಯಲ್ಲಿಯೂ ರನ್ ಮಳೆ ಹರಿಸುತ್ತಿರುವ ಶುಬ್ಮನ್ ಗಿಲ್ ಸಾಲು ಸಾಲು ಶತಕ ಸಿಡಿಸಿದ್ದಾರೆ.

ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲಾ ಮಾದರಿಯಲ್ಲಿಯೂ ಶತಕ ಸಿಡಿಸಿರುವ ಶುಬ್ಮನ್ ಗಿಲ್ ಇದೀಗ ಐಪಿಎಲ್‌ನಲ್ಲಿಯೂ ಶತಕದ ಗಡಿದಾಟಿ ಅಬ್ಬರಿಸಿದ್ದಾರೆ. ಸೋಮವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಗಿಲ್ 58 ಎಸೆತಗಳಲ್ಲಿ 101 ರನ್‌ಗಳಿಸಿ ಅಬ್ಬರಿಸಿದರು. ಈ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಿತ್ತು.

IPL 2023: Shubman Gill another century in 2023, excellent form continues

ಐದೂವರೆ ತಿಂಗಳಲ್ಲಿ 6ನೇ ಶತಕ

ಇನ್ನು ಶುಬ್ಮನ್ ಗಿಲ್ ಅದೆಂಥಾ ಅಮೋಘ ಫಾರ್ಮ್‌ನಲ್ಲಿದ್ದಾರೆಂದರೆ ಈ ವರ್ಷದ ಮೊದಲ ಐದೂವರೆ ವರ್ಷದಲ್ಲಿ ಗಿಲ್ ಬರೊಬ್ಬರಿ ಆರು ಶತಕ ಸಿಡಿಸಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಮಾದರಿಯಲ್ಲಿ ಮೂರು ಶತಕ ಸಿಡಿಸಿದ್ದರೆ ಒಂದು ಶತಕ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ದಾಖಲಾಗಿದೆ. ಇನ್ನೊಂದು ಶತಕ ಟೆಸ್ಟ್ ಮಾದರಿಯಲ್ಲಿ ದಾಖಲಿಸಿರುವ ಗಿಲ್ ಇದೀಗ ಟಿ20 ಮಾದರಿಯಲ್ಲಿಯೂ ಅಬ್ಬರಿಸಿದ್ದಾರೆ.

ಬೆರಗಾಗುವಂತಿದೆ ಗಿಲ್ ಸರಾಸರಿ ರನ್

ಇನ್ನು ಎಲ್ಲಾ ಮಾದರಿಯಲ್ಲಿಯೂ ಶುಬ್ಮನ್ ಗಿಲ್ ಅವರ ಸರಾಸರಿ ಸ್ಕೋರ್ ನಿಜಕ್ಕೂ ಬೆರಗಾಗುವಂತಿದೆ. ಟೆಸ್ಟ್ ಮಾದರಿಯಲ್ಲಿ ಈ ವರ್ಷ 51.3ರ ಸರಾಸರಿಯನ್ನು ಹೊಂದಿದ್ದು 154 ರನ್‌ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಗಿಲ್ ಅಬ್ಬರ ಮತ್ತಷ್ಟು ಹೆಚ್ಚಾಗಿದ್ದು 78.0 ಸರಾಸರಿಯನ್ನು ಹೊಂದಿದ್ದು 624 ರನ್‌ಗಳಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ 40.4ರ ಸರಾಸರಿಯಲ್ಲಿ 202 ರನ್‌ಗಳಿಸಿದ್ದಾರೆ ಗಿಲ್. ಇನ್ನು ಈ ವರ್ಷದ ಐಪಿಎಲ್ ಟೂರ್ನಿಯಲ್ಲಿಯೂ ಅಮೋಘ ಫಾರ್ಮ್ ಪ್ರದರ್ಶಿಸಿರುವ ಅವರು 48ರ ಸರಾಸರಿಯಲ್ಲಿ 576 ರನ್‌ಗಳಿಸಿ ಮುನ್ನುಗ್ಗಿತ್ತಿದ್ದಾರೆ.

ಪ್ಲೇಆಫ್‌ಗೇರಿದ ಗುಜರಾತ್ ಟೈಟನ್ಸ್

ಇನ್ನು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿಯೂ ತನ್ನ ಪರಾಕ್ರಮ ಮುಂದುವರಿಸಿದೆ. ಅಮೋಘ ಪ್ರದರ್ಶನ ನಿಡುತ್ತಿರುವ ಜಿಟಿ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಪ್ಲೇಆಫ್ ಹಂತಕ್ಕೆ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ. ಈಗಾಗಲೇ 13 ಪಂದ್ಯಗಳನ್ನು ಆಡಿರುವ ಜಿಟಿ 9 ಗೆಲುವು 4 ಸೋಲು ಅನುಭವಿಸಿದ್ದು 18 ಅಂಕಗಳೊಂದಿಗೆ ಈ ವರ್ಷ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದೆ.

ಉಳಿದ ಮೂರು ಸ್ಥಾನಗಳಿಗೆ ತೀವ್ರ ಪೈಪೋಟಿ

ಇನ್ನು ಜಿಟಿ ತಂಡ ಈ ಬಾರಿ ಪ್ಲೇಆಫ್‌ಗೆ ಮೊದಲ ತಂಡವಾಗಿ ಪ್ರವೇಶ ಪಡೆದುಕೊಂಡಿದೆ. ಆದರೆ ಉಳಿದ ಮೂರು ಸ್ಥಾನಗಳು ಇನ್ನು ಕೂಡ ಖಚಿತಗೊಂಡಿಲ್ಲ. ಲೆಕ್ಕಾಚಾರದ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳಿಗೆ ಹೊರತುಪಡಿಸಿ ಉಳಿದ ಎಲ್ಲಾ ತಂಡಗಳು ಕೂಡ ಪ್ಲೇಆಫ್‌ಗೇರುವ ಅವಕಾಶವನ್ನು ಇನ್ನು ಕೂಡ ಮುಕ್ತವಾಗಿಸಿಕೊಂಡಿದೆ. ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಪ್ಲೇಆಫ್‌ಗೆ ಖಚಿತವಾಗಿ ಪ್ರವೇಶ ಪಡೆಯುವವಷ್ಟು ಸ್ಥಿತಿ ಸುಲಭವಾಗಿಲ್ಲ. ಪ್ಲೇಆಫ್‌ನ ಮೂರು ಸ್ಥಾನಗಳಿಗಾಗಿ ಸಿಎಸ್‌ಕೆ, ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್, ಆರ್‌ಸಿಬಿ, ರಾಜಸ್ಥಾನ್ ರಾಯಲ್ಸ್, ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿ ಸರ್ವ ಪ್ರಯತ್ನ ನಡೆಸುತ್ತಿದೆ.

Story first published: Tuesday, May 16, 2023, 10:44 [IST]
Other articles published on May 16, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+