For Quick Alerts
ALLOW NOTIFICATIONS  
For Daily Alerts
 

GT vs MI: ಅಮೋಘ ಶತಕ ಸಿಡಿಸಿದ ಶುಬ್ಮನ್ ಗಿಲ್: ಹೊಸ ದಾಖಲೆ ಬರೆದ ಯುವ ಆರಂಭಿಕ ಆಟಗಾರ

ಮುಂಬೈ ಇಂಡಿಯನ್ಸ್ ವಿರುದ್ಧದ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ಯುವ ಆಟಗಾರ ಶುಬ್ಮನ್ ಗಿಲ್ ಅಮೋಘ ಶತಕ ಸಿಡಿಸಿದ್ದಾರೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಗಿಲ್ ಕೇವಲ 60 ಎಸೆತಗಳಲ್ಲಿ 129 ರನ್‌ಗಳಿಸಿ ಅಬ್ಬರಿಸಿದರು. ಇದು ಈ ಬಾರಿಯ ಐಪಿಎಲ್‌ನಲ್ಲಿ ಶುಬ್ಮನ್ ಗಿಲ್ ಸಿಡಿಸಿದ ಮೂರನೇ ಶಯಕ ಎಂಬುದು ಗಮನಾರ್ಹ.

ಈ ಪಂದ್ಯದಲ್ಲಿ ಶುಬ್ಮನ್ ಗಿಲ್ 10 ಭರ್ಜರಿ ಸಿಡಿಸಿದ್ದು 7 ಬೌಂಡರಿ ಬಾರಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಪ್ಲೇಆಫ್ ಹಂತದಲ್ಲಿ ಬಾರಿಸಿದ ಅತ್ಯಂತ ದೊಡ್ಡ ಸ್ಕೋರ್ ಎಂಬ ದಾಖಲೆಯನ್ನು ಬರೆದಿದ್ದಾರೆ ಶುಬ್ಮನ್ ಗಿಲ್. ಈ ಪಂದ್ಯದಲ್ಲಿ ಶುಬ್ಮನ್ ಗಿಲ್ ಮೊದಲ 50 ರನ್‌ಗಳನ್ನು ಬಾರಿಸಲು 32 ಎಸೆತಗಳನ್ನು ಬಳಸಿಕೊಂಡಿದ್ದರು. ಆದರೆ ನಂತರದ 50 ರನ್‌ಗಳನ್ನುಯ ಬಾರಿಸಲು ಕೇಕವ 17 ಎಸೆತಗಳನ್ನು ಬಳಸಿಕೊಂಡಿದ್ದಾರೆ. ಗಿಲ್ ತಮ್ಮ ಶತಕದ ಬಳಿಕವೂ ರನ್ ವೇಗವನ್ನು ಕುಗ್ಗಿಸಲಿಲ್ಲ. ಹೀಗಾಗಿ 129 ರನ್‌ಗಳವರೆಗೆ ಮುನ್ನುಗ್ಗಿದ್ದಾರೆ ಈ ಯುವ ಆಟಗಾರ.

Shubman Gill

ಅಹಮದಾಬಾದ್‌ನಲ್ಲಿ ಸ್ಪಿನ್ ಮತ್ತು ವೇಗಿಗಳನ್ನು ಭಾರೀ ದಂಡಿಸಿದ್ದಾರೆ ಶುಬ್ಮನ್ ಗಿಲ್. ಆಕಾಶ್ ಮಧ್ವಲ್, ಕ್ಯಾಮೆರಾನ್ ಗ್ರೀನ್ ಮತ್ತು ಪಿಯೂಷ್ ಚಾವ್ಲಾ ಅವರಂಥಾ ಆಟಗಾರರ ವಿರುದ್ಧವೂ ಆಕ್ರಮಣಕಾರಿಯಾಗಿ ಆಡಿರುವ ಗಿಲ್ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಮತ್ತೊಮ್ಮೆ ಸಾರಿದ್ದಾರೆ. ಈ ಮೂಲಕ ತಾನು ಎಂಥಾ ಬಲಾಢ್ಯ ಆಟಗಾರ ಎಂಬುದನ್ನು ಸಾರಿದ್ದಾರೆ.

23ರ ಹರೆಯದ ಶುಬ್ಮನ್ ಗಿಲ್ ಅವರ ಬ್ಯಾಟ್‌ನಿಮದ ಸಿಡಿದ ಈ ಶತಕ ಐಪಿಎಲ್ ಇತಿಹಾಸದಲ್ಲಿ ಪ್ಲೇಆಫ್‌ನಲ್ಲಿ ಬಂದ 7 ಶತಕ ಎನಿಸಿಕೊಂಡಿದೆ. ಕಳೆದ 4 ಇನ್ನಿಂಗ್ಸ್‌ಗಳಲ್ಲಿ ಗಿಲ್ ಬ್ಯಾಟ್‌ನಿಂದ ಸಿಡಿದ 3ನೇ ಶತಕ ಇದಾಗಿದೆ. ನಿರ್ಣಾಯಕ ಹಂತದಲ್ಲಿ ಶುಬ್ಮನ್ ಗಿಲ್ ಅವರ ಬ್ಯಾಟ್‌ನಿಂದ ಈ ರೀತಿಯ ಪ್ರದರ್ಶನ ಬರುತ್ತಿರುವುದು ತಂಡಕ್ಕೆ ದೊಡ್ಡ ಬಲ ನೀಡಿದೆ.

ಐಪಿಎಲ್ ಪ್ಲೇಆಫ್‌ನಲ್ಲಿ ಬಂದ ಶತಕಗಳ ಪಟ್ಟಿ
ಶುಬ್ಮನ್ ಗಿಲ್ - 129- 2023 ಐಪಿಎಲ್
ವೀರೇಂದ್ರ ಸೆಹ್ವಾಗ್- 122: 2014ರ ಐಪಿಎಲ್‌ನಲ್ಲಿ
ಶೇನ್ ವ್ಯಾಟ್ಸನ್-117: 2018 ಐಪಿಎಲ್
ವೃದ್ಧಿಮಾನ್ ಸಹಾ- 115 ರನ್: 2014 ರ ಐಪಿಎಲ್
ಮುರಳಿ ವಿಜಯ್ - 113 ರನ್: 2022 ಐಪಿಎಲ್
ರಜತ್ ಪಾಟಿದಾರ್- 112: ಐಪಿಎಲ್ 2022
ಜೋಸ್ ಬಟ್ಲರ್- 106: 2022 ಐಪಿಎಲ್ ಆವೃತ್ತಿಯಲ್ಲಿ.

ಗುಜರಾತ್ ಟೈಟನ್ಸ್ ಆಡುವ ಬಳಗ: ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ

ಮುಂಬೈ ಇಂಡಿಯನ್ಸ್ ಆಡುವ ಬಳಗ: ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಕ್ಯಾಮೆರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್‌ಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್

Story first published: Friday, May 26, 2023, 23:15 [IST]
Other articles published on May 26, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+