Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಸನ್‌ರೈಸರ್ಸ್ ವಿರುದ್ಧ ಸೋತು ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್!

ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ರೋಚಕವಾಗಿ ಅಂತ್ಯವಾಗಿದೆ. ಕೊನೆಯ ಹಂತದಲ್ಲಿ ಅದ್ಭುತವಾಗಿ ತಿರುಗಿಬಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಕೆಕೆಆರ್ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 172 ರನ್‌ಗಳ ಗುರಿ ನಿಗದಿಪಡಿಸಿತು. ಈ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾದರೂ ಮಧ್ಯಮ ಕ್ರಮಾಂಕದ ಆಟಗಾರರಿಂದ ಅದ್ಭುತ ಪ್ರದರ್ಶನ ಬಂದ ಕಾರಣ ಕಡೆಯ ಹಂತದವರೆಗೂ ಅದ್ಭುತ ಹೋರಾಟ ನಡೆಸಿತು. ಒಂದು ಹಂತದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಗೆಲುವು ಸಾಧಿಸುವುದು ನಿಚ್ಚಳ ಎಂಬಂದಿದ್ದರೂ ಕೊನೆಯ ಹಂತದಲ್ಲಿ ಕೆಕೆಆರ್ ತಂಡದ ಕೈಮೇಲಾಗಿದ್ದು ಗೆಲುವಿನ ನಗೆ ಬೀರಿದೆ. ಐದು ರನ್‌ಗಳ ಅಂತರದಿಂದ ಈ ಪಂದ್ಯವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಗೆದ್ದುಕೊಂಡಿತು.

IPL 2023, SRH vs KKR: Kolkata Knight Riders win against SRH by 5 runs

ಈ ಪಂದ್ಯದಲ್ಲಿ ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸಿತು. ಆದರೆ ಕೆಕೆಆರ್ ತಂಡ ಉತ್ತಮ ಆರಂಭವನ್ನು ಪಡೆಯಲು ವಿಫಲವಾಯಿತು. 35 ರನ್‌ಗಳಿಸಿದ ಸಂದರ್ಭದಲ್ಲಿ ಕೆಕೆಆರ್ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ನಂತರ ನಾಯಕ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಅದ್ಭುತ ಜೊತೆಯಾಟ ನೀಡುವ ಮೂಲಕ ಕೆಕೆಆರ್‌ಗೆ ಚೇತರಿಕೆ ನೀಡಿದರು. ನಾಯಕ ನಿತೀಶ್ ರಾಣಾ 42 ರನ್‌ಗಳಿಸಿದರೆ ರಿಂಕು ಸಿಂಗ್ 46 ರನ್ ಬಾರಿಸಿದರು. ಆಂಡ್ರೆ ರಸೆಲ್ ಬ್ಯಾಟ್‌ನಿಂದ 24 ರನ್‌ಗಳು ಹರಿದು ಬಂತು. ಹೀಗಾಗಿ ಕೆಕೆಆರ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಯಿತು.

ಇದನ್ನು ಬೆನ್ನಟ್ಟಿದ ಎಸ್‌ಆರ್‌ಹೆಚ್ ತಂಡದ ಪರವಾಗಿ ಮಯಾಂಕ್ ಅಗರ್ವಾಲ್ ಅಭೀಶೇಕ್ ಶರ್ಮಾ ಅಲ್ಪ ಮೊತ್ತಕ್ಕ ವಿಕೆಟ್ ಕಳೆದುಕೊಂಡರು. ರಾಹುಲ್ ತ್ರಿಪಾಠಿ ಸ್ಪೋಟಕ ಪ್ರದರ್ಶನ ನೀಡಿದರಾದರೂ 9 ಎಸೆತಗಳಲ್ಲಿ 20 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ಐಡೆನ್ ಮಾರ್ಕ್ರಮ್ ಜವಾಬ್ಧಾರಿ ವಹಿಸಿಕೊಂಡರಾದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಹ್ಯಾರಿ ಬ್ರೂಕ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಈ ಸಂದರ್ಭದಲ್ಲಿ ನಾಯಕನಿಗೆ ಸಾರ್ಥ ನೀಡಿದ್ದು ಹೆನ್ರಿಕ್ ಕ್ಲಾಸೆನ್.

ಮಾರ್ಕ್ರಮ್ ಹಾಗೂ ಕ್ಲಾಸೆಲ್ ಜೋಡಿ 70 ರನ್‌ಗಳ ಜೊತೆಯಾಟ ನೀಡುವ ಮೂಲಕ ಎಸ್‌ಆರ್‌ಹೆಚ್ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಆದರೆ ಕ್ಲಾಸೆನ್ ತಂಡದ ಮೊತ್ತ ೧೨೪ ರನ್‌ಗಳಿದ್ದಾಗ 20 ಎಸೆತಗಳಲ್ಲಿ 36 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ಮಾರ್ಕ್ರಮ್ ಮೂಡ ವಿಕೆಟ್ ಕಳೆದುಕೊಂಡರು. ಬಳಿಕ ಅಬ್ದುಲ್ ಸಮದ್ ಮೇಲೆ ಗೆಲುವಿನ ಜವಾಬ್ಧಾರಿ ಇತ್ತಾದರೂ ಅದನ್ನು ಪೂರೈಸಲು ಸಾಧ್ಯವಾಗಲಿಲ್ಲ. ಕೊನೆಯ ಹಂತದಲ್ಲಿ ಕೆಕೆಆರ್ ಬೌಲರ್‌ಗಳು ಅದ್ಭುತ ಯಶಸ್ವು ಸಾಧಿಸಿದರು. ಅದರಲ್ಲೂ ಅಂತಿಮ ಓವರ್‌ನಲ್ಲಿ ಎಸ್‌ಆರ್‌ಹೆಚ್ ತಂಡಕ್ಕೆ ಕೇವಲ 9 ರನ್‌ಗಳ ಅಗತ್ಯವಿತ್ತು. ಆದರೆ ವರುಣ್ ಚಕ್ರವರ್ತಿ ಎಸೆದ ಈ ಓವರ್‌ನಲ್ಲಿ ಎಸ್‌ಆರ್‌ಹೆಚ್ ಕೇವಲ 3 ರನ್ ಮಾತ್ರವೇ ಗಳಿಸಿ ಶರಣಾಯಿತು.

ಸನ್‌ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್, ಅಬ್ದುಲ್ ಸಮದ್, ಮಾರ್ಕೊ ಜಾನ್ಸೆನ್, ಮಯಾಂಕ್ ಮಾರ್ಕಾಂಡೆ, ಭುವನೇಶ್ವರ್ ಕುಮಾರ್, ಕಾರ್ತಿಕ್ ತ್ಯಾಗಿ, ಟಿ ನಟರಾಜನ್
ಬೆಂಚ್: ರಾಹುಲ್ ತ್ರಿಪಾಠಿ, ವಿವ್ರಾಂತ್ ಶರ್ಮಾ, ಗ್ಲೆನ್ ಫಿಲಿಪ್ಸ್, ನಿತೀಶ್ ರೆಡ್ಡಿ, ಸನ್ವಿರ್ ಸಿಂಗ್, ಮಯಾಂಕ್ ಡಾಗರ್, ಸಮರ್ಥ ವ್ಯಾಸ್, ಅನ್ಮೋಲ್ಪ್ರೀತ್ ಸಿಂಗ್, ಆದಿಲ್ ರಶೀದ್, ಉಪೇಂದ್ರ ಯಾದವ್, ಫಜಲ್ಹಕ್ ಫಾರೂಕಿ, ಅಕೇಲ್ ಹೊಸೈನ್, ಉಮ್ರಾನ್ ಮಲಿಕ್

ಕೊಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ
ಬೆಂಚ್: ಸುಯಶ್ ಶರ್ಮಾ, ಅನುಕೂಲ್ ರಾಯ್, ಎನ್ ಜಗದೀಸನ್, ಲಾಕಿ ಫರ್ಗುಸನ್, ಕುಲ್ವಂತ್ ಖೆಜ್ರೋಲಿಯಾ, ಮಂದೀಪ್ ಸಿಂಗ್, ಟಿಮ್ ಸೌಥಿ, ಉಮೇಶ್ ಯಾದವ್, ಆರ್ಯ ದೇಸಾಯಿ, ಡೇವಿಡ್ ವೈಸ್

Story first published: Thursday, May 4, 2023, 23:33 [IST]
Other articles published on May 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+