For Quick Alerts
ALLOW NOTIFICATIONS  
For Daily Alerts
 

SRH vs RCB: ಈ 4 ಸನ್‌ರೈಸರ್ಸ್ ಆಟಗಾರರ ವಿರುದ್ಧ ಮೇಲುಗೈ ಸಾಧಿಸಿದರೆ RCBಯನ್ನು ಇಂದು ತಡೆಯೋರೇ ಇಲ್ಲ!

ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಇಂದು(ಗುರುವಾರ) ಮಹತ್ವದ ಪಂದ್ಯವೊಂದಕ್ಕೆ ಸಾಕ್ಷಿಯಾಗಲಿದೆ. ಆತಿಥೆಯ ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಆವೃತ್ತಿಯಲ್ಲಿ ಪ್ಲೇಆಫ್ ಹಂತಕ್ಕೇರುವ ಸ್ಪರ್ಧೆಯಿಂದ ಈಗಾಗಲೇ ಹೊರಬಿದ್ದಿದ್ದರೂ ಆರ್‌ಸಿಬಿ ತಂಡಕ್ಕೆ ಈ ಪಂದ್ಯ ನಿರ್ಣಾಯಕ. ಹೀಗಾಗಿ ಈ ಪೈಪೋಟಿಯ ಪಂದ್ಯದಲ್ಲಿ ಆರ್‌ಸಿಬಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಸದ್ಯದ ಕುತೂಹಲ.

ಇನ್ನು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಆರ್‌ಸಿಬಿ ಪಾಲಿಗೆ ಸಿಹಿ ನೆನಪುಗಳಿಗಿಂತ ಹೆಚ್ಚಾಗಿ ಕಹಿಯನ್ನೇ ನೀಡಿದೆ ಎಂಬುದು ಗಮನಿಸಬೇಕಾದ ಅಂಶ. ಇಲ್ಲಿ ಆಡಿದ ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿರುವುದಕ್ಕಿಂತ ಸೋಲು ಕಂಡಿರುವುದೇ ಹೆಚ್ಚು. ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಈ ಹಿಂದಿನ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಬೇಕಾದರೆ ಕೆಲ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯ. ಅದರಲ್ಲೂ ಆರ್‌ಸಿಬಿ ತಂಡ ಈ ನಾಲ್ವರು ಆಟಗಾರರನ್ನು ವಿಶೇಷವಾಗಿ ಪರಿಗಣಿಸಿ ಇವರ ವಿರುದ್ಧ ರಣತಂತ್ರಗಳನ್ನು ಹೆಣೆಯುವುದು ಅವಶ್ಯಕ. ಹಾಗಾದರೆ ಆರ್‌ಸಿಬಿಗೆ ಈ ಪಂದ್ಯದಲ್ಲಿ ಕಂಟಕವಾಗಬಹುದಾದ ಆ ನಾಲ್ವರು ಆಟಗಾರರು ಯಾರು? ಮುಂದೆ ಓದಿ..

IPL 2023, SRH vs RCB: These 4 Sunrisers Hyderabad players will be threat for RCB

ಅಭಿಶೇಕ್ ಶರ್ಮಾ
ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಬಿಕ ಆಟಗಾರ ಅಭೀಶೇಕ್ ಶರ್ಮಾ ಪ್ರತಿಭಾನ್ವಿತ ಆಟಗಾರ ಎಂಬುದರಲ್ಲಿ ಅನುಮಾನವಿಲ್ಲ. ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲಿಯೂ ತಂಡಕ್ಕೆ ನೆರವಾಗುವ ಸಾಮರ್ಥ್ಯ ಹೊಂದಿರುವ ಈ ಯುವ ಆಟಗಾರನನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ 6.50 ಕೋಟಿ ನೀಡಿ ಖರೀದಿಸಿದೆ. ಆರಂಬದಿಂದಲೇ ಸ್ಪೋಟಕ ಆಟಕ್ಕೆ ಮುಂದಾಗುವ ಸಾಮರ್ಥ್ಯಹೊಂದಿರುವ ಅಭಿಶೇಕ್ ಶರ್ಮಾ ವಿರುದ್ಧ ಆರ್‌ಸಿಬಿ ಸ್ಪಷ್ಟ ರಣತಂತ್ರಹೊಂದುವುದು ಅಗತ್ಯ. ಇಲ್ಲವಾದರೆ ಆರ್‌ಸಿಬಿಗೆ ಹಿನ್ನಡೆಯಾಗಬಹುದು.

ಹೆನ್ರಿಕ್ ಕ್ಲಾಸೆನ್
ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಈ ಬಾರಿಯ ಐಪಿಎಲ್‌ನಲ್ಲಿ ಅತ್ಯಂತ ಹೆಚ್ಚು ಯಶಸ್ಸು ಸಾಧಿಸಿದ ಆಟಗಾರ ಎಂದರೆ ಅದು ಹೆನ್ರಿಕ್ ಕ್ಲಾಸೆನ್. ಸನ್‌ರೈಸರ್ಸ್ ತಂಡದ ಪರವಾಗಿ ಕೆಲ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿರುವ ಕ್ಲಾಸೆನ್ ಮಧ್ಯಮ ಕ್ರಮಾಂಕದಲ್ಲಿ ಎದುರಾಳಿಗೆ ಅಪಾಯಕಾರಿಯಾಗಬಲ್ಲ ಸಾಮರ್ಥ್ಯಹೊಂದಿದ್ದಾರೆ. ಟೂರ್ನಿಯಲ್ಲಿ ಅವರು ಈವರೆಗೆ 9 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸಿದ್ದು 326 ರನ್‌ಗಳನ್ನು ಗಳಿಸಿದ್ದಾರೆ. ಈ ಆಟಗಾರನನ್ನು ನಿಯಂತ್ರಿಸುವುದು ಆರ್‌ಸಿಬಿ ಬೌಲರ್‌ಗಳ ಪ್ರಮುಖ ಜವಾಬ್ಧಾರಿ.

ಭುವನೇಶ್ವರ್ ಕುಮಾರ್
ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಎಷ್ಟು ಅಪಾಯಕಾರಿ ಆಟಗಾರ ಎಂಬುದು ಎಲ್ಲರಿಗೂ ತಿಳಿದೇ ಇದೆ. ಆರಂಭದಿಂದಲೇ ತಮ್ಮ ಸ್ವಿಂಗ್ ಕೈಚಳಕದ ಮೂಲಕ ಎದುರಾಳಿ ದಾಂಡಿಗರ ವಿರುದ್ಧ ಯಶಸ್ಸು ಸಾಧಿಸುವ ಬೌಲರ್ ಇವರು. ಭುವನೇಶ್ವರ್ ಕುಮಾರ್ ತಮ್ಮ ಬತ್ತಳಿಕೆಯಲ್ಲಿರುವ ಅಪಾಯಕಾರಿ ಅಸ್ತ್ರಗಳನ್ನು ಈ ಪಂದ್ಯದಲ್ಲಿ ಬಳಸುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಫಾಫ್ ಡು ಪ್ಲೆಸಿಸ್ ಪಡೆ ಈ ದಾಳಿಗೆ ಸೂಕ್ತ ರಣತಂತ್ರ ಹೆಣೆಯದಿದ್ದರೆ ಮುನ್ನಡೆ ಸಾಧಿಸುವುದು ಕಷ್ಟ.

ಟಿ ನಟರಾಜನ್
ಸನ್‌ರೈಸರ್ಸ್ ಹೈದರಾಬಾದ್ ತಂಡದ ಮತ್ತೋರ್ವ ವೇಗದ ಬೌಲರ್ ಟಿ ನಟರಾಜನ್ ಕೂಡ ಆರ್‌ಸಿಬಿ ತಂಡಕ್ಕೆ ಇಂದಿನ ಪಂದ್ಯದಲ್ಲಿ ಅಪಾಯವನ್ನುಂಟು ಮಾಡುವ ಆತಂಕವಿದೆ. ಟಿ ನಟರಾಜನ್ ತಮ್ಮ ನಿಖರವಾದ ದಾಳಿಗೆ ಖ್ಯಾತಿ. ಭುವನೇಶ್ವರ್ ಕುಮಾರ್ ಆರ್‌ಸಿಬಿ ಅಗ್ರ ಕ್ರಮಾಂಕದ ಪ್ರಮುಖ ಆಟಗಾರರಿಗೆ ಅಪಾಯವನ್ನುಂಟು ಮಾಡಿದರೆ ಮಧ್ಯಮ ಕ್ರಮಾಂಕದ ಆಟಗಾರರಿಗೆ ನಟರಾಜನ್ ಆಘಾತ ನೀಡುವ ಸಾಧ್ಯತೆಯಿದೆ. ನಟರಾಜನ್ ಸವರ ನಿಖರವಾದ ಯಾರ್ಕರ್ ವಿರುದ್ಧ ಆರ್‌ಸಿಬಿ ಬೌಲರ್‌ಗಳು ವಿಶೇಷ ಪ್ರತ್ಯಸ್ತ್ರ ಹೂಡುವುದು ಅನಿವಾರ್ಯವಾಗಲಿದೆ. ಅಲ್ಲದೆ ಡೆತ್ ಓವರ್‌ನಲ್ಲಿಯೂ ನಟರಾಜನ್ ಆರ್‌ಸಿಬಿ ಬ್ಯಾಟರ್‌ಗಳಿಗೆ ಕಾಡುವ ಸಾಧ್ಯತೆಯಿದೆ.

Story first published: Thursday, May 18, 2023, 10:31 [IST]
Other articles published on May 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+