Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023, Playoffs: ಈ ಆಟಗಾರನ ಪ್ರದರ್ಶನ ಮುಂಬೈ ಇಂಡಿಯನ್ಸ್‌ಗೆ ನಿರ್ಣಾಯಕ: ಸುನಿಲ್ ಗವಾಸ್ಕರ್

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಕಡೆಗೂ ಪ್ಲೇಆಫ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು. ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಗೆಲುವು ಸಾಧಿಸಿ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದೆ. ಇದೀಗ ಪ್ಲೇಆಫ್‌ನಲ್ಲಿ ಇಂದು ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಈ ಒಬ್ಬ ಆಟಗಾರನ ಪ್ರದರ್ಶನ ನಿರ್ಣಾಯಕ ಎಂದಿದ್ದಾರೆ ಸುನಿಲ್ ಗವಾಸ್ಕರ್.

ಮುಂಬೈ ಇಂಡಿಯನ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಬುಧವಾರ ಪ್ಲೇಆಫ್‌ ಪಂದ್ಯವನ್ನು ಆಡಲಿದೆ. ಎಲಿಮಿನೇಟರ್ ಪಂದ್ಯ ಇದಾಗಿರುವ ಕಾರಣ ಈ ಪಂದ್ಯದಲ್ಲಿ ಸೋತ ತಂಡ ತನ್ನ ಹೋರಾಟವನ್ನು ಅಂತ್ಯಗೊಳಿಸಲಿದೆ. ಗೆದ್ದ ತಂಡ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೆಣೆಸಾಡಬೇಕಿದ್ದು ಅಲ್ಲಿ ಗೆದ್ದ ತಂಡ ಫೈನಲ್‌ಗೆ ಪ್ರವೇಶ ಪಡೆಯಲಿದೆ.

IPL 2023: Sunil Gavaskar prediction on Mumbai Indians said Suryakumar Yadav will be crucial

ಇನ್ನು ಈ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಪ್ರದರ್ಶನ ಬಹಳ ಮಹತ್ವದ್ದಾಗಿರಲಿದೆ ಎಂದಿದ್ದಾರೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್. "ಸೂರ್ಯಕುಮಾರ್ ಯಾದವ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಅವರು ಅಂಗಳಕ್ಕಿಳಿದಾಗ ಅವರು ಆಡುವ ದೊಡ್ಡ ಹೊಡೆಗಳನ್ನು ಬಾರಿಸುವುದನ್ನು ನೋಡಿದಾಗಲೇ ಆತ ಎಂಥಾ ಫಾರ್ಮ್‌ನಲ್ಲಿದ್ದಾರೆ ಎಂಬುದು ಅರಿವಾಗುತ್ತದೆ" ಎಂದಿದ್ದಾರೆ ಗವಾಸ್ಕರ್.

ಮುಂದುವರಿದು ಅವರು "ಆದರೆ ಸೂರ್ಯಕುಮಾರ್ ಯಾದವ್ ನಿಧಾನದ ಹಾಗೂ ತಿರುಗುವ ಪಿಚ್‌ಗಳಲ್ಲಿ ಅವರು ಮತ್ತಷ್ಟು ಅದ್ಭುತ ಯೋಜನೆಗಳೊಂದಿಗೆ ಕಣಕ್ಕಿಳಿಯುವ ಅಗತ್ಯವಿದೆ. ಪ್ಲೇಆಫ್ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಆಟ ಬಹಳ ನಿರ್ಣಾಯಕವಾಗಲಿದೆ. ಪ್ಲೇಆಫ್‌ನ ಮೊದಲ ಎರಡು ಪಂದ್ಯಗಳು ಕೂಡ ಚೆನ್ನೈನಲ್ಲಿ ನಿಧಾನಗತಿಯ ಪಿಚ್‌ನಲ್ಲಿ ನಡೆಯಲಿದೆ ಎಂಬುದನ್ನು ಗಮನಿಸಬೇಕು" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಇನ್ನು ಇದೇ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸ್ಪಿನ್ನರ್ ಪಿಯೂಷ್ ಚಾವ್ಲಾ ಬಗ್ಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ವಿಶೇಷ ಮಾತುಗಳನ್ನಾಡಿದ್ದಾರೆ. ಚಾವ್ಲಾ ಓರ್ವ ಚಾಂಪಿಯನ್ ಬೌಲರ್ ಎಂದು ಕೈಫ್ ಬಣ್ಣಿಸಿದ್ದಾರೆ. ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಚಾವ್ಲಾ ಈವರೆಗೆ 20 ವಿಕೆಟ್‌ಗಳನ್ನು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಕಬಳಿಸಿದ್ದಾರೆ.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಮಣದೀಪ್ ಸಿಂಗ್, ಅನ್ಮೋಲ್ಪ್ರೀತ್ ಸಿಂಗ್, ಡೆವಾಲ್ಡ್ ಬ್ರೆವಿಸ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಶಮ್ಸ್ ಮುಲಾನಿ, ಪಿಯೂಷ್ ಚಾವ್ಲಾ, ಕ್ಯಾಮರೂನ್ ಗ್ರೀನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್, ವಿಷ್ಣು ವಿನೋದ್, ಜೋಫ್ರಾ ಆರ್ಚರ್, ಅರ್ಷದ್ ಖಾನ್, ಜೇಸನ್ ಬೆಹ್ರೆಂಡಾರ್ಫ್, ರಾಘವ್ ಗೋಯಲ್, ದುವಾನ್ ಜಾನ್ಸೆನ್, ಆಕಾಶ್ ಮಧ್ವಲ್

ಲಕ್ನೋ ಸೂಪರ್ ಜೈಂಟ್ಸ್: ಕೃನಾಲ್ ಪಾಂಡ್ಯ (ನಾಯಕ), ಅವೇಶ್ ಖಾನ್, ಆಯುಷ್ ಬಡೋನಿ, ಕ್ವಿಂಟನ್ ಡಿ ಕಾಕ್, ಕೆ ಗೌತಮ್, ದೀಪಕ್ ಹೂಡಾ, ಪ್ರೇರಕ್ ಮಂಕಡ್, ಕೈಲ್ ಮೇಯರ್ಸ್, ಅಮಿತ್ ಮಿಶ್ರಾ, ಮೊಹ್ಸಿನ್ ಖಾನ್, ನವೀನ್-ಉಲ್-ಹಕ್, ನಿಕೋಲಸ್ ಪೂರನ್, ರವಿ ಬಿಷ್ಣೋಯ್, ಡೇನಿಯಲ್ ಸಾಮ್ಸ್, ಕರಣ್ ಶರ್ಮಾ, ರೊಮಾರಿಯೋ ಶೆಫರ್ಡ್, ಮಾರ್ಕಸ್ ಸ್ಟೊಯಿನಿಸ್, ಸ್ವಪ್ನಿಲ್ ಸಿಂಗ್, ಜಯದೇವ್ ಉನದ್ಕತ್, ಮನನ್ ವೋಹ್ರಾ, ಮಾರ್ಕ್ ವುಡ್, ಮಯಾಂಕ್ ಯಾದವ್, ಯಶ್ ಠಾಕೂರ್, ಯುದ್ವೀರ್ ಸಿಂಗ್, ಕರುಣ್ ನಾಯರ್.

Story first published: Wednesday, May 24, 2023, 15:02 [IST]
Other articles published on May 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+