Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RR vs SRH: 215 ರನ್ ಚೇಸ್ ಮಾಡಿ ಕೊನೆ ಎಸೆತದಲ್ಲಿ ರೋಚಕ ಜಯ ಕಂಡ ಸನ್ ರೈಸರ್ಸ್ ಹೈದರಾಬಾದ್!

IPL 2023: Sunrisers Hyderabad chased down mammoth 215 runs target against Rajasthan Royals

ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 52ನೇ ಪಂದ್ಯದಲ್ಲಿ ಇಂದು ( ಮೇ 7 ) ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಿವೆ.

ಪಂದ್ಯ ಜೈಪುರದ ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆದಿದ್ದು, ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 4 ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಜೋಸ್ ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿ ಎದುರಾಳಿ ಸನ್ ರೈಸರ್ಸ್ ತಂಡಕ್ಕೆ ಗೆಲ್ಲಲು 215 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.

ಈ ಗುರಿಯನ್ನು ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 217 ರನ್ ಬಾರಿಸಿ ಕೊನೆ ಎಸೆತದಲ್ಲಿ ರೋಚಕ ಗೆಲುವನ್ನು ದಾಖಲಿಸಿ ಸೋಲಿನ ಸುಳಿಯಿಂದ ಕಮ್ ಬ್ಯಾಕ್ ಮಾಡಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡ ಗೆಲ್ಲಲು ಕೊನೆಯ ಓವರ್‌ನಲ್ಲಿ ಗೆಲ್ಲಲು 17 ರನ್‌ಗಳ ಅಗತ್ಯವಿತ್ತು. ಸಂದೀಪ್ ಶರ್ಮಾ ಬೌಲಿಂಗ್ ಮಾಡಿದರು. ಮೊದಲ ಎಸತದಲ್ಲಿ ಎರಡು ರನ್ ಬಾರಿಸಿದ ಅಬ್ದುಲ್ ಸಮದ್ ಎರಡನೇ ಎಸೆತದಲ್ಲಿ ಸಿಕ್ಸರ್ ಚಚ್ಚಿದರು, ಮೂರನೇ ಎಸೆತದಲ್ಲಿ ಎರಡು ರನ್ ಬಾರಿಸಿದರು ಹಾಗೂ ನಾಲ್ಕನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು. ನಾಲ್ಕನೆ ಎಸತಕ್ಕೆ ಯಾನ್‌ಸೆನ್ ಸಿಂಗಲ್ ಕಲೆಹಾಕಿದರು.

ಹೀಗೆ ಅಂತಿಮ ಎರಡು ಒಂದು ಎಸೆತದಲ್ಲಿ ಗೆಲ್ಲಲು ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲ್ಲಲು 5 ರನ್‌ಗಳ ಅಗತ್ಯವಿತ್ತು. ಆದರೆ ಸಂದೀಪ್ ಶರ್ಮಾ ನೋ ಬಾಲ್ ಎಸೆದ ಕಾರಣ ಒಂದು ಎಸೆತಕ್ಕೆ 4 ರನ್ ಬಾರಿಸಬೇಕಾಯಿತು. ಕೊನೆಗೆ ಅಬ್ದುಲ್ ಸಮದ್ ಸಿಕ್ಸರ್ ಚಚ್ಚಿದರು. ಇದು ಸನ್ ರೈಸರ್ಸ್ ಹೈದರಾಬಾದ್ ಮಾಡಿದ ಅತ್ಯಧಿಕ ರನ್ ಚೇಸ್ ಆಗಿದ್ದು, ಜೈಪುರ ಕ್ರೀಡಾಂಗಣದಲ್ಲಿ ನಡೆದ ಅತಿದೊಡ್ಡ ಚೇಸಿಂಗ್ ಸಹ ಇದಾಗಿದೆ.

ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್: ಪರ ಆರಂಭಿಕ ಆಟಗಾರರಾಗಿ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಕಣಕ್ಕಿಳಿದರು. ಆರಂಭದಿಂದಲೇ ಇಬ್ಬರೂ ಸಹ ಬಿರುಸಿನ ಬ್ಯಾಟಿಂಗ್ ನಡೆಸಿ ರನ್ ಹೊಳೆ ಹರಿಸಿದರು. ಯಶಸ್ವಿ ಜೈಸ್ವಾಲ್ 18 ಎಸೆತಗಳಲ್ಲಿ 35 ರನ್ ಗಳಿಸಿದರೆ, ಜೋಸ್ ಬಟ್ಲರ್ 59 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 95 ರನ್ ಗಳಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಸಂಜು ಸ್ಯಾಮ್ಸನ್ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 66 ರನ್ ಚಚ್ಚಿದರು ಹಾಗೂ ಶಿಮ್ರಾನ್ ಹೆಟ್ಮಾಯೆರ್ 5 ಎಸೆತಗಳಲ್ಲಿ ಅಜೇಯ 7 ರನ್ ಗಳಿಸಿದರು.

ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ವಿಫಲವಾದ ಸನ್ ರೈಸರ್ಸ್ ಹೈದರಾಬದ್ ಪರ ಭುವನೇಶ್ವರ್ ಕುಮಾರ್ ಹಾಗೂ ಮಾರ್ಕೊ ಯಾನ್‌ಸೆನ್ ತಲಾ ಒಂದೊಂದು ವಿಕೆಟ್ ಪಡೆದರೂ ದೊಡ್ಡ ಮಟ್ಟದ ರನ್ ಬಿಟ್ಟುಕೊಟ್ಟು ದುಬಾರಿಯಾದರು. ಉಳಿದ ಬೌಲರ್‌ಗಳೂ ಸಹ ಸಿಕ್ಕಾಪಟ್ಟೆ ರನ್ ನೀಡಿ ದುಬಾರಿಯಾದರು.

ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್: ಸನ್ ರೈಸರ್ಸ್ ಹೈದರಾಬಾದ್ ಪರ ಆರಂಭಿಕ ಆಟಗಾರರಾಗಿ ಇಂಪ್ಯಾಕ್ಟ್ ಪ್ಲೇಯರ್ ಅನ್ಮೋಲ್ ಪ್ರೀತ್ ಸಿಂಗ್ ಹಾಗೂ ಅಭಿಷೇಕ್ ಶರ್ಮಾ ಕಣಕ್ಕಿಳಿದರು. ಅನ್ಮೋಲ್ ಪ್ರೀತ್ ಸಿಂಗ್ 25 ಎಸೆತಗಳಲ್ಲಿ 33 ರನ್ ಗಳಿಸಿದರೆ, ಅಭಿಷೇಕ್ ಶರ್ಮಾ 34 ಎಸೆತಗಳಲ್ಲಿ 55 ರನ್ ಬಾರಿಸಿದರು. ಉಳಿದಂತೆ ರಾಹುಲ್ ತ್ರಿಪಾಠಿ 29 ಎಸೆತಗಳಲ್ಲಿ 47 ರನ್ ಬಾರಿಸಿದರೆ, ಹೆನ್ರಿಚ್ ಕ್ಲಾಸೀನ್ 12 ಎಸೆತಗಳಲ್ಲಿ 26 ರನ್, ಏಡನ್ ಮಾರ್ಕ್ರಮ್ 5 ಎಸೆತಗಳಲ್ಲಿ 6 ರನ್, ಗ್ಲೆನ್ ಫಿಲಿಪ್ಸ್ 7 ಎಸೆತಗಳಲ್ಲಿ 25 ರನ್ ಗಳಿಸಿದರು.

ಅಂತಿಮವಾಗಿ ಅಬ್ದುಲ್ ಸಮದ್ 7 ಎಸೆತಗಳಲ್ಲಿ 2 ಸಿಕ್ಸರ್ ಸಹಿತ ಅಜೇಯ 17 ರನ್ ಹಾಗೂ ಮಾರ್ಕೊ ಯಾನ್‌ಸೆನ್ 2 ಎಸೆತಗಳಲ್ಲಿ ಅಜೇಯ 3 ರನ್ ಗಳಿಸಿದರು.

ರಾಜಸ್ಥಾನ್ ರಾಯಲ್ಸ್ ತಂಡದ ಪರ ಯುಜ್ವೇಂದ್ರ ಚಾಹಲ್ 4 ವಿಕೆಟ್ ಪಡೆದರೆ, ಕುಲ್‌ದೀಪ್ ಯಾದವ್ ಹಾಗೂ ರವಿಚಂದ್ರನ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದರು.

Story first published: Sunday, May 7, 2023, 23:24 [IST]
Other articles published on May 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+