For Quick Alerts
ALLOW NOTIFICATIONS  
For Daily Alerts
 

MI vs RCB: 35 ಎಸೆತದಲ್ಲಿ 83 ರನ್ ಚಚ್ಚಿದ ಸೂರ್ಯ: ಆರ್‌ಸಿಬಿ ವಿರುದ್ಧ SKY ಮುರಿದ ಮೂರು ದಾಖಲೆಗಳು ಇದು!

ಈ ಬಾರಿಯ ಐಪಿಎಲ್‌ನಲ್ಲಿ ಆರಂಭಿಕ ಹಂತದಲ್ಲಿ ಮಂಕಾದಂತೆ ಕಂಡು ಬಂದಿದ್ದ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ದಾಂಡಿಗ ಸೂರ್ಯಕುಮಾರ್ ಯಾದವ್ ಮಹತ್ವದ ಘಟ್ಟದಲ್ಲಿ ಅದ್ಭುತ ಲಯಕ್ಕೆ ಮರಳಿದ್ದಾರೆ. ಅರ್ಧ ಶತಕಗಳ ಮೇಲೆ ಅರ್ಧ ಶತಕ ಬಾರಿಸುತ್ತಿದ್ದು ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯಲ್ಲಿ ಮತ್ತೆ ಲಯಕ್ಕೆ ಮರಳಲು ಕಾರಣವಾಗಿದ್ದಾರೆ. ಅದರಲ್ಲೂ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೀಡಿದ ಅಮೋಘ ಪ್ರದರ್ಶನ ಮುಂಬೈ ಇಂಡಿಯನ್ಸ್ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟಿದೆ.

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿಯೂ ಸೂರ್ಯಕುಮಾರ್ ಯಾದವ್ ಅಬ್ಬರದಿಂದಾಗಿ ಆರ್‌ಸಿಬಿ ಗೆಲುವಿಗೆ ಸಣ್ಣ ಅವಕಾಶವೂ ಇಲ್ಲದಂತಾಗಿದೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಆರ್‌ಸಿಬಿ ಬೌಲಿಂಗ್ ವಿಭಾಗವನ್ನು ಧ್ವಂಸಗೊಳಿಸಿದರು. ಕೇವಲ 35 ಎಸೆತಗಳನ್ನು ಎದುರಿಸಿದ ಸೂರ್ಯ 83 ರನ್ ಬಾರಿಸಿದ್ದಾರೆ. 7 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿದ್ದು 237.14ರ ಸ್ಟ್ರೈಕ್‌ರೇಟ್‌ನಲ್ಲಿ ಅಬ್ಬರಿಸಿದ್ದಾರೆ.

ipl 2023, Suryakumar Yadav surpassed these 3 records in match against RCB

ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮೂರು ಪ್ರಮುಖ ವೈಯಕ್ತಿಕ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಅವುಗಳ ಬಗೆಗಿನ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಐಪಿಎಲ್‌ನಲ್ಲಿ 3000 ರನ್

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಐಪಿಎಲ್‌ನಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ದಾಟಿದ್ದಾರೆ. ಐಪಿಎಲ್‌ನಲ್ಲಿ 3000 ರನ್‌ ಪೂರ್ಣಗೊಳಿಸಿದ ಆಟಗಾರರ ಪಟ್ಟಿಗೆ ಸೂರ್ಯಕುಮಾರ್ ಕೂಡ ಸೇರ್ಪಡೆಯಾಗಿದ್ದಾರೆ. 119ನೇ ಇನ್ನಿಂಗ್ಸ್‌ನಲ್ಲಿ ಸೂರ್ಯ ಈ ಸಾಧನೆ ಮಾಡಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 63 ರನ್‌ಗಳಿಸಿದ್ದ ವೇಳೆ ಈ ಮೈಲಿಗಲ್ಲು ದಾಟಿದರು ಮುಂಬೈ ಇಂಡಿಯನ್ಸ್ ದಾಂಡಿಗ. ಸದ್ಯ ಸೂರ್ಯಕುಮಾರ್ ಯಾದವ್ ಐಪಿಎಲ್‌ನಲ್ಲಿ 30.51ರ ಸರಾಸರಿಯಲ್ಲಿ 20 ಅರ್ಧಶತಕಗಳೊಂದಿಗೆ 141.45ರ ಸ್ಟ್ರೈಕ್‌ರೇಟ್‌ನಲ್ಲಿ 3020 ರನ್‌ಗಳನ್ನು ಗಳಿಸಿದ್ದಾರೆ.

100 ಸಿಕ್ಸರ್ ಪೂರ್ಣಗೊಳಿಸಿದ SKY
ಇನ್ನು ಇದೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳ ಮೈಲಿಗಲ್ಲನ್ನು ಕೂಡ ದಾಟಿದ್ದಾರೆ. ಇದೀಗ ಐಪಿಎಲ್‌ನಲ್ಲಿ ಸೂರ್ಯಕುಮಾರ್ ಯಾದವ್ ಒಟ್ಟಾರೆಯಾಗಿ 102 ಸಿಕ್ಸರ್‌ಗಳನ್ನು ಬಾರಿಸಿದ ಸಾಧನೆ ಮಾಡಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 4 ಸಿಕ್ಸರ್ ಸಿಡಿಸಿದರೆ ಈ ಪ್ರಮುಖ ಮೈಲಿಗಲ್ಲನ್ನು ದಾಟುವ ಅವಕಾಶವಿತ್ತು. ಸೂರ್ಯ ಈ ಪಂದ್ಯದಲ್ಲಿ 6 ಸಿಕ್ಸರ್ ಬಾರಿಸಿದ್ದಾರೆ.

ಆರ್‌ಸಿಬಿ ವಿರುದ್ಧ ಅತಿ ಹೆಚ್ಚಿನ ರನ್ ಬಾರಿಸಿದ ಸೂರ್ಯಕುಮಾರ್
ಇನ್ನು ಐಪಿಎಲ್‌ನಲ್ಲಿ ವೈಯಕ್ತಿಕವಾಗಿ ತನ್ನ ಗರಿಷ್ಠ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ ಸೂರ್ಯಕುಮಾರ್ ಯಾದವ್. ಇದಕ್ಕೂ ಮುನ್ನ 2021ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 82 ರನ್‌ಗಳಿಸಿದ್ದು ಅವರ ಅತಿ ಹೆಚ್ಚಿನ ಸ್ಕೋರ್ ಎನಿಸಿಕೊಂಡಿತ್ತು, ಇದೀಗ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅವರು 83 ರನ್ ಬಾರಿಸಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ತಮಡ ಹೀನಾಯವಾಗಿ ಸೋಲು ಕಂಡಿದೆ. ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಬೌಲಿಂಗ್‌ನಲ್ಲಿ ಹೀನಾಯ ಪ್ರದರ್ಶನ ನೀಡಿರುವ ಕಾರಣದಿಂದಾಗಿ ಆರ್‌ಸಿಬಿ ಮತ್ತೊಮ್ಮೆ ಸೋಲಿನ ಕಹಿ ಅನುಭವಿಸುವಂತಾಗಿದೆ. ಈ ಸೋಲು ಆರ್‌ಸಿಒಬಿ ತಂಡಕ್ಕೆ ದೊಡ್ಡ ಹಿನ್ನಡೆಯುಂಟು ಮಾಡಿದ್ದು ಪ್ಲೇಆಫ್‌ಗೇರುವ ಸ್ಪರ್ಧೆಯಲ್ಲಿ ಭಾರೀ ಹಿನ್ನಡೆಗೆ ಕಾರಣವಾಗಿದೆ.

Story first published: Wednesday, May 10, 2023, 12:08 [IST]
Other articles published on May 10, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+