For Quick Alerts
ALLOW NOTIFICATIONS  
For Daily Alerts
 

IPL 2023: ಪಂದ್ಯದ ಗತಿ ಬದಲಿಸಬಲ್ಲ ಇಬ್ಬರು ಮುಂಬೈ ಇಂಡಿಯನ್ಸ್ ಆಟಗಾರರನ್ನು ಹೆಸರಿಸಿದ ಸುನಿಲ್ ಗವಾಸ್ಕರ್

IPL 2023: These 2 Mumbai Indians Players Can Change The Tempo Of The Match Says Sunil Gavaskar

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಋತುವಿಗಾಗಿ ದಿನಗಣನೆ ಆರಂಭವಾಗಿದ್ದು, ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವೆ ಉದ್ಘಾಟನಾ ಪಂದ್ಯದ ಮೂಲಕ ಅದ್ಧೂರಿ ಚಾಲನೆ ಸಿಗಲಿದೆ.

ಇನ್ನು ಐದು ಬಾರಿಯ ಐಪಿಎಲ್ ಚಾಂಪಿಯನ್ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿ ಮತ್ತೊಮ್ಮೆ ಪ್ರಶಸ್ತಿ ಎತ್ತಲು ಎದುರು ನೋಡುತ್ತಿದೆ. ತಂಡದ ಕುರಿತು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ.

ಈ ಬಾರಿಯ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಸ್ಟ್ರೇಲಿಯಾದ ಟಿಮ್ ಡೇವಿಡ್ ಮತ್ತು ಕ್ಯಾಮರೂನ್ ಗ್ರೀನ್ ಜೋಡಿ ಟ್ರಂಪ್ ಕಾರ್ಡ್ ಆಟಗಾರರಾಗಲಿದ್ದಾರೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ ಇಂಡಿಯನ್ಸ್ ತಮ್ಮ 2022ರ ಕಳಪೆ ಪ್ರದರ್ಶನದಿಂದ ಹೊರಬರಲು ಎದುರು ನೋಡುತ್ತಿದ್ದು, ಇದೇ ವೇಳೆ ದೊಡ್ಡ ಮೊತ್ತಕ್ಕೆ ಕ್ಯಾಮೆರಾನ್ ಗ್ರೀನ್ ಅವರನ್ನು ಖರೀದಿಸಿರುವುದು ತಂಡಕ್ಕೆ ಹೊಸ ಚೈತನ್ಯ ನೀಡಲಿದೆ ಎಂದು ಮಾಜಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.

IPL 2023: These 2 Mumbai Indians Players Can Change The Tempo Of The Match Says Sunil Gavaskar

ಕ್ಯಾಮೆರಾನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಐಪಿಎಲ್ ಹರಾಜಿನಲ್ಲಿ 17.50 ಕೋಟಿ ರೂ.ಗೆ ಖರೀದಿಸಿದ್ದು, ನಿವೃತ್ತಿ ಘೋಷಿಸಿದ ಹಿರಿಯ ಆಲ್‌ರೌಂಡರ್ ಕೀರನ್ ಪೊಲಾರ್ಡ್ ಅವರ ಸ್ಥಾನವನ್ನು ಕ್ಯಾಮೆರಾನ್ ಗ್ರೀನ್ ತುಂಬು ನಿರೀಕ್ಷೆಯಿದೆ.

2023ರ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸಂಯೋಜನೆಯ ಬಗ್ಗೆ ಮಾತನಾಡಿದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಮತ್ತೊಬ್ಬ ಆಲ್‌ರೌಂಡರ್ ಟಿಮ್ ಡೇವಿಡ್ ಪಂದ್ಯದ ಗತಿ ಬದಲಾಯಿಸುವ ಆಟಗಾರನಾಗಿದ್ದಾರೆ ಎಂದು ಹೇಳಿದರು.

"ನನ್ನ ಪ್ರಕಾರ, ಟಿಮ್ ಡೇವಿಡ್ ಒಂದೆರಡು ಓವರ್‌ಗಳಲ್ಲಿ ಪಂದ್ಯದ ಗತಿಯನ್ನು ಬದಲಾಯಿಸುವ ಆಟಗಾರನಾಗಿರುತ್ತಾರೆ. ಕ್ಯಾಮೆರಾನ್ ಗ್ರೀನ್ ಬ್ಯಾಟ್ ಮತ್ತು ಬಾಲ್‌ನಲ್ಲಿ ದೊಡ್ಡ ವ್ಯತ್ಯಾಸ ಮಾಡುವ ಆಲ್‌ರೌಂಡರ್. 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ, ವೇಗವಾಗಿ ರನ್ ಗಳಿಸಲಿದ್ದಾರೆ," ಎಂದು ಸುನಿಲ್ ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.

IPL 2023: These 2 Mumbai Indians Players Can Change The Tempo Of The Match Says Sunil Gavaskar

ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಕಳೆದ 2 ವರ್ಷಗಳಲ್ಲಿ ಅನುಭವಿಸಿದ ಗಾಯದ ನಂತರ ಐಪಿಎಲ್‌ನ ಮುಂದಿನ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಆಡುವ ನಿರೀಕ್ಷೆಯಿದೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಜೋಫ್ರಾ ಆರ್ಚರ್ ಬಹುಮುಖ್ಯ ಪಾತ್ರ ವಹಿಸಲಿದ್ದಾರೆ.

"ಇನ್ನು ಮುಂಬೈ ಇಂಡಿಯನ್ಸ್ ತಂಡದ ಅಡುವ ಬಳಗದಲ್ಲಿ ಕಾಣಿಸಿಕೊಳ್ಳುವ ವಿದೇಶಿ ಆಟಗಾರರೆಂದರೆ, ಜೋಫ್ರಾ ಆರ್ಚರ್, ಟಿಮ್ ಡೇವಿಡ್ ಮತ್ತು ಕ್ಯಾಮೆರಾನ್ ಗ್ರೀನ್ ನಿರ್ಣಾಯಕ ಆಟಗಾರರಾಗಿದ್ದಾರೆ. ನಾಲ್ಕನೆಯವರಾಗಿ ಟ್ರಿಸ್ಟಾನ್ ಸ್ಟಬ್ಸ್ ಅಥವಾ ಡೇವಾಲ್ಡ್ ಬ್ರೇವಿಸ್ ಆಯ್ಕೆಯಾಗಬಹುದು," ಎಂದು ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಿಳಿಸಿದರು.

ಗವಾಸ್ಕರ್ MI ಗಾಗಿ ತಮ್ಮ ಸಾಗರೋತ್ತರ ಲೈನ್-ಅಪ್ ನೀಡಿದರು ಮತ್ತು ಜೋಫ್ರಾ, ಡೇವಿಡ್ ಮತ್ತು ಗ್ರೀನ್ ಜೊತೆಗೆ ಫ್ರಾಂಚೈಸಿಗೆ ನಿರ್ಣಾಯಕರಾಗಿದ್ದಾರೆ ಎಂದು ಹೇಳಿದರು.

ಮುಂಬೈ ಇಂಡಿಯನ್ಸ್ ತಂಡದ ಮೊದಲ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಎಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

Story first published: Wednesday, March 15, 2023, 18:42 [IST]
Other articles published on Mar 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+