RCB Playing 11 : ಈ ಮೂವರು ಉತ್ತಮ ಆರ್‌ಸಿಬಿ ಆಟಗಾರರು 2023ರ ಐಪಿಎಲ್‌ನಲ್ಲಿ ಬೆಂಚ್ ಕಾಯುವ ಸಾಧ್ಯತೆ

2023 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಆರ್‌ಸಿಬಿ ಕೆಲವು ಉತ್ತಮ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಕೆಲವು ಆಟಗಾರರನ್ನು ಮಾತ್ರ ಬಿಡುಗಡೆ ಮಾಡಿದ್ದ ಆರ್‌ಸಿಬಿ, ಕಳೆದ ಆವೃತ್ತಿಯ ತಂಡವನ್ನೇ ಉಳಿಸಿಕೊಂಡಿದೆ.
ಹರಾಜಿಗಿಂತ ಮೊದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಡುವ ಬಳಗ ಬಹುತೇಕ ನಿರ್ಧಾರವಾಗಿದೆ. ಕೆಲವು ಆಟಗಾರರಿಗೆ ಬ್ಯಾಕಪ್ ಆಗಿ ಮಿನಿ ಹರಾಜಿನಲ್ಲಿ ಹಲವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಆಲ್‌ರೌಂಡರ್ ವಿಲ್ ಜ್ಯಾಕ್ಸ್, ವೇಗದ ಬೌಲರ್ ರೀಸ್ ಟೋಪ್ಲೆ ತಂಡದ ಪ್ರಮುಖ ಖರೀದಿಯಾಗಿದ್ದಾರೆ. ಜೋಶ್ ಹೇಜಲ್‌ವುಡ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಬ್ಯಾಕಪ್ ಆಗಿ ಇವರು ತಂಡದಲ್ಲಿರುತ್ತಾರೆ.
ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ವನಿಂದು ಹಸರಂಗ, ಜೋಶ್ ಹೇಜಲ್‌ವುಡ್, ಮೊಹಮ್ಮದ್ ಸಿರಾಜ್ ಈಗಾಗಲೇ ತಂಡದಲ್ಲಿ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ.
ಪ್ರಮುಖ ಆಟಗಾರರು ತಂಡದಲ್ಲಿ ಸ್ಥಾನ ಪಡೆಯುವುದರಿಂದ ಮತ್ತೆ ಕೆಲವು ಪ್ರತಿಭಾವಂತ ಕ್ರಿಕೆಟಿಗರು 2023ರ ಐಪಿಎಲ್ ಆವೃತ್ತಿಯಲ್ಲಿ ಬೆಂಚ್ ಕಾಯುವ ಸ್ಥಿತಿ ನಿರ್ಮಾಣವಾಗಿದೆ, ಆ ಮೂವರು ಕ್ರಿಕೆಟಿಗರ ಬಗ್ಗೆ ಮಾಹಿತಿ.

ಮಹಿಪಾಲ್ ಲೋಮ್ರೋರ್
2022ರ ಐಪಿಎಲ್‌ನಲ್ಲಿ ಆರ್‌ಸಿಬಿ ಮಧ್ಯಮ ಕ್ರಮಾಂಕದಲ್ಲಿ ಆಡಿದರು. ಎಡಗೈ ಸ್ಪಿನ್ನರ್ ಆಗಿರುವ ಮಹಿಪಾಲ್ ಲೋಮ್ರೋರ್ 7 ಪಂದ್ಯಗಳನ್ನು ಆಡಿದರು. ಆದರೆ, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದ ಕಾರಣ ನಂತರ ಅವಕಾಶ ಪಡೆಯಲಿಲ್ಲ.
7 ಪಂದ್ಯಗಳಲ್ಲಿ 17.2 ಸರಾಸರಿಯಲ್ಲಿ 150.88 ಸ್ಟ್ರೈಕ್‌ರೇಟ್‌ನಲ್ಲಿ 86 ರನ್ ಗಳಿಸಿದರು. ಎರಡು ಓವರ್ ಮಾತ್ರ ಅವರು ಬೌಲಿಂಗ್ ಮಾಡಿದರು. 2023ರ ಐಪಿಎಲ್‌ನಲ್ಲಿ ಕೂಡ ಆರ್‌ಸಿಬಿ ತಂಡದ ಆಡುವ ಬಳಗದಲ್ಲಿ ಅವರು ಸ್ಥಾನ ಪಡೆಯುವ ಸಾಧ್ಯತೆ ಕಡಿಮೆಯಿದೆ.
ಆಲ್‌ರೌಂಡರ್ ಸ್ಥಾನಕ್ಕೆ ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ ಈಗಾಗಲೇ ತಂಡದಲ್ಲಿ ಇದ್ದು ಲೋಮ್ರೋರ್ ತಂಡದಲ್ಲಿ ಸ್ಥಾನ ಪಡೆಯಲು ಕಾಯಬೇಕಾಗುತ್ತದೆ.
ವಾರ್ನರ್ or ಮನೀಶ್ ಪಾಂಡೆ: ಪಂತ್ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಯಾರು?

ವೇಗಿ ಡೇವಿಡ್ ವಿಲ್ಲಿ
ಇಂಗ್ಲೆಂಡ್ ತಂಡದ ವೇಗದ ಬೌಲರ್ ಡೇವಿಡ್ ವಿಲ್ಲಿ ಕೂಡ ಆರ್ ಸಿಬಿ ತಂಡದ ಭಾಗವಾಗಿದ್ದಾರೆ. ಬೌಲಿಂಗ್‌ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿ ಕೂಡ ಅವರು ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ.
ಕಳೆದ ಆವೃತ್ತಿಯಲ್ಲಿ ಗಾಯದ ಕಾರಣ ಅವರು ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಜೋಶ್ ಹೇಜಲ್‌ವುಡ್ ವೇಗದ ಬೌಲಿಂಗ್‌ನಲ್ಲಿ ಆದ್ಯತೆ ಪಡೆಯಲಿದ್ದು, ರೀಸ್ ಟೋಪ್ಲಿ ಅವರಿಗೆ ಬ್ಯಾಕಪ್ ಆಟಗಾರನಾಗಿ ತಂಡದಲ್ಲಿದ್ದಾರೆ. 2023ರ ಐಪಿಎಲ್‌ನಲ್ಲಿ ವಿಲ್ಲಿ ಅವಕಾಶ ಪಡೆಯುವ ಸಾಧ್ಯತೆ ತೀರಾ ಕಡಿಮೆ ಇದೆ.

ಆಲ್‌ರೌಂಡರ್ ವಿಲ್ ಜ್ಯಾಕ್ಸ್
ಇಂಗ್ಲೆಂಡ್‌ನ ಮತ್ತೊಬ್ಬ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಮಿನಿ ಹರಾಜಿನಲ್ಲಿ ಆರ್ ಸಿಬಿ ತಂಡದ ಭಾಗವಾಗಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಬ್ಯಾಕಪ್ ಆಗಿ ಆರ್ ಸಿಬಿ ಅವರನ್ನು ಖರೀದಿ ಮಾಡಿದೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮ್ಯಾಕ್ಸ್‌ವೆಲ್ ಐಪಿಎಲ್ ವೇಳೆಗೆ ಸಂಪೂರ್ಣವಾಗಿ ಫಿಟ್ ಆಗುವ ವಿಶ್ವಾಸ ಹೊಂದಿದ್ದಾರೆ.
ಮ್ಯಾಕ್ಸ್‌ವೆಲ್ ಸಂಪೂರ್ಣವಾಗಿ ಫಿಟ್ ಆದರೆ ವಿಲ್ ಜ್ಯಾಕ್ಸ್ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟವಾಗಲಿದೆ. ವಿಲ್ ಜ್ಯಾಕ್ಸ್ ಸ್ಫೋಟಕ ಬ್ಯಾಟರ್, ಅದರಲ್ಲೂ ವೇಗದ ಬೌಲಿಂಗ್ ವಿರುದ್ಧ ಅವರು ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಆದರೆ, ತಂಡದಲ್ಲಿ ಈಗಾಗಲೇ ಫಿನ್ ಅಲೆನ್ ಮತ್ತು ಡುಪ್ಲೆಸಿಸ್ ವೇಗದ ಬೌಲಿಂಗ್‌ಗೆ ಆಡುವ ಸಾಮರ್ಥ್ಯ ಹೊಂದಿದ್ದು, ವಿಲ್ ಜ್ಯಾಕ್ಸ್‌ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications