IPL 2023: ಐಪಿಎಲ್ ಮಿನಿ ಹರಾಜಿನಲ್ಲಿ ಆರ್‌ಸಿಬಿ ಗಮನಹರಿಸಬೇಕಾದ ಮುಖ್ಯ ಅಂಶಗಳಿವು

2023ರ ಐಪಿಎಲ್ ಆವೃತ್ತಿಗಾಗಿ ಆರ್‌ಸಿಬಿ ಉತ್ತಮ ತಂಡವನ್ನು ಹೊಂದಿದೆ. ಟ್ರೇಡಿಂಗ್‌ನಲ್ಲಿ ಜೇಸನ್ ಬೆಹ್ರೆನ್‌ಡಾರ್ಫ್ ಅವರನ್ನು ಮುಂಬೈ ತಂಡಕ್ಕೆ ಬಿಟ್ಟುಕೊಟ್ಟಿದ್ದು, ಕೇವಲ ನಾಲ್ಕು ಆಟಗಾರರನ್ನು ಮಾತ್ರ ಬಿಡುಗಡೆ ಮಾಡಿದೆ.
2022ರ ಐಪಿಎಲ್‌ನಲ್ಲಿ ಆರ್‌ಸಿಬಿ ಪ್ಲೇಆಫ್‌ಗೆ ಪ್ರವೇಶಿಸಿತ್ತು, ಅದೇ ತಂಡವನ್ನು ಈ ಬಾರಿ ಉಳಿಸಿಕೊಂಡಿದ್ದು, ಮಿನಿ ಹರಾಜಿನಲ್ಲಿ ಯಾವ ಆಟಗಾರರನ್ನು ಖರೀದಿಸುತ್ತದೆ ಎಂದು ನೋಡಬೇಕಿದೆ. ಪರ್ಸ್‌ನಲ್ಲಿ 8.75 ಕೋಟಿ ರುಪಾಯಿ ಉಳಿಸಿಕೊಂಡಿದ್ದು, ಬ್ಯಾಕಪ್ ಆಗಿ ಕೆಲವು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.
ತಂಡದಲ್ಲಿ ಎಲ್ಲಾ ವಿಭಾಗಗಳು ಸಾಕಷ್ಟು ಬಲಿಷ್ಠವಾಗಿದೆ ಎನಿಸಿದರೂ ಕೂಡ, ಟೂರ್ನಿಯಲ್ಲಿ ಗಾಯಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಹಲವು ಆಟಗಾರರನ್ನು ತಂಡದಲ್ಲಿ ಹೊಂದಲು ಬಯಸುತ್ತದೆ.
ಭವಿಷ್ಯದ ದೃಷ್ಟಿಯಿಂದ ಹಲವು ವಿಚಾರಗಳತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಗಮನ ಹರಿಸಬೇಕಿದೆ. ಈ ಬಾರಿಯ ಮಿನಿ ಹರಾಜಿನಲ್ಲಿ ಈ ಬಾರಿ ಆರ್‌ಸಿಬಿ ಈ ವಿಚಾರಗಳನ್ನು ಪರಿಗಣಿಸಬೇಕಿದೆ. ಈ ಮೂರು ವಿಷಯಗಳಲ್ಲಿ ಈ ಬಾರಿಯ ಹರಾಜಿನಲ್ಲಿ ಗಮನ ಹರಿಸಬೇಕಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಸ್ಥಳೀಯ ಆಟಗಾರರ ಕಡೆಗಣಿಸಿರುವ ಆರ್‌ಸಿಬಿ
ಐಪಿಎಲ್ ಆರಂಭದ ಸೀಸನ್‌ಗಳನ್ನು ಆರ್‌ಸಿಬಿ ತಂಡದಲ್ಲಿ ಕರ್ನಾಟಕದ ಆಟಗಾರರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿತ್ತು. ಆದರೆ ನಂತರದ ದಿನಗಳಲ್ಲಿ ತಂಡದಲ್ಲಿ ಕರ್ನಾಟಕದ ಆಟಗಾರರಿಗೆ ಮನ್ನಣೆ ನೀಡುವುದು ಕಡಿಮೆ ಆಯಿತು. ಆರ್‌ಸಿಬಿ ತಂಡದ ಭಾಗವಾಗಿದ್ದ ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಈಗ ಬೇರೆ ತಂಡಗಳಲ್ಲಿ ಆಡುತ್ತಿದ್ದಾರೆ.
ಕಳೆದ ಸೀಸನ್‌ನಲ್ಲಿ ಲುವ್ನಿತ್ ಸಿಸೋಡಿಯಾ ಮತ್ತು ಅನೀಶ್ವರ್ ಗೌತಮ್ ಅವರನ್ನು ಆರ್‌ಸಿಬಿ ಕೈಬಿಟ್ಟಿತು. ಸಿಸೋಡಿಯಾ ಗಾಯದಿಂದ ಹಿಂದಿನ ಆವೃತ್ತಿಯಲ್ಲಿ ಅರ್ಧದಲ್ಲೇ ಹೊರಬಿದ್ದರು. ರಜತ್ ಪಾಟಿದಾರ್ ಅವರನ್ನು ಸಿಸೋಡಿಯಾ ಬದಲಿಗೆ ತಂಡಕ್ಕೆ ಸೇರಿಸಿಕೊಳ್ಳಲಾಯಿತು.
ಆರ್‌ಸಿಬಿ ತಂಡಕ್ಕೆ ಸ್ಥಳೀಯವಾಗಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಸ್ಥಳೀಯ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವುದರಿಂದ ತಂಡಕ್ಕೆ ಮತ್ತಷ್ಟು ಬೆಂಬಲ ಸಿಗುತ್ತದೆ. ಮಯಾಂಕ್ ಅಗರ್ವಾಲ್ ಬೆಂಗಳೂರು ತಂಡಕ್ಕೆ ಸೇರುವ ಸುದ್ದಿಗಳಿದ್ದರೂ, ಹರಾಜಿನ ದಿನವೇ ಅದು ತಿಳಿಯಲಿದೆ. ಪೇಸ್-ಬೌಲಿಂಗ್ ಮತ್ತು ಆಲ್-ರೌಂಡರ್ ವಿಭಾಗಗಳಲ್ಲಿ ಕೆಲವು ಯುವ ಕ್ರಿಕೆಟಿಗರನ್ನು ತಂಡಕ್ಕೆ ಸೇರಿಸಿಕೊಳ್ಳುವ ಯೋಜನೆಯಲ್ಲಿರಬಹುದು.
ಇಶಾನ್ ಕಿಶನ್ ದ್ವಿಶತಕದ ಬಗ್ಗೆ ದಿಗ್ಗಜ ಸಚಿನ್ ತೆಂಡೂಲ್ಕರ್ ಕೊಟ್ಟ ಪ್ರತಿಕ್ರಿಯೆ ಇದು

ಪ್ರಮುಖ ಆಟಗಾರರಿಗೆ ಬದಲೀ ಆಟಗಾರರು ಬೇಕು
2022ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಪ್ರಮುಖ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತ್ತು. ಆದರೆ, ತಂಡದಲ್ಲಿ ಇರುವ ಪ್ರಮುಖ ಆಟಗಾರರು ಹಿರಿಯರಾಗಿದ್ದು ಹೆಚ್ಚಿನ ವರ್ಷಗಳು ಕ್ರಿಕೆಟ್ ಆಡುವುದು ಕಷ್ಟ.
ಆರ್‌ಸಿಬಿಯು ವನಿಂದು ಹಸರಂಗಾ ಅವರಂತಹ ಯುವ ಸೂಪರ್‌ಸ್ಟಾರ್‌ಗಳನ್ನು ಹೊಂದಿದೆ, ಆದರೆ ಅವರ ಹೆಚ್ಚಿನ ಬ್ಯಾಟಿಂಗ್ ಪಡೆಯಲ್ಲಿ ವಯಸ್ಸಾದ ಆಟಗಾರರು ಇದ್ದಾರೆ. ಫಾಫ್ ಡು ಪ್ಲೆಸಿಸ್ ಈಗಾಗಲೇ 38 ವರ್ಷದವರಾಗಿದ್ದು ಇನ್ನು ಒಂದು ಅಥವಾ ಎರಡು ವರ್ಷಗಳಷ್ಟೇ ಕ್ರಿಕೆಟ್ ಆಡುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಕೂಡ ಇನ್ನು ಮೂರರಿಂದ ನಾಲ್ಕು ವರ್ಷ ಕ್ರಿಕೆಟ್ ಆಡಿದರೆ ಹೆಚ್ಚು.
ಗ್ಲೆನ್ ಮ್ಯಾಕ್ಸ್‌ವೆಲ್‌ಗೆ 34 ವರ್ಷ, ಕಳೆದ ಐಪಿಎಲ್‌ನ ಹೀರೋ ದಿನೇಶ್ ಕಾರ್ತಿಕ್‌ಗೆ 37 ವರ್ಷ, ಏಕೈಕ ಬ್ಯಾಕಪ್ ಸ್ಪಿನ್ನರ್ ಕರ್ಣ್ ಶರ್ಮಾ 35 ವರ್ಷ ವಯಸ್ಸಿನವರಾಗಿದ್ದಾರೆ. ಸಿಎಸ್‌ಕೆ ತಂಡ ಕೂಡ ಹಿರಿಯ ಆಟಗಾರರನ್ನು ಹೊಂದುವ ಮೂಲಕ ಟೀಕೆಗೆ ಒಳಗಾಗಿತ್ತು. ಆರ್‌ಸಿಬಿ ಕೂಡ ಈಗ ಅದೇ ಹಾದಿಯಲ್ಲಿದ್ದು, ಯುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಿದೆ.

ಹಸರಂಗ, ಹೇಜಲ್‌ವುಡ್‌ಗೆ ಬದಲೀ ಆಟಗಾರರು
2022ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಪ್ರಮುಖ ಬೌಲಿಂಗ್ ಶಕ್ತಿಯಾಗಿದ್ದು ವನಿಂದು ಹಸರಂಗಾ ಮತ್ತು ಜೋಶ್ ಹೇಜಲ್‌ವುಡ್. ಇವರಿಬ್ಬರೂ ಯಶಸ್ವೀ ಬೌಲರ್ ಎನಿಸಿಕೊಂಡಿದ್ದರು. ಈ ಜೋಡಿ ಕಳೆದ ಸೀಸನ್‌ನಲ್ಲಿ ಒಟ್ಟು 46 ವಿಕೆಟ್ ಪಡೆದು ಮಿಂಚಿದ್ದರು.
2023 ರ ಐಪಿಎಲ್‌ನಲ್ಲಿ ಕೂಡ ಈ ಜೋಡಿ ಉತ್ತಮ ಪ್ರದರ್ಶನ ಮುಂದುವರೆಸುವ ಸಾಧ್ಯತೆ ಇದೆ. ಆದರೆ, ಇವರಿಬ್ಬರಲ್ಲಿ ಯಾರಾದರೂ ಗಾಯಗೊಂಡರೆ ಉತ್ತಮವಾದ ಬದಲೀ ಆಟಗಾರರು ತಂಡದಲ್ಲಿ ಇಲ್ಲ. ಕರಣ್ ಶರ್ಮಾ ಹಿರಿಯ ಆಟಗಾರರಾಗಿದ್ದು ಅವರ ಫೀಲ್ಡಿಂಗ್ ಕಳಪೆಯಾಗಿದೆ. ಹೇಜಲ್‌ವುಡ್ ಬದಲಿಗೆ ಡೇವಿಡ್ ವಿಲ್ಲೇ ಅವರನ್ನು ಪರಿಗಣಿಸಬಹುದಾದರೂ, ಹೇಜಲ್‌ವುಡ್ ರೀತಿ ವಿಶೇಷ ಬೌಲರ್ ಬೇಕಾಗಿದೆ.
ಈ ಬಾರಿಯ ಮಿನಿ ಹರಾಜಿನಲ್ಲಿ ಇವರಿಬ್ಬರಿಗೆ ಬ್ಯಾಕ್ ಅಪ್ ಆಗಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ಬೆಂಚ್ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications