IPL 2023: ಐಪಿಎಲ್‌ಗಾಗಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದ ಕಿವೀಸ್‌ನ ಈ ಆಟಗಾರರು

ಇದೇ ಮಾರ್ಚ್ 31ರಂದು ಪ್ರಾರಂಭವಾಗುವ 16ನೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಗೆ ಮುಂಚಿತವಾಗಿ ಭಾರತಕ್ಕೆ ಪ್ರಯಾಣಿಸಲು ತನ್ನ ನಾಲ್ವರು ಆಟಗಾರರಿಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಅನುಮತಿ ನೀಡಿದೆ.
ನ್ಯೂಜಿಲೆಂಡ್ ಏಕದಿನ ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ ನಾಲ್ವರು ಆಟಗಾರರು ಮಾರ್ಚ್ 25ರಿಂದ ಶ್ರೀಲಂಕಾ ವಿರುದ್ಧ ಆರಂಭವಾಗುವ ಏಕದಿನ ಸರಣಿಯಲ್ಲಿ ಭಾಗವಹಿಸುವಹಿಸದೆ, ಭಾರತಕ್ಕೆ ಬಂದಿಳಿಯಲಿದ್ದಾರೆ.
ನಾಲ್ವರು ಆಟಗಾರರಾದ ಕೇನ್ ವಿಲಿಯಮ್ಸನ್ (ಗುಜರಾತ್ ಟೈಟನ್ಸ್), ಟಿಮ್ ಸೌಥಿ (ಕೋಲ್ಕತ್ತಾ ನೈಟ್ ರೈಡರ್ಸ್), ಡೆವೊನ್ ಕಾನ್ವೆ ಮತ್ತು ಮಿಚೆಲ್ ಸ್ಯಾಂಟ್ನರ್ (ಚೆನ್ನೈ ಸೂಪರ್ ಕಿಂಗ್ಸ್) ತಂಡದ ಶಿಬಿರವನ್ನು ಕೂಡಿಕೊಳ್ಳಲಿದ್ದಾರೆ.

ಮಾರ್ಚ್ 17ರಿಂದ ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ನಂತರ ನಾಲ್ವರು ಆಟಗಾರರು ಭಾರತಕ್ಕೆ ಪ್ರಯಾಣಿಸಲಿದ್ದಾರೆ.
ಇನ್ನು ಮಾರ್ಚ್ 25ರಂದು ಆಕ್ಲೆಂಡ್‌ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದ ನಂತರ ಮತ್ತೆ ಮೂವರು ನ್ಯೂಜಿಲೆಂಡ್ ಆಟಗಾರರಾದ ಫಿನ್ ಅಲೆನ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು), ಲಾಕಿ ಫರ್ಗುಸನ್ (ಕೆಕೆಆರ್) ಮತ್ತು ಗ್ಲೆನ್ ಫಿಲಿಪ್ಸ್ (ಸನ್‌ರೈಸರ್ಸ್ ಹೈದರಾಬಾದ್) ಸಹ ಏಕದಿನ ತಂಡದಿಂದ ಬಿಡುಗಡೆಯಾಗಿ, ತಮ್ಮ ಐಪಿಎಲ್ ಫ್ರಾಂಚೈಸಿ ತಂಡಗಳನ್ನು ಸೇರಿಕೊಳ್ಳಲಿದ್ದಾರೆ.
ಮಾರ್ಚ್ 28ರಂದು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದ ಮೊದಲು ಫಿನ್ ಅಲೆನ್, ಲಾಕಿ ಫರ್ಗುಸನ್ ಮತ್ತು ಗ್ಲೆನ್ ಫಿಲಿಪ್ಸ್ ಆಟಗಾರರಿಗೆ ಬದಲಿಯಾಗಿ ಮಾರ್ಕ್ ಚಾಪ್‌ಮನ್, ಬೆನ್ ಲಿಸ್ಟರ್ ಮತ್ತು ಹೆನ್ರಿ ನಿಕೋಲ್ಸ್ ನ್ಯೂಜಿಲೆಂಡ್ ಏಕದಿನ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಇದೇ ವೇಳೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟಾಮ್ ಬ್ಲಂಡೆಲ್ ಮತ್ತು ವಿಲ್ ಯಂಗ್ ಹಲವು ದಿನಗಳ ಬಳಿಕ ಅಂತಾರಾಷ್ಟ್ರೀಯ ವೈಟ್‌ಬಾಲ್ ಕ್ರಿಕೆಟ್‌ಗೆ ಮರಳಲಿದ್ದಾರೆ.
ಟಾಮ್ ಬ್ಲಂಡೆಲ್ ಕೊನೆಯ ಬಾರಿಗೆ 2020ರಲ್ಲಿ ಏಕದಿನ ಪಂದ್ಯವನ್ನು ಆಡಿದ್ದರು. ಇನ್ನು ವಿಲ್ ಯಂಗ್ ತಮ್ಮ ಕೊನೆಯ ಬಾರಿಯ ಏಕದಿನ ಪಂದ್ಯವನ್ನು ಜುಲೈ 2022ರಲ್ಲಿ ಆಡಿದ್ದರು. ಖಾಯಂ ನಾಯಕ ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಟಾಮ್ ಲ್ಯಾಥಮ್ ಏಕದಿನ ಸರಣಿಯ ಹಂಗಾಮಿ ನಾಯಕನಾಗಿ ಆಯ್ಕೆಯಾಗಿದ್ದಾರೆ.
ನ್ಯೂಜಿಲೆಂಡ್ ಏಕದಿನ ತಂಡ
ಟಾಮ್ ಲಾಥಮ್ (ನಾಯಕ), ಟಾಮ್ ಬ್ಲಂಡೆಲ್, ಚಾಡ್ ಬೋವ್ಸ್, ಮೈಕೆಲ್ ಬ್ರೇಸ್ವೆಲ್, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್ನರ್, ವಿಲ್ ಯಂಗ್ (ಮೂರು ಪಂದ್ಯಗಳಿಗೆ ಲಭ್ಯ), ಗ್ಲೆನ್ ಫಿಲಿಪ್ಸ್, ಲಾಕಿ ಫರ್ಗುಸನ್, ಫಿನ್ ಅಲೆನ್ (ಮೊದಲ ಪಂದ್ಯಕ್ಕೆ ಮಾತ್ರ), ಹೆನ್ರಿ ನಿಕೋಲ್ಸ್ , ಬೆನ್ ಲಿಸ್ಟರ್, ಮಾರ್ಕ್ ಚಾಪ್ಮನ್ (2 ಮತ್ತು 3ನೇ ಏಕದಿನ ಪಂದ್ಯಗಳಿಗೆ ಲಭ್ಯ).
ಐಪಿಎಲ್ 2023; ಮಾರ್ಚ್ 31ರಿಂದ ಅದ್ಧೂರಿ ಪ್ರಾರಂಭ
2023ರ 16ನೇ ಐಪಿಎಲ್ ಪಂದ್ಯಾವಳಿ ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಚಾಲನೆ ದೊರೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications